Latest updates on Samantha-Naga Chaitanya film: ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ಸಮಂತಾ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದು ಗೊತ್ತೇ ಇದೆ. ಮಯೋಸಿಟಿಸ್ ನಿಂದ ಬಳಲುತ್ತಿದ್ದ ಈ ನಟಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.. ಶೀಘ್ರದಲ್ಲೇ ಒಂದು ಒಳ್ಳೆಯ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರಲಿದ್ದಾರೆ ಎನ್ನುವ ನಿರೀಕ್ಷೆಗಳಿವೆ..


COMMERCIAL BREAK
SCROLL TO CONTINUE READING

ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ನಟಿ ಸಮಂತಾ ಸಣ್ಣಪುಟ್ಟ ಕಲಹಗಳಿಂದ ಬೇರ್ಪಟ್ಟರು, ಆದರೆ ಇಬ್ಬರೂ ಇನ್ನೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಾರೆ.