ವಿಚ್ಛೇದನೆಯ ಬಳಿಕ ಸೆನ್ಸೇಷನಲ್ ಮಾಹಿತಿ ಬಹಿರಂಗಗೊಳಿಸಿದ ನವಾಜುದ್ದೀನ್ ಪತ್ನಿ
ಖ್ಯಾತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಅಲಿಯಾ ಸಿದ್ದಿಕಿ ತನ್ನ ಪತಿಯ ಮನೆಯವರ ಕುರಿತು ಸೆನ್ಸೇಷನಲ್ ಮಾಹಿತಿ ಬಹಿರಂಗಗೊಳಿಸಿದ್ದು, ನವಾಜ್ ಅವರ ಕುಟುಂಬ ಸದ್ಯಸರು ತಮಗೆ ಹೊಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.
ನವದೆಹಲಿ: ಖ್ಯಾತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಖಾಸಗಿ ಜೀವನ ಸದ್ಯ ಅಷ್ಟೊಂದು ಸುಗಮವಾಗಿ ನಡೆಯುತ್ತಿಲ್ಲ. ಏಕೆಂದರೆ, ಮೊದಲು ನವಾಜ್ ಅವರಿಂದ ವಿವಾಹ ವಿಚ್ಛೇದನೆ ಕೋರಿ ಅರ್ಜಿ ಸಲ್ಲಿಸಿದ್ದ ಅವರ ಪತ್ನಿ ಅಲಿಯಾ ಸಿದ್ದಿಕಿ ಇದೀಗ ಅವರ ಕುಟುಂಬ ಸದಸ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೌದು, ಅಲಿಯಾ ತಮ್ಮ ಪತಿಯ ಕುಟುಂಬಸ್ಥರ ವಿರುದ್ಧ ಹಿಂಸಾಚಾರ ನಡೆಸಿದ ಆರೋಪ ಮಾಡಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಬಹಿರಂಗಗೊಳಿಸಿದ ಬೆಚ್ಚಿಬೀಳಿಸುವ ಮಾಹಿತಿ ಇದು
ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಅಲಿಯಾ ಸಿದ್ದಿಕಿ ತನ್ನ ಪತಿಯ ಕುಟುಂಬ ಸದಸ್ಯರ ವಿರುದ್ಧ ಸಂವೇದನಾಶೀಲ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಹೌದು, ತಮ್ಮ ಪತಿಯ ಕುಟುಂಬ ಸದಸ್ಯರು ತಮಗೆ ಶಾರೀರಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಅಲಿಯಾ ಮಾಡಿದ್ದಾರೆ. ನವಾಜುದ್ದೀನ್ ಅವರ ಸಹೋದರರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. ಆದರೆ, ಇದೇ ವೇಳೆ ನವಾಜುದ್ದೀನ್ ತಮಗೆ ಎಂದಿಗೂ ಕೂಡ ಹೊಡೆದಿಲ್ಲ ಎಂದು ಅಲಿಯಾ ಹೇಳಿದ್ದಾರೆ. ಕಳೆದ ಹಲವು ದಿನಗಳಿಂದ ತಾವು ಮಾನಸಿಕ ಮತ್ತು ಶಾರೀರಿಕ ಕಿರುಕುಳವನ್ನು ಎದುರಿಸಿರುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ನೀಡಿರುವ ಸಂದರ್ಶನವೊಂದರಲ್ಲಿ ಅಲಿಯಾ ತಮ್ಮ ಖಾಸಗಿ ಜೀವನದ ಕುರಿತು ಹಲವು ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ.
ನವಾಜ್ ಕುಟುಂಬಸ್ಥರ ವಿರುದ್ಧ ಹಿಂಸಾಚಾರ ಮತ್ತು ಕಿರುಕುಳದ ಆರೋಪ
ಈ ಸಂದರ್ಶನದಲ್ಲಿ ಅಲಿಯಾ ನವಾಜುದ್ದೀನ ಅವರ ಮೊದಲ ಪತ್ನಿಯ ಬಗ್ಗೆಯೂ ಕೂಡ ಮಾತನಾಡಿದ್ದಾರೆ. ನವಾಜ್ ಅವರ ಮೊದಲ ಪತ್ನಿಯೂ ಕೂಡ ಕೌಟುಂಬಿಕ ಹಿಂಸಾಚಾರ ಮತ್ತು ಕಿರುಕುಳದ ಹಿನ್ನೆಲೆ ನವಾಜ್ ಅವರಿಗೆ ವಿಚ್ಛೇದನೆ ನೀಡಿದ್ದಾಳೆ ಎಂದು ಅಲಿಯಾ ಹೇಳಿದ್ದಾರೆ. ನವಾಜ್ ಅವರ ಕುಟುಂಬದ ವಿರುದ್ಧ ಅವರು ಒಟ್ಟು 7 ಪ್ರಕರಣಗಳನ್ನು ದಾಖಲಿಸಿದ್ದು, ಇದಕ್ಕೂ ಮೊದಲು ನವಾಜ್ ಒಟ್ಟು ನಾಲ್ಕು ಬಾರಿಗೆ ವಿವಾಹ ವಿಚ್ಛೇದನೆಗೆ ಒಳಗಾಗಿದ್ದು, ಇದು ಅವರ ಐದನೇ ವಿವಾಹ ವಿಚ್ಚೆದನೆಯಾಗಿದೆ ಎಂದು ಅಲಿಯಾ ಹೇಳಿದ್ದಾರೆ. ಇದೆ ವೇಳೆ ನವಾಜುದ್ದೀನ ಎಂದಿಗೂ ಕೂಡ ನನ್ನ ಮೇಲೆ ಕೈ ಎತ್ತಿಲ್ಲ, ಆದರೆ, ಹಲವು ಬಾರಿ ನಾನು ಅವರ ಕಿರುಚಾಟ ಹಾಗೂ ವಾದಗಳನ್ನು ಸಹಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ನವಾಜ್ ಅವರ ಸಹೋದರರ ಮತ್ತು ತಾಯಿ ನಮ್ಮೊಂದಿಗೆ ಮುಂಬೈನಲ್ಲಿಯೇ ವಾಸಿಸುತ್ತಿದ್ದ ಕಾರಣ ನಾನು ಕಳೆದ ಹಲವು ವರ್ಷಗಳಿಂದ ಕಿರುಕುಳವನ್ನು ಎದುರಿಸಿದ್ದೇನೆ. ತಮ್ಮ ವೈವಾಹಿಕ ಜೀವನದ ಕುರಿತು ಮಾತನಾಡಿರುವ ಅಲಿಯಾ, "ನಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆ ಬಹಳ ಹಿಂದೆಯೇ ಉದ್ಭವಿಸಿತ್ತು, ನವಾಜ್ ಅವರನ್ನು ಮದುವೆಯಾದಾಗಿನಿಂದಲೂ ಕೂಡ ವಿಷಯಗಳನ್ನ್ಜು ಸರಿಪಡಿಸಲು ನಾನು ಪ್ರಯತ್ನಿಸಿದ್ದೇನೆ. ಆದರೆ, ಪರಿಸ್ಥಿತಿ ಕೈತಪ್ಪಿದ ಕಾರಣ ಅಂತಿಮ ನಿರ್ಣಯ ಕೈಗೊಳ್ಳಬೇಕಾಯಿತು" ಎಂದು ಅಲಿಯಾ ಹೇಳಿದ್ದಾರೆ.