ಮುಂಬೈ: ಶೂಟಿಂಗ್ ವೇಳೆ ಹಿಂದಿ ನಟ ಅಧ್ವಿಕ್ ಮಹಾಜನ್(Adhvik Mahajan) ವ್ಹೀಲ್ ಚೇರ್ ಸ್ಟಂಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ನಟನೇ ತಮ್ಮ ಇನ್​​ಸ್ಟಾಗ್ರಾಮ್ನಲ್ಲಿ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಅಧ್ವೀಕ್ ಅವರು ಡೈಲಿ ಸೋಪ್ ‘ತೇರಿ ಮೇರಿ ಇಕ್ ಜಿಂದ್ರಿ’ಯಲ್ಲಿ ಜೋಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್(Shooting) ವೇಳೆ ತೆರೆಯ ಹಿಂದೆ ನಡಿದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವ್ಹೀಲ್ ಚೇರ್ ಸ್ಟಂಟ್ ಮಾಡಲು ಹೋಗಿ ನಟ ಮಾಡಿಕೊಂಡಿರುವ ಯಡವಟ್ಟು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


ಇದನ್ನೂ ಓದಿ: Sandalwood Queen: ಮತ್ತೆ ಚಿತ್ರರಂಗಕ್ಕೆ ಬರ್ತಾರಾ ಮೋಹಕ ತಾರೆ ರಮ್ಯಾ..?


ಈ ವಿಡಿಯೋದಲ್ಲಿ ಅಧ್ವಿಕ್ ನಡುರೋಡಿನ ಮಧ್ಯೆ ವ್ಹೀಲ್ ಚೇರ್(Wheelchair stunt) ಮೇಲೆ ಕುಳಿತಿರುತ್ತಾರೆ. ಕಾರೊಂದು ಅವರ ಹತ್ತಿರವೇ ಬರುತ್ತಿರುತ್ತದೆ. ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬರು ಅಧ್ವಿಕ್ ಕುಳಿತಿದ್ದ ವ್ಹೀಲ್ ಚೇರನ್ನು ಮುಂದಕ್ಕೆ ತಳ್ಳುತ್ತಾರೆ. ಈ ವೇಳೆ ಆಯತಪ್ಪಿದ ನಟ ಸಮತೋಲನ ಕಳೆದುಕೊಂಡು ಹಿಂದಕ್ಕೆ ಬಿಳುತ್ತಾರೆ. ವ್ಹೀಲ್ ಚೇರ್ ಯಡವಟ್ಟಿನಿಂದ ಅಧ್ವೀಕ್ ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಸ್ವಲ್ಪ ಎಚ್ಚರ ತಪ್ಪಿದ್ದರೂ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿತ್ತು. ಏಕೆಂದರೆ ನಟ ವ್ಹೀಲ್ ಚೇರ್ ಮೇಲಿಂದ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಹಿಂದಕ್ಕೆ ಉರುಳಿದ್ದಾರೆ.


Special Birthday Teaser: ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಟೀಸರ್ ರಿಲೀಸ್


ಕೆಲವು ಬಾರಿ ಎಷ್ಟೇ ಮುಂಜಾಗೃತಾ ಕ್ರಮ ವಹಿಸಿದರೂ ಯಡವಟ್ಟುಗಳಾಗಿಬಿಡುತ್ತವೆ. ಸ್ಟಂಟ್ ಮಾಡುವ ವೇಳೆ ಅನೇಕ ಬಾರಿ ನಟರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕೆಲವರು ಪ್ರಾಣಾಪಾಯದಿಂದಲೂ ಪಾರಾಗಿರುವ ಘಟನೆ ಅನೇಕ ನಡೆದಿವೆ. ಅಮನ್ ದೀಪ್ ಸಿಧು ಕೂಟ ನಟಿಸಿರುವ ‘ತೇರಿ ಮೇರಿ ಇಕ್ ಜಿಂದ್ರಿ’ ಕಾರ್ಯಕ್ರಮವು ಜೀ ಟಿವಿ(Zee TV)ಯಲ್ಲಿ ಪ್ರಸಾರವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.