ನವದೆಹಲಿ: ಒಂದು ವೇಳೆ ನೀವು ಟ್ವಿಟ್ಟರ್ ನಲ್ಲಿ ಸಕ್ರೀಯರಾಗಿದ್ದರೆ ನಿಮಗೆ ಬಾಲಿವುಡ್ ನಟಿ ಜೂಹಿ ಚಾವ್ಲಾ ಟಾಪ್ ಟ್ರೆಂಡಿಂಗ್ ನಲ್ಲಿರುವುದನ್ನು ಕಾಣಬಹುದಾಗಿದೆ.


COMMERCIAL BREAK
SCROLL TO CONTINUE READING

ಆದರೆ ಅವರು ಟ್ರೆಂಡಿಂಗ್ ಗೆ ಕಾರಣ ನೀವು ಆಕೆಯ ಹುಟ್ಟುಹಬ್ಬ ಎಂದು ಭಾವಿಸಬಹುದು, ಆದರೆ ಅದಕ್ಕಿಂತ ಹೆಚ್ಚಾಗಿ ಈಗ ಅವರು ನವಂಬರ್ 11 ರಂದು ದುಬೈನಿಂದ ಹಿಂದಿರುಗುವಾಗ ಅವರಿಗೆ ಆದ ಕಹಿ ಅನುಭವದ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಈಗ ಟ್ರೆಂಡಿಂಗ್ ನಲ್ಲಿದ್ದಾರೆ. ಐಪಿಎಲ್ 2020 ಅಂತ್ಯಗೊಂಡಿದ್ದರಿಂದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸಹ-ಮಾಲೀಕರೂ ಆಗಿರುವ ಜುಹಿ ಚಾವ್ಲಾ ಅವರು ದುಬೈನಿಂದ ಭಾರತಕ್ಕೆ ಹಿಂದಿರುಗುತ್ತಿದ್ದರು.


ಪ್ರೇಮಲೋಕದ ಬೆಡಗಿ ಜೂಹಿ ಚಾವ್ಲಾ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಹೇಳಿದ್ದೇನು?



'ವಿಮಾನ ನಿಲ್ದಾಣದ ಆರೋಗ್ಯ ಕ್ಲಿಯರೆನ್ಸ್‌ನಲ್ಲಿ ಹೆಚ್ಚಿನ ಅಧಿಕಾರಿಗಳು ಮತ್ತು ಕೌಂಟರ್‌ಗಳನ್ನು ತಕ್ಷಣ ನಿಯೋಜಿಸಲು ವಿಮಾನ ನಿಲ್ದಾಣ ಮತ್ತು ಸರ್ಕಾರಿ ಅಧಿಕಾರಿಗಳಿಗೆ ವಿನಂತಿಸಿ...ಎಲ್ಲಾ ಪ್ರಯಾಣಿಕರು ಇಳಿದ ನಂತರ ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡಿದ್ದಾರೆ....ವಿಮಾನದದ ನಂತರ ವಿಮಾನ.....ಕರುಣಾಜನಕ, ನಾಚಿಕೆಗೇಡಿನ ಸ್ಥಿತಿ .. !! ಎಂದು ಜೂಹಿ ಚಾವ್ಲಾ ಟ್ವೀಟ್ ಮೂಲಕ ಭಾರತೀಯ ವಿಮಾನಯಾನ ಪ್ರಾಧಿಕಾರವನ್ನು ಟ್ಯಾಗ್ ಮಾಡಿದ್ದಾರೆ.ಈಗ ವಿಡೀಯೋ ಸಹಿತ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವೈರಲ್ ಆಗಿ ಸದ್ದು ಮಾಡುತ್ತಿದೆ.