ದಕ್ಷಿಣ ಭಾರತದ ಶ್ರೀಮಂತ ನಟ ಯಾರು ಗೊತ್ತೆ..? ದಿಗ್ಗಜ ನಟರನ್ನೂ ಹಿಂದಿಕ್ಕಿದ ಸ್ಟಾರ್ ನಟ ಇವರು
South Indian Richest Actor: ಭಾರತೀಯ ಶ್ರೀಮಂತ ನಟ ಅಂದ ತಕ್ಷಣ ಎಲ್ಲರೂ ಕಿಂಗ್ ಖಾನ್ ಶಾರುಖ್ ಹೆಸರು ಹೇಳ್ತಾರೆ. ಆದ್ರೆ, ದಕ್ಷಿಣ ಭಾರತದ ಶ್ರೀಮಂತ ನಟ ಯಾರು ಅಂತ ನಿಮ್ಗೆ ಗೊತ್ತಾ..? ಅವರ ಹೆಸರು ಕೇಳಿದ್ರೆ ಖಂಡಿತವಾಗಿ ನೀವು ಶಾಕ್ ಆಗ್ತೀರಾ..! ಹೀರೋಗಳು ತೆಗೆದುಕೊಳ್ಳುವ ಸಂಭಾವನೆಯನ್ನು ಅವಲಂಬಿಸಿ ಅವರೇ ಶ್ರೀಮಂತ ನಟರು ಎಂದರೆ ತಪ್ಪಾಗುತ್ತೆ.. ಹಾಗಿದ್ರೆ, ಕನ್ನಡ, ತೆಲುಗು, ಮಲಯಾಳಂ, ತಮಿಳು, ಸಿನಿರಂಗದ ಆ ಶ್ರೀಮಂತ ನಟ ಯಾರು ಅಂತ ತಿಳಿಯೋಣ ಬನ್ನಿ..
Richest south indian actor : ದಕ್ಷಿಣ ಭಾರತದಲ್ಲಿ ಅನೇಕ ಸ್ಟಾರ್ ಹೀರೋಗಳಿದ್ದಾರೆ. ಅನೇಕ ಹಿರಿಯ ಸೂಪರ್ ಸ್ಟಾರ್ ನಟರು ಸಹ ಇದ್ದಾರೆ. ನಟ ಶಿವರಾಜ್ ಕುಮಾರ್, ಅಲ್ಲು ಅರ್ಜುನ್, ವಿಜಯ್, ಅಜಿತ್, ಮಹೇಶ್ ಬಾಬು, ಪವನ್ ಕಲ್ಯಾಣ್, ಎನ್‌ಟಿಆರ್, ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್ ನಟರು ಇಂದು ಗಡಿ ದಾಟಿ ವಿಶ್ವದಾದ್ಯಂತ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಶ್ರೀಮಂತಿಕೆಯಲ್ಲೂ ಮುಂದುವರೆಯುತ್ತಿದ್ದಾರೆ.
ಹೌದು.. ‘ಜೈಲರ್’ ಚಿತ್ರಕ್ಕಾಗಿ ರಜನಿಕಾಂತ್ 110 ಕೋಟಿ ರೂ. ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ರಜನಿಕಾಂತ್ ಆಸ್ತಿ ಸುಮಾರು 500 ಕೋಟಿ ರೂ. ಮತ್ತೊಂದೆಡೆ, ತಮಿಳು ಹೀರೋ ವಿಜಯ್ ತಮ್ಮ ಸಂಭಾವನೆ 130 ಕೋಟಿ ರೂಪಾಯಿ. ಕಮಲ್ ಹಾಸನ್ 'ಇಂಡಿಯನ್ 2' ಗೆ 150 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರಂತೆ.
ಇದನ್ನೂ ಓದಿ:ವಿಜಯ್ - ರಶ್ಮಿಕಾ ಲವ್ ಸ್ಟೋರಿ ರಿವೀಲ್.! ಶೀಘ್ರದಲ್ಲೇ ಮದುವೆಯಾಗೋದು ಪಕ್ಕಾ?
ಮತ್ತೊಂದೆಡೆ, ತೆಲುಗು ಹೀರೋಗಳಲ್ಲಿ ಪ್ರಭಾಸ್ 100 ಕೋಟಿ ರೂ., ಮಹೇಶ್ ಬಾಬು, ಜೂನಿಯರ್ ಎನ್.ಟಿ.ಆರ್, ಪವನ್ ಕಲ್ಯಾಣ್ 80 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಮತ್ತೊಬ್ಬ ನಾಯಕ ಇವರೆಲ್ಲರನ್ನೂ ಹಿಂದಕ್ಕೆ ತಳ್ಳಿ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಶ್ರೀಮಂತ ನಟ ಎನಿಸಿಕೊಂಡಿರುವುದು ಗಮನಾರ್ಹ.
