ಪಾಕ್ ನಟನೊಂದಿಗೆ ಅಮೀಷಾ ಪಟೇಲ್ ಡೇಟಿಂಗ್...! ನಟಿ ಎನ್ ಹೇಳಿದ್ರು ಗೊತ್ತಾ?

ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಜೊತೆಗಿನ ಡೇಟಿಂಗ್ ವದಂತಿಗಳ ಕುರಿತು ಅಮೀಶಾ ಪಟೇಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಾಗಿನಿಂದ ಇಂಟರ್ನೆಟ್‌ನಲ್ಲಿ ಭಾರೀ ಸುದ್ದಿಯನ್ನು ಸೃಷ್ಟಿಸುತ್ತಿದ್ದಾರೆ.

Last Updated : Sep 29, 2022, 09:47 PM IST
  • ಇತ್ತೀಚೆಗೆ, ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಮೀಶಾ ಡೇಟಿಂಗ್ ವದಂತಿಗಳನ್ನು ತಳ್ಳಿಹಾಕಿದರು.
ಪಾಕ್ ನಟನೊಂದಿಗೆ ಅಮೀಷಾ ಪಟೇಲ್ ಡೇಟಿಂಗ್...! ನಟಿ ಎನ್ ಹೇಳಿದ್ರು ಗೊತ್ತಾ? title=

ಮುಂಬೈ: ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಜೊತೆಗಿನ ಡೇಟಿಂಗ್ ವದಂತಿಗಳ ಕುರಿತು ಅಮೀಶಾ ಪಟೇಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಾಗಿನಿಂದ ಇಂಟರ್ನೆಟ್‌ನಲ್ಲಿ ಭಾರೀ ಸುದ್ದಿಯನ್ನು ಸೃಷ್ಟಿಸುತ್ತಿದ್ದಾರೆ.

ಇತ್ತೀಚೆಗೆ, ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಮೀಶಾ ಡೇಟಿಂಗ್ ವದಂತಿಗಳನ್ನು ತಳ್ಳಿಹಾಕಿದರು. "ನಾನು ಕೂಡ ಅವುಗಳನ್ನು ಓದಿ ನಕ್ಕಿದ್ದೇನೆ, ಇಡೀ ವಿಷಯವು ಹುಚ್ಚು ಹಾಗೂ ಮೂರ್ಖತನದಿಂದ ಕೂಡಿದೆ.ನಾನು ತುಂಬಾ ವರ್ಷಗಳ ನಂತರ ನನ್ನ ಸ್ನೇಹಿತರನ್ನು ಭೇಟಿಯಾಗಿದ್ದೇನೆ. ಹಾಗಾಗಿ, ಇದು ಕೇವಲ ಒಂದು ಕ್ಯಾಚ್ ಅಪ್ ಆಗಿತ್ತು,"ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Ameesha Patel (@ameeshapatel9)

ಇದನ್ನೂ ಓದಿ: ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2 ನೇ ಶತಮಾನದ ಬೌದ್ಧ ದೇಗುಲಗಳು ಪತ್ತೆ..!

"ನಾವು ಹಲವಾರು ವರ್ಷಗಳಿಂದ ಒಬ್ಬರಿಗೊಬ್ಬರು ತಿಳಿದಿದ್ದೇವೆ, ನಾನು ಅವರೊಂದಿಗೆ ಯುಎಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಸಮಯದಿಂದ. ಮತ್ತು ನಾನು ಭಾರತವನ್ನು ಪ್ರೀತಿಸುವ ಪಾಕಿಸ್ತಾನದಲ್ಲಿರುವ ನನ್ನ ಹೆಚ್ಚಿನ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುತ್ತೇನೆ. ಅಬ್ಬಾಸ್ ಅಲ್ಲಿನ ಚಲನಚಿತ್ರೋದ್ಯಮ, ಮತ್ತು ನಾವು ಮಾತನಾಡಲು ಇನ್ನೂ ಸಾಕಷ್ಟು ವಿಚಾರಗಳಿವೆ. ನಾವು ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಆ ವಿಡಿಯೋ ಆಗಲೇ ಮಾಡಿದ್ದು, ಅವನಿಗೆ ನನ್ನ ಹಾಡು ಎಂದರೆ ಇಷ್ಟ, ಅದು ಅವನ ನೆಚ್ಚಿನ ಹಾಡು. ಇದೆಲ್ಲವೂ ಕೂಡ ಯಾವುದೇ ಪೂರ್ವಸಿದ್ಧತೆ ಇಲ್ಲದೆ ನಡೆದಿರುವಂತದ್ದು, ಅದನ್ನೇ ಸ್ನೇಹಿತರೊಬ್ಬರು ರಿಕಾರ್ಡ್ ಮಾಡಿದ್ದಾರೆ.ನಾವು ಅದನ್ನೇ ಪೋಸ್ಟ್ ಮಾಡಿದ್ದೇವೆ" ಎಂದು ಅಮೀಷಾ ಪಟೇಲ್ ಹೇಳಿದ್ದಾರೆ.

ಇದನ್ನೂ ಓದಿ: Snake Video : ಹಾವು - ಮೊಸಳೆ ನಡುವೆ 'ಬಿಗ್ ಫೈಟ್' : Video ನೋಡಿದ್ರೆ ಶಾಕ್ ಆಗ್ತೀರಾ!

ಅಮೀಶಾ ಪಟೇಲ್ ಮತ್ತು ಇಮ್ರಾನ್ ಅಬ್ಬಾಸ್ ಅವರು ಬಹ್ರೇನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು ಮತ್ತು ಬಾಬಿ ಡಿಯೋಲ್ ಸಹ-ನಟಿಸಿದ ಅವರ ಕ್ರಾಂತಿ ಚಲನಚಿತ್ರದ ದಿಲ್ ಮೇ ದರ್ದ್ ಸಾ ಜಗಾ ಹೈ ಹಾಡಿನ ವೀಡಿಯೊವನ್ನು ರೆಕಾರ್ಡ್ ಮಾಡಿದರು.ಈ ವೀಡಿಯೊವನ್ನು ಹಂಚಿಕೊಂಡ ನಂತರ, ಅಭಿಮಾನಿಗಳು ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಭಾವಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News