ಎಷ್ಟೇ ಕೋಟಿ ಕೊಟ್ಟರೂ ಆ ಕೆಲಸ ಮಾಡಲ್ಲ ಎಂದ ಸಾಯಿ ಪಲ್ಲವಿ..! ನಟಿ ನಿರ್ಧಾರ ಕೇಳಿ ಪ್ಯಾನ್ಸ್ ಖುಷ್
ಕೆಲವು ನಟ ನಟಿಯರು ಎಷ್ಟೇ ಹಣ ಆಫರ್ ಕೊಟ್ಟರೂ ಸಹ ಇಂತಹ ಜಾಹೀರಾತಿನಲ್ಲಿ ನಟಿಸುವುದಿಲ್ಲ. ಅಂಥವರ ಪೈಕಿ ನಟಿ ಸಾಯಿ ಪಲ್ಲವಿ ಕೂಡ ಒಬ್ಬರು. 2019 ರಲ್ಲಿ, ಕಂಪನಿಯೊಂದು ಜಾಹೀರಾತಿನಲ್ಲಿ ನಟಿಸುವಂತೆ ಸಾಯಿ ಪಲ್ಲವಿಗೆ 2 ಕೋಟಿ ರೂ. ಕೊಡುವುದಾಗಿ ಬೇಡಿಕೆ ಇಟ್ಟಿತ್ತು. ಆದರೆ...
Sai Pallavi : ಚಿತ್ರರಂಗದ ಸೆಲೆಬ್ರಿಟಿಗಳು ನಟನೆ ಮಾತ್ರವಲ್ಲದೆ ನಾನಾ ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಅಷ್ಟೇ ಅಲ್ಲ, ಕಮರ್ಷಿಯಲ್‌ಗಳಲ್ಲೂ ಸಹ ನಟಿಸುತ್ತಾರೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಅಲ್ಲದೆ, ಕೆಲ ಸ್ಟಾರ್‌ಗಳು ಸೌಂದರ್ಯ ಉತ್ಪನ್ನಗಳು, ತಂಪು ಪಾನೀಯಗಳು, ತಂಬಾಕು ಉತ್ಪನ್ನಗಳು, ಆಲ್ಕೋಹಾಲ್ ಉತ್ಪನ್ನಗಳ ಬ್ರ್ಯಾಂಡ್‌ಗಳಿಗೂ ರಾಯಭಾರಿ ಆಗಿದ್ದಾರೆ..
ಕೆಲವು ನಟ ನಟಿಯರು ಜಾಹೀರಾತಿನ ಗೋಜಿಗೆ ಹೋಗುವುದಿಲ್ಲ. ಇನ್ನೂ ಕೆಲವರು ಹಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಹಾನಿಕಾರಕ ತಂಬಾಕು ಜಾಹೀರಾತುಗಳಲ್ಲಿ ಬಾಲಿವುಡ್ ನಟರು ನಟಿಸಿರುವುದನ್ನು ನೀವು ನೋಡಿರುತ್ತೀರಿ. ಅವರನ್ನು ನೋಡಿ ಅವರ ಅಭಿಮಾನಿಗಳೂ ಸಹ ಆ ವಸ್ತುಗಳನ್ನು ಖರೀದಿಸಿ ಬಳಸುತ್ತಿದ್ದಾರೆ. ಈ ವಿಚಾರದಲ್ಲಿ ಸ್ಟಾರ್‌ಗಳು ಕೂಡ ತೀವ್ರ ಟೀಕೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಮದುವೆಯಾದ 4ನೇ ವರ್ಷಕ್ಕೆ ಡಿವೋರ್ಸ್ ಪಡೆದ ʼಮೊದಲ ಸಲʼ ಸಿನಿಮಾ ನಟಿ..!
ಇನ್ನು ಕೆಲವು ನಟ ನಟಿಯರು ಎಷ್ಟೇ ಹಣ ಆಫರ್ ಕೊಟ್ಟರೂ ಸಹ ಇಂತಹ ಜಾಹೀರಾತಿನಲ್ಲಿ ನಟಿಸುವುದಿಲ್ಲ. ಅಂಥವರ ಪೈಕಿ ನಟಿ ಸಾಯಿ ಪಲ್ಲವಿ ಕೂಡ ಒಬ್ಬರು. 2019 ರಲ್ಲಿ, ಕಂಪನಿಯೊಂದು ಜಾಹೀರಾತಿನಲ್ಲಿ ನಟಿಸುವಂತೆ ಸಾಯಿ ಪಲ್ಲವಿಗೆ 2 ಕೋಟಿ ರೂ. ಕೊಡುವುದಾಗಿ ಬೇಡಿಕೆ ಇಟ್ಟಿತ್ತು. ಆದರೆ ಸಾಯಿ ಪಲ್ಲವಿ ಎಷ್ಟು ಕೋಟಿ ಕೊಟ್ಟರೂ ಅದರಲ್ಲಿ ನಟಿಸುವುದಿಲ್ಲ ಎಂದು ನಿರಾಕರಿಸಿದ್ದರು.
ನಟಿ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಮೇಕಪ್ ಇಲ್ಲದೆ ನೈಸರ್ಗಿಕವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಅದರಲ್ಲೂ ವೈದ್ಯೆಯಾಗಿರುವ ನಟಿಗೆ ಸೌಂದರ್ಯವರ್ಧಕ ಉತ್ಪನ್ನಗಳಿಂದ ಚರ್ಮಕ್ಕೆ ಆಗುವ ಹಾನಿಯ ಬಗ್ಗೆ ಚೆನ್ನಾಗಿ ಅರಿವಿದೆ. ಅದಕ್ಕಾಗಿಯೇ ಅವರು ಕಾಸ್ಮೆಟಿಕ್ ಕಂಪನಿ ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.