Bigg Biss Kannada Season 9 : ಸುಮಾರು ನೂರು ದಿನಗಳ ಕಾಲ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಡೆಯಲಿದೆ. ಎಲ್ಲರೂ ಅಂತಿಮ ಹಂತದವರೆಗೆ ಸ್ಪರ್ಧಿಸಲು ಬಯಸುತ್ತಾರೆ. ಟ್ರೋಫಿ ಗೆಲ್ಲಲು ಎಲ್ಲರೂ ಪೈಪೋಟಿ ನಡೆಸುತ್ತಾರೆ. ಮೊದಲ ವಾರದಲ್ಲೇ ಎಲಿಮಿನೇಟ್ ಆಗಿಬಿಟ್ಟರೆ ನಿಜಕ್ಕೂ ಬೇಸರವಾಗುತ್ತದೆ. ಆದರೆ ಎಲಿಮಿನೇಷನ್ ತಪ್ಪಿಸಲು ಸಾಧ್ಯವಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಿದೆ. ಇದರಲ್ಲಿ ಮೊದಲ ವಾರದಲ್ಲೇ ಯಾರು ಔಟ್ ಆಗುತ್ತಾರೆ ಎಂಬ ಕುತೂಹಲ ಸಹ ಹೆಚ್ಚಾಗಿದೆ. ಬಿಗ್‌ಬಾಸ್ ಸೀಸನ್ 9 ಶುರುವಾಗಿ ಒಂದು ವಾರ ಕಳೆದಿದೆ. ಇದೀಗ ಮೊದಲ ವಾರದ ಎಲಿಮಿನೇಷನ್‌ ಸಮಯ. 18 ಸ್ಪರ್ಧಿಗಳಲ್ಲಿ 12  ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ʼಒರಿಜಿನಲ್ ನಾನು.. ಇರೋದೆ ಹೀಗೆʼ : ಫೇಕ್‌ ವ್ಯಕ್ತಿ ಎಂದವರ ಮೇಲೆ ರೂಪೇಶ್‌ ಗರಂ..!


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಒಟ್ಟು 18 ಮಂದಿ ದೊಡ್ಮನೆ ಸೇರಿದ್ದಾರೆ. ಪ್ರತಿ ವಾರ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಲೇ ಹೋಗುತ್ತದೆ. ಈ ವಾರ ಆರ್ಯವರ್ಧನ್, ದರ್ಶ್, ದಿವ್ಯಾ ಉರುಡುಗ, ಐಶ್ವರ್ಯ, ಪ್ರಶಾಂತ್ ಸಂಬರಗಿ, ವಿನೋದ್, ಅರುಣ್ ಸಾಗರ್, ನವಾಜ್, ಸಾನ್ಯಾ ಅಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಇಂದು ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. 


ಇತರ ಸ್ಪರ್ಧಿಗಳಾದ ರಾಕೇಶ್ ಅಡಿಗ, ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ ಸದ್ಯಕ್ಕೆ ಸೇಫ್ ಆಗಿದ್ದಾರೆ. ವಾರದ ಟಾಸ್ಕ್‌ಗಳು ಬಹುತೇಕ ಮುಗಿದಿದ್ದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಮೊದಲ ಕ್ಯಾಪ್ಟನ್ ಆಗಿ ವಿನೋದ್ ಗೊಬ್ರಗಾಲ ಆಯ್ಕೆ ಆಗಿದ್ದಾರೆ. 


ಇದನ್ನೂ ಓದಿ : ಪಾಕ್ ನಟನೊಂದಿಗೆ ಅಮೀಷಾ ಪಟೇಲ್ ಡೇಟಿಂಗ್...! ನಟಿ ಎನ್ ಹೇಳಿದ್ರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.