ನವದೆಹಲಿ : ಬಾಲಿವುಡ್‌ನ 'ದಬಾಂಗ್' ಸಲ್ಮಾನ್ ಖಾನ್  (Salman Khan) ಮದುವೆಗೆ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈಗ ಮದುವೆಯಾಗುವ ಉದ್ದೇಶವಿಲ್ಲ ಎನ್ನುವುದನ್ನು ಸಲ್ಮಾನ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಸಲ್ಮಾನ್ ತಮ್ಮ ಮಾತಿನಂತೆ ಮದುವೆಯಾಗದೇ ಹೋದರೆ ಅವರ ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಒಡೆಯ ಯಾರಾಗುತ್ತಾರೆ ಎನ್ನುವ ಪ್ರಶ್ನೆ ಏಳುತ್ತದೆ (Salman Khan Property).  


COMMERCIAL BREAK
SCROLL TO CONTINUE READING

ಪ್ರತಿ ಚಿತ್ರದಿಂದ ಕೋಟಿ ಕೋಟಿ  ಸಂಪಾದನೆ :
ಕಳೆದ 34 ವರ್ಷಗಳಿಂದ ಬಾಲಿವುಡ್ (Bollywood) ಅನ್ನು ಆಳುತ್ತಿರುವ ನಟ ಸಲ್ಮಾನ್ ಖಾನ್,   ರೊಮ್ಯಾನ್ಸ್ ಮತ್ತು ಆಕ್ಷನ್‌ ಚಿತ್ರಗಳ ಮೂಲಕ ಜನರ ಮನ ಗೆದ್ದಿದ್ದಾರೆ. ಸಲ್ಮಾನ್ ಅಭಿನಯದ ಪ್ರತಿಯೊಂದು ಚಿತ್ರವೂ 100 ಕೋಟಿಗೂ ಹೆಚ್ಚು ಗಳಿಕೆ ಮಾಡುತ್ತದೆ (Salman Khan films). ಹಾಗಾಗಿಯೇ ದೇಶದ ಶ್ರೀಮಂತ ನಟರ ಪಟ್ಟಿಯಲ್ಲಿ ಇವರೂ ಸೇರಿದ್ದಾರೆ. ವರದಿಗಳ ಪ್ರಕಾರ, ಅವರು 2300 ಕೋಟಿ ಮೌಲ್ಯದ ಆಸ್ತಿಯ ಒಡೆಯ.  


ಇದನ್ನೂ ಓದಿ : ಹಿಜಾಬ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರ ವಿರುದ್ಧ ಟ್ವೀಟ್.. ನಟ ಚೇತನ್ ಅರೆಸ್ಟ್


ಸಂಪೂರ್ಣ ಆಸ್ತಿ ಯಾರ ಹೆಸರಿಗೆ ? :
55 ವರ್ಷದ ಸಲ್ಮಾನ್ ಖಾನ್ (Salman Khan) ಸಂಪಾದಿಸಿರುವ ಕೋಟ್ಯಂತರ ಮೌಲ್ಯದ ಆಸ್ತಿ ಯಾರ ಪಾಲಾಗಲಿದೆ ಎಂಬ ಪ್ರಶೆಯನ್ನು ಅವರ ಅಭಿಮಾನಿಗಳು ಸಾಕಷ್ಟು ಬಾರಿ ಕೇಳುತ್ತಿರುತ್ತಾರೆ.  ಈ ಬಗ್ಗೆ ಎರಡು ವರ್ಷಗಳ ಹಿಂದೆಯೇ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಲ್ಮಾನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಮದುವೆ ಆಗಲಿ ಬಿಡಲಿ ತಮ್ಮ ನಂತರ ತನ್ನ ಆಸ್ತಿಯಲ್ಲಿ ಅರ್ಧದಷ್ಟು ಆಸ್ತಿಯನ್ನು ಟ್ರಸ್ಟ್‌ಗೆ ನೀಡಲಾಗುವುದಾಗಿ ಹೇಳಿದ್ದಾರೆ (Salman Khan interview). ಒಂದು ವೇಳೆ ಮದುವೆಯಾಗದಿದ್ದರೆ ನನ್ನ ಸಂಪೂರ್ಣ ಆಸ್ತಿಯನ್ನು ಟ್ರಸ್ಟ್‌ಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 


ಈ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ : 
ಕೆಲಸದ ಬಗ್ಗೆ ಮಾತನಾಡುವುದಾದರೆ, ಸಲ್ಮಾನ್ ಖಾನ್ ಇತ್ತೀಚೆಗೆ 'ಅಂತಿಮ್ ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಅವರು 3 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  'ಕಭಿ ಈದ್ ಕಭಿ ದೀಪಾವಳಿ', 'ಟೈಗರ್ 3' ಮತ್ತು 'ಕಿಕ್ 2' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಟೈಗರ್ 3' ಚಿತ್ರದಲ್ಲಿ ಕತ್ರಿನಾ ಕೈಫ್  ಮತ್ತು  'ಕಿಕ್ 2' ನಲ್ಲಿ  ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ. 


ಇದನ್ನೂ ಓದಿ : 47 ಮಿಲಿಯನ್ ವ್ಯೂವ್ ಪಡೆದ 'ಬಚ್ಚನ್ ಪಾಂಡೆ' ಟ್ರೈಲರ್.. ಅಕ್ಷಯ್ ಕುಮಾರ್ ಅವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.