ಅವರು ಯಾರು ಅಂತ ನೋಡೋದಾದ್ರೆ, ಅವರು ಬೇರೆ ಯಾರೂ ಅಲ್ಲ ಟಾಲಿವುಡ್ ಗ್ಲಾಮರ್ ಕಿಂಗ್ ಅಕ್ಕಿನೇನಿ ನಾಗಾರ್ಜುನ. ದಕ್ಷಿಣ ಭಾರತದ ಶ್ರೀಮಂತ ನಟನಾಗಿ, ನಾಗಾರ್ಜುನ ಮೊದಲ ಸ್ಥಾನದಲ್ಲಿ ನಿಂತಿದ್ದಾರೆ. ಶಿವರಾಜ್‌ಕುಮಾರ್, ಚಿರಂಜೀವಿ, ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವಾರು ಖ್ಯಾತ ನಟನರನ್ನು ಹಿಂದಿಕ್ಕಿದ್ದಾರೆ.
ಇದನ್ನೂ ಓದಿ: ಡಬಲ್ ಎಲಿಮಿನೇಷನ್.. ನಿನ್ನೆ ಇಶಾನಿ ಔಟ್, ಇಂದು ಹೊರ ಬರ್ತಾರಾ ಈ ಸ್ಪರ್ಧಿ?
ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಾಗಾರ್ಜುನ, ವ್ಯಾಪಾರದ ಜೊತೆಗೆ ಸಿನಿಮಾದಲ್ಲೂ ಹೆಸರು ಮಾಡಿದ್ದರು. ಅವರ ನಿವ್ವಳ ಮೌಲ್ಯ 3010 ಕೋಟಿ ರೂ. ಸದ್ಯ ನಾಯಕ, ನಿರ್ಮಾಪಕ, ಕಿರುತೆರೆ ನಿರೂಪಕ, ಬಿಜಿನೆಸ್ ಮ್ಯಾನ್ ಆಗಿ ಮಿಂಚುತ್ತಿರುವ ನಾಗಾರ್ಜುನ ಅವರ ಸಂಭಾವನೆ 9 ಕೋಟಿಯಿಂದ 15 ಕೋಟಿ.
ಇನ್ನೊಂದು ಬದಿಯಲ್ಲಿ ಅನ್ನಪೂರ್ಣ ಸ್ಟುಡಿಯೋ ಮೂಲಕ ನಾಗಾರ್ಜುನ ನಿರ್ಮಾಪಕರಾಗಿಯೂ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಇತ್ತೀಚೆಗೆ ಹಲವು ಸೂಪರ್ ಹಿಟ್ ಚಿತ್ರಗಳೂ ಬಂದಿವೆ. ಇದಲ್ಲದೇ ರಿಯಲ್ ಎಸ್ಟೇಟ್ ಜೊತೆಗೆ ಇಂಡಿಯನ್ ಸೂಪರ್ ಲೀಗ್‌ನ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡದ ಸಹ ಮಾಲೀಕರಾಗಿದ್ದಾರೆ. ಸದ್ಯ ನಾಗಾರ್ಜುನ ವಾಸವಿರುವ ಬಂಗಲೆ ಸುಮಾರು 45 ಕೋಟಿ ರೂ. ಇವರ ಬಳಿ ಖಾಸಗಿ ಜೆಟ್ ಮತ್ತು ಐಶಾರಾಮಿ ಕಾರುಗಳಿವೆ.
ಇದನ್ನೂ ಓದಿ: ಕಣ್ಸನ್ನೆ ಬೆಡಗಿಯ ಬೋಲ್ಡ್ ಅವತಾರಕ್ಕೆ ಪಡ್ಡೆಹೈಕ್ಳು ಫಿದಾ..!
ನಾಗಾರ್ಜುನ ನಂತರ ವಿಕ್ಟರಿ ವೆಂಕಟೇಶ್ ಎರಡನೇ ಸ್ಥಾನ ಪಡೆದಿದ್ದಾರೆ. ಚಿರಂಜೀವಿ ಮೂರನೇ ಸ್ಥಾನದಲ್ಲಿದ್ದಾರೆ. ವೆಂಕಟೇಶ್ ಅವರ ನಿವ್ವಳ ಮೌಲ್ಯ ರೂ.2200 ಕೋಟಿಗಳಾಗಿದ್ದರೆ, ಚಿರಂಜೀವಿ ಅವರ ಆಸ್ತಿ ರೂ.1650 ಕೋಟಿ. ರಾಮ್ ಚರಣ್ ನಾಲ್ಕನೇ ಸ್ಥಾನದಲ್ಲಿದ್ದು, ದಳಪತಿ ವಿಜಯ್, ಜೂನಿಯರ್ ಎನ್ ಟಿಆರ್, ಕಮಲ್ ಹಾಸನ್ ಮತ್ತು ಅಲ್ಲು ಅರ್ಜುನ್ ನಂತರದ ಸ್ಥಾನದಲ್ಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.