Shraddha Kapoor Boyfriend Rahul Mody: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ನಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಗೆಳೆಯ ರಾಹುಲ್ ಮೋದಿ ಅವರೊಂದಿಗಿನ ಸಂಬಂಧವನ್ನು ಖಚಿತಪಡಿಸಿದ್ದಾರೆ.. ಶ್ರದ್ಧಾ ಅವರ ಈ ಪೋಸ್ಟ್ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯೊಂದು ಶುರುವಾಗಿದೆ.. ಕೆಲವು ಅಭಿಮಾನಿಗಳು ನಟಿಯನ್ನು ಅಭಿನಂದಿಸುತ್ತಿದ್ದರೆ, ಇನ್ನುಳಿದ ಅಭಿಮಾನಿಗಳು ರಾಹುಲ್ ಮೋದಿ ಯಾರು ಮತ್ತು ಅವರಿಗೆ ಉದ್ಯಮದೊಂದಿಗೆ ಏನು ಸಂಬಂಧ ಎಂದು ತಿಳಿಯಲು ಬಯಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ರಾಹುಲ್ ಮೋದಿ ಯಾರು? 
ರಾಹುಲ್ ಮೋದಿ ಒಬ್ಬ ಪ್ರಸಿದ್ಧ ಬರಹಗಾರ ಮತ್ತು ಸಹಾಯಕ ನಿರ್ದೇಶಕ.. ಅವರು 'ತೂ ಜೂಥಿ ಮೈನ್ ಮಕ್ಕರ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇದರಲ್ಲಿ ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ, ಅವರು ಕಾರ್ತಿಕ್ ಆರ್ಯನ್ ಅವರ 'ಪ್ಯಾರ್ ಕಾ ಪಂಚನಾಮಾ 2' ಮತ್ತು 'ಸೋನು ಕೆ ಟಿಟು ಕಿ ಸ್ವೀಟಿ' ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 


ಇದನ್ನೂ ಓದಿ-ಆ ಭಾಗವನ್ನು ಬಾಡಿಗಾರ್ಡ್ ಅಸಭ್ಯವಾಗಿ ಮುಟ್ಟಿದ..! ಕಹಿ ಅನುಭವ ಹಂಚಿಕೊಂಡ ಸ್ಟಾರ್‌ ನಟಿ


ರಾಹುಲ್ ಮತ್ತು ಶ್ರದ್ಧಾ ಭೇಟಿಯಾಗಿದ್ದು ಹೇಗೆ? 
ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಅವರ ಮೊದಲ ಭೇಟಿಯು ತು ಜೂಥಿ ಮೈನ್ ಮಕ್ಕರ್ ಚಿತ್ರದ ಸೆಟ್‌ನಲ್ಲಿ ನಡೆಯಿತು... ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿಗೆ ತಿರುಗಿತ್ತು. ಅವರ ಸಂಬಂಧದ ಸುದ್ದಿಗಳು ಬಹಳ ಸಮಯದಿಂದ ಬರುತ್ತಿದ್ದವು, ಆದರೂ ನಟಿ ಸಂಬಂಧವನ್ನು ದೃಢಪಡಿಸಿರಲಿಲ್ಲ... ಶ್ರದ್ಧಾ ಮತ್ತು ರಾಹುಲ್ ಮೋದಿ ಅನೇಕ ಬಾರಿ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ- Renukaswamy Murder Case: ನಾಳೆ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ & ಗ್ಯಾಂಗ್‌ ಶಿಫ್ಟ್‌!?


ಕಳೆದ ಹಲವು ದಿನಗಳಿಂದ ಶ್ರದ್ಧಾ ಕಪೂರ್ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ನಟಿ ತಾನು ರಾಹುಲ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಪೋಸ್ಟ್‌ ಮೂಲಕ ಖಚಿತಪಡಿಸಿದ್ದಾರೆ. ಶ್ರದ್ಧಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ರಾಹುಲ್ ಮೋದಿ ಜೊತೆಗಿನ ಚಿತ್ರವನ್ನು ಹಂಚಿಕೊಂಡು.."'ಹೃದಯ ಇಟ್ಕೋ, ನಿದ್ದೆ ವಾಪಸ್ ಕೊಟ್ಬಿಡು" ಎಂದು ಬರೆದುಕೊಂಡಿದ್ದಾರೆ.. 


ರಾಹುಲ್ ಮೋದಿ ಜತೆ ಶ್ರದ್ಧಾ ಕಪೂರ್ ಇರುವ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಭಿಮಾನಿಗಳು ಈ ಜೋಡಿಯನ್ನು ತುಂಬಾ ಇಷ್ಟಪಡುತ್ತಿದ್ದು, ಕಾಮೆಂಟ್‌ ಮೂಲಕ ಅಭಿನಂದಿರುತ್ತಿದ್ದಾರೆ..  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.