ಬೆಂಗಳೂರು: ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ‘ಗೆಹರಾಯಿಯಾ’ ಸಿನಿಮಾ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ‘ಅಮೇಜಾನ್ ಪ್ರೈಂ’(Amezon Prime)ನಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡಿದ್ದರೆ, ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಶಕುನ್ ಭಾತ್ರ ನಿರ್ದೇಶಿಸಿರುವ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ನಟ ಸಿದ್ಧಾಂತ್ ಚತುರ್ವೇದಿ ಬೋಲ್ಡ್ ಆಗಿ ನಟಿಸಿದ್ದಾರೆ.
ಪ್ರಸ್ತುತ ಯುವಕ-ಯುವತಿಯರ ಸಂಬಂಧಗಳು ಯಾವ ಹಂತ ತಲುಪಿವೆ ಅನ್ನೋದರ ಕಥಾಹಂದರವನ್ನು ‘ಗೆಹರಾಯಿಯಾ’ ಸಿನಿಮಾ(Gehraiyaan Movie) ಹೊಂದಿದೆ. ಈ ಚಿತ್ರವನ್ನು ವೀಕ್ಷಿಸಿರುವ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್(Bhaskar Rao) ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಿರುವ ಕಾರಣ ಅವರಿಗೆ ಪೂರ್ತಿ ಸಿನಿಮಾ ನೋಡಲು ಸಾಧ‍್ಯವಾಗಿಲ್ಲವಂತೆ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹೊಸಬರ 'ಕನ್ನೇರಿ' ಪ್ರಯತ್ನಕ್ಕೆ ಕಂಚಿನ ಕಂಠದ ವಸಿಷ್ಠ ಸಿಂಹ ಸಾಥ್..!
‘ಗೆಹರಾಯಿಯಾ’(Gehraiyaan) ಚಿತ್ರ ವೀಕ್ಷಿಸಿದ ಬಳಿಕ ಟ್ವೀಟ್ ಮಾಡಿರುವ ಭಾಸ್ಕರ್ ರಾವ್, ‘ನಾವು ‘ಗೆಹರಾಯಿಯಾ’ ಸಿನಿಮಾ ನೋಡಲು ಪ್ರಾರಂಭಿಸಿದೆವು. 20 ನಿಮಿಷದ ಬಳಿಕ ಸಿನಿಮಾ ನೋಡುವುದನ್ನು ನಿಲ್ಲಿಸಿದೆವು. ನಾನು ಕೂಡ ನಟಿ ದೀಪಿಕಾ ಪಡುಕೋಣೆಯವರ ಅಭಿಮಾನಿ. ಅವರು ನಮ್ಮ ಬೆಂಗಳೂರಿನ ಹುಡುಗಿ. ಲಕ್ಷಾಂತರ ಮಹಿಳೆಯರು-ಯುವತಿಯರು ಅವರನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ವಿವಾಹೇತರ ಸಂಬಂಧ, ಸಂಸಾರ ಒಡೆಯುವುದು ಇಂಥದ್ದನ್ನೆಲ್ಲ ಕೆಲವರು ಸರಿ ಎನ್ನಬಹುದು. ಆದರೆ ಅದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ನಾನು ಹಳೇ ಕಾಲದ ವ್ಯಕ್ತಿ ಅಂತಾ ನಿಮಗೆ ಅನ್ನಿಸಬಹುದು’ ಎಂದು ಹೇಳಿದ್ದಾರೆ.
We started watching #Gehraaiyaan, 20 mins later,stopped, I found it an affront ..I am fan of Deepika,our BLR girl; she’s idolized by millions of young women as Icon Achiever & Courageous.Extramarital & destruction of Home, some may feel it’s OK, Very wrong msg. Am I old fashion?
— Bhaskar Rao (@deepolice12) February 13, 2022
ಭಾಸ್ಕರ್ ರಾವ್ ಅವರ ಅಭಿಪ್ರಾಯಕ್ಕೆ ಕೆಲವರು ಸಹಮತ ವ್ಯಕ್ತಪಡಿಸಿದರೆ ಇನ್ನು ಕೆಲವರು ವಿರೋಧಿಸಿದ್ದಾರೆ. ನೀವು ಪೂರ್ತಿಯಾಗಿ ಸಿನಿಮಾ ನೋಡಿ ಅಂತಿಮ ಅಭಿಪ್ರಾಯ ತಿಳಿಸಿ ಅಂತಾ ಸಲಹೆ ನೀಡಿದ್ದಾರೆ. ಹಸಿ-ಬಿಸಿ ದೃಶ್ಯಗಳನ್ನು ನೋಡುವ ಯುವ ಸಮುದಾಯ ಹಾದಿ ತಪ್ಪುತ್ತವೆ, ಮೌಲ್ಯಯುತ ಸಂಬಂಧಗಳ ಬಗ್ಗೆ ತಪ್ಪು ಸಂದೇಶ ನೀಡಿದರೆ ಯುವ ಜನತೆ ಹಾಳಾಗುತ್ತಾರೆ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: BS Yediyurappa: ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಬಿ.ಎಸ್.ಯಡಿಯೂರಪ್ಪ
ಒಟ್ನಲ್ಲಿ ನಟಿ ದೀಪಿಕಾ ಪಡುಕೋಣೆ(Deepika Padukone)ಯವರ ‘ಗೆಹರಾಯಿಯಾ’ ಸಿನಿಮಾ ಬೋಲ್ಡ್ ಸೀನ್ ಗಳಿಂದ ಸಖತ್ ಸುದ್ದಿಯಲ್ಲಿದೆ. ಅತಿಯಾಗಿ ಹಸಿಬಿಸಿ ದೃಶ್ಯಗಳನ್ನು ತೋರಿಸುವುದು ಸರಿಯಲ್ಲ, ಇಂದಿನ ಯುವ ಸಮುದಾಯಕ್ಕೆ ನಾವು ರಿಲೇಷನ್ಶಿಪ್ ಬಗ್ಗೆ ಪಾಸಿಟಿವ್ ಸಂದೇಶ ನೀಡಬೇಕು ಅಂತಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.