ಪತ್ರಿಕೋದ್ಯಮದಲ್ಲಿ ಡಿಗ್ರಿ ಪಡೆದ ಕಾವ್ಯಶ್ರೀ ಗೌಡ ನಟಿಯಾಗಲು ಕಾರಣವೇನು?
Kavyashree Gowda : ಬಿಗ್ ಬಾಸ್ ಸ್ಪರ್ಧಿ ಕಾವ್ಯಶ್ರೀ ಗೌಡ ಅವರ ತಂದೆ-ತಾಯಿ ತಮ್ಮ ಮಗಳು ವರದಿಗಾರತಿ ಆಗಬೇಕು ಅಂತಾ ಕನಸು ಕಂಡಿದ್ರು. ಆದ್ರೆ ಕಾವ್ಯಶ್ರೀ ಕಾಲಿಟ್ಟಿದ್ದು ನಟನಾ ಕ್ಷೇತ್ರಕ್ಕೆ..ಬಿಗ್ ಬಾಸ್ ಸೀಸನ್ 9 ಎಂಡ್ ಆದ ನಂತರ ಸಿನಿಮಾಗೆ ಎಂಟ್ರಿ ಕೊಡ್ತಾರೆ ಎಂಬ ಗಾಸಿಪ್ ಕೇಳಿ ಬರ್ತಾ ಇದೆ. ಹೌದು ಕಿರುತೆರೆಯಲ್ಲಿ ಮೋಡಿ ಮಾಡಿರುವ ಈ ಚೆಲುವೆ ಸಿನಿಮಾಗಳಲ್ಲು ಕಾಣಿಸಿಕೊಳ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳದ್ದು.
Kannada Serial : ಸಣ್ಣ ವಯಸ್ಸಿನಿಂದಲು ನಟನೆಯಲ್ಲಿ ಆಸಕ್ತಿ ಹೊಂದಿದ್ದ ಕಾವ್ಯ ಮಂಗಳಗೌರಿಯಾಗಿ ಕಿರುತೆರೆ ಅಂಗಳದಲ್ಲಿ ಮೋಡಿ ಮಾಡಿದ ಕಾವ್ಯಶ್ರೀ ಗೌಡ ಇದೀಗ ಹೊಸ ಅವತಾರದ ಮೂಲಕ ಸುದ್ದಿಯಲ್ಲಿದ್ದಾರೆ. "ಮಂಗಳ ಗೌರಿ ಮದುವೆ" ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಕುಟುಂಬದ ಹೆಣ್ಣುಮಗಳಾಗಿ ಅಭಿನಯಿಸಿದ ಕಾವ್ಯಶ್ರೀ ಗೌಡ ಇದೀಗ ಮಾಡರ್ನ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹವಾ ಸೃಷ್ಟಿ ಮಾಡುತ್ತಿದ್ದಾರೆ.
ಹಾಟ್ ಅವತಾರದ ಮೂಲಕ ಪಡ್ಡೆ ಹುಡುಗರ ದಿಲ್ ಕದ್ದಿರುವ ಕಾವ್ಯಶ್ರೀ ಅವರ ಹೊಸ ಅವತಾರವನ್ನು ಕಂಡರೆ ಇವರೇನಾ 'ಮಂಗಳಗೌರಿ'ಯಾಗಿ ನಟಿಸುತ್ತಿದ್ದವರು ಎಂದು ಆಶ್ಚರ್ಯ ಪಡುವುದರಲ್ಲಿ ಸಂಶಯವಿಲ್ಲ. ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾವ್ಯಶ್ರೀ ನಾಯಕಿಯಾಗಿ ಬಡ್ತಿ ಪಡೆದಿದ್ದು 'ಮಂಗಳ ಗೌರಿ ಮದುವೆ' ಧಾರಾವಾಹಿಯ ಮೂಲಕ , ಎರಡನೇ ನಾಯಕಿಯಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬುವ ಅವಕಾಶ ಪಡೆದುಕೊಂಡ ಕಾವ್ಯಶ್ರೀ ಮುಂದೆ ಕರುನಾಡಿನ ಮನೆಮಗಳಾಗಿ ಗುರುತಿಸಿಕೊಂಡ ಬೆಡಗಿ.
ಇದನ್ನೂ ಓದಿ-Anushka Sharma Birthday: 3 Idiots ನಲ್ಲಿ ಕರೀನಾ ಪಾತ್ರಕ್ಕೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್!
ಸಣ್ಣ ವಯಸ್ಸಿನಿಂದಲೂ ಬಣ್ಣದ ಜಗತ್ತಿನತ್ತ ವಿಶೇಷ ಒಲವು ಹೊಂದಿದ್ದ ಕಾವ್ಯಶ್ರೀ ಕಿರುತೆರೆ ಅಥವಾ ಹಿರಿತೆರೆಯಲ್ಲಿ ಅಭಿನಯಿಸಬೇಕು ಎಂದು ಬಯಸಿದ್ದರು. ಮನೆಯಲ್ಲಿ ಸಾಂಪ್ರದಾಯಿಕ ವಾತಾವರಣ ಇದ್ದ ಕಾರಣ ನಟನೆ ಎಂದಾಗ ಮನೆಯವರು ಖಡಾಖಂಡಿತವಾಗಿ ಬೇಡ ಎಂದೇ ಹೇಳಿದ್ದರು. ಪತ್ರಿಕೋದ್ಯಮ ಪದವೀಧರೆಯಾಗಿರುವ ಕಾವ್ಯಶ್ರೀಗೆ ನಟನೆಯ ನಂಟು ಬಿಡಲು ಸಾಧ್ಯವಾಗದ ಕಾರಣ ನಟಿಯಾಗದಿದ್ದರೂ ಪರವಾಗಿಲ್ಲ, ನಿರೂಪಕಿಯಾಗಿ ಕಾಣಿಸಬೇಕು ಎಂಬ ಸಂಕಲ್ಪ ಮಾಡಿದರು.
ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟ ಕಾವ್ಯಶ್ರೀ ಬಿಡುವಿನ ಸಮಯದಲ್ಲಿ ಆಡಿಶನ್‌ಗೆ ಹೋಗುವುದನ್ನು ತಪ್ಪಿಸಲಿಲ್ಲ. ಕಲರ್ಸ್ ಸೂಪರ್‌ನಲ್ಲಿ ರಾಮ್ ಜೀ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾವ್ಯಶ್ರೀ ಕಾಲಿಟ್ಟಿದ್ದರು. ಬಳಿಕ ರಾಮ್ ಜೀ ನಿರ್ದೇಶನದ 'ಮಂಗಳ ಗೌರಿ ಮದುವೆ' ಧಾರಾವಾಯಲ್ಲಿ ನಾಯಕಿ ಮಂಗಳಗೌರಿಯಾಗಿ ನಟಿಸಿದ್ದಲ್ಲದೇ ಕರ್ನಾಟಕದಾದ್ಯಂತ ಫೇಮಸ್ಸು ಆಗಿ ಬಿಟ್ಟರು.
ಇದನ್ನೂ ಓದಿ-ಟಾಪ್ ನಟಿ ಮಾತ್ರವಲ್ಲ.. ಸ್ಟಾರ್ ಕ್ರಿಕೆಟಿಗನ ಪತ್ನಿ ಈ ಫೋಟೋದಲ್ಲಿರುವ ಪುಟ್ಟ ಬಾಲಕಿ
ಮಂಗಳ ಗೌರಿ ಧಾರಾವಾಹಿ ಮುಗಿದ ನಂತರ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕಾವ್ಯಶ್ರೀ, ದೊಡ್ಮನೆಯಲ್ಲಿ ಇದ್ದಷ್ಟು ದಿನ ತನ್ನ ಮಾತು, ನಡವಳಿಕೆ ಹಾಗೂ ಆಟದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ ನನ್ನ ಫೇವರಿಟ್.
ಒಂದು ದಿನವೂ ತಪ್ಪದೇ ನೋಡುತ್ತಿದ್ದೆ. ನಂತರ ಅದೇ ಧಾರಾವಾಹಿಯ ಮುಂದುವರಿದ ಭಾಗದಲ್ಲಿ ಬಣ್ಣ ಹಚ್ಚುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟವೇ ಸರಿ. ಯಾಕಂದ್ರೆ ಇಂತಹ ಅವಾಕಾಶ ಎಲ್ಲಿರಿಗೂ ಸಿಗುವುದಿಲ್ಲ. ಅನುಬಂಧ ಅವಾರ್ಡ್ಸ್‌ನಲ್ಲಿ ನಾನು ಪಡೆದ ಮನೆ ಮೆಚ್ಚಿದ ಮಗಳು ಪ್ರಶಸ್ತಿಯನ್ನು ಕೂಡಾ ನಾನು ಪಡೆದಿದ್ದು ಕಿರುತೆರೆ ವೀಕ್ಷಕರು ನನ್ನನ್ನು ಸ್ವೀಕರಿಸಿದ್ದಾರೆ ಎಂಬುವುದಕ್ಕೆ ಇದೇ ಸಾಕ್ಷಿ ಎಂದು ಹೇಳುತ್ತಾರೆ ಕಾವ್ಯಶ್ರೀ.
ಆರಂಭದ ದಿನಗಳಲ್ಲಿ ನಿಜವಾಗಿಯೂ ನಟಿಸುವುದು ಕಷ್ಟವಾಯಿತು ಎಂದು ಹೇಳುವ ಕಾವ್ಯಶ್ರೀ ಗೌಡ ನಾನು ಇಂದು ಪರಿಪೂರ್ಣ ನಿಟಿಯಾಗಿದ್ದೇನೆ ಎಂದರೆ ಅದಕ್ಕೆ ನಿರ್ದೇಶಕ ಕೆ.ಎಸ್. ರಾಮ್ ಜೀ ಹಾಗು ಹಿರಿಯ ಕಲಾವಿದರುಗಳ ಪ್ರೋತ್ಸಾಹವೇ ಕಾರಣ. ಅವರು ನನ್ನನ್ನು ತಿದ್ದಿದ ಕಾರಣ ನಾನಿಂದು ಮಂಗಳ ಗೌರಿಯಾಗಿ ಗುರುತಿಸಲು ಕಾರಣವಾಯಿತು ಎನ್ನುತ್ತಾರೆ. ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿರುವ ಕಾವ್ಯಶ್ರೀಗೆ ಅವಕಾಶ ಸಿಕ್ಕಿದ್ದಲ್ಲಿ ಹಿರಿತೆರೆಗೆ ಹಾರಲು ತಯಾರಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.