Tatsama Tadbhava : ಬಹುಮುಖ ಪ್ರತಿಭೆ ಕನ್ನಡ ಅಲ್ಲದೆ ಬೇರೆ ಭಾಷೆಗಳ ಚಿತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಬಾಲಾಜಿ ಮನೋಹರ್ ಹೀಗ  "ತತ್ಸಮ ತದ್ಭವ" ಚಿತ್ರದಲ್ಲಿ ಸಿದ್ದಾರ್ಥ್ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ.... ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಲು ಸಂತೋಷವಾಗುತ್ತಿದೆ.


COMMERCIAL BREAK
SCROLL TO CONTINUE READING

ತಮ್ಮ ಕಥೆಯನ್ನು ತೆರೆ ಮೇಲೆ ತರಲು ಇರಬೇಕಾದ ಧೈರ್ಯ ಮತ್ತು ಅದನ್ನು ಪ್ರಸ್ತುತಪಡಿಸುವ ಕಲೆ ಈ ಸಿನೆಮಾದ ಯುವ ನಿರ್ದೇಶಕರಿಗಿದೆ. ಒಟ್ಟಿನಲ್ಲಿ ಈ ಪಾತ್ರ ಸಂತಸ ತಂದಿದೆ ಅಂತ ಬಾಲಾಜಿ ಮನೋಹರ್ ಅವರು ಹೇಳಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಮೇಘನರಾಜ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ, ಚಿತ್ರತಂಡ ಈಗ ಬಾಲಾಜಿ ಮನೋಹರ್ ಅವರ ಪಾತ್ರ ಪರಿಚಯದ ಪೋಸ್ಟರ್ ಬಿಡುಗಡೆ ಮಾಡಿದೆ.


ಇದನ್ನೂ ಓದಿ-ನಟನೆಗೂ ಸೈ ನಿರ್ದೇಶನಕ್ಕೂ ಸೈ ಅನ್ನೋ ಕಲಾವಿದರಿವರು..!


ಮೇಘನಾ ಮತ್ತೆ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅವರು ವಿಶಾಲ್ ಅತ್ರೇಯ ಅವರ ತತ್ಸಮ ತದ್ಭವ ಎಂಬ ತನಿಖಾ ಕ್ರೈಮ್ ಥ್ರಿಲ್ಲರ್‌ ಸಿನಿಮಾವಾಗಿದೆ.  ಚಿತ್ರೀಕರಣ ಪೂರ್ಣಗೊಂಡ ನಂತರನಿರ್ಮಾಪಕರು ಚಿತ್ರದ ಶೀರ್ಷಿಕೆಯ ಜೊತೆಗೆ ಫಸ್ಟ್ ಲುಕ್ ಬಹಿರಂಗಪಡಿಸಿದ್ದಾರೆ. ಕುತೂಹಲಕಾರಿಯಾಗಿ, ಶೀರ್ಷಿಕೆ ಪೋಸ್ಟರ್ ಅನ್ನು ನೂರಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಏಕಕಾಲದಲ್ಲಿ ಅನಾವರಣಗೊಳಿಸಿದ್ದಾರೆ. 


ಅಷ್ಟೇ ಅಲ್ಲ ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡಪರ ಸಂಘಟನೆಗಳೂ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿವೆ. ಹ್ಯಾಪಿ ನ್ಯೂ ಇಯರ್, ಪ್ರೆಂಚ್ ಬಿರಿಯಾನಿ ಸಿನಿಮಾಗಳನ್ನ ನಿರ್ದೇಶನ ಪನ್ನಗಭರಣ ಅವರು  'ತತ್ಸಮ ತದ್ಭವ' ಚಿತ್ರಕ್ಕೆ ಹಣ ಹಾಕಿದ್ದಾರೆ. ಇವರ ಜೊತೆಗೆ ಸ್ಫೂರ್ತಿ ಅನಿಲ್ ಕೂಡ ಹಣ ಹೂಡಿದ್ದಾರೆ.  ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣವಿದೆ.


ಇದನ್ನೂ ಓದಿ-D Boss: ದರ್ಶನ್  ಮಗ  ಹಠ ಮಾಡಿ ತಂದೆಯನ್ನ ಸ್ಕೂಲ್ ಗೆ ಕರ್ಕೊಂಡು ಹೋಗಿದ್ದು ಯಾಕೆ...?‌


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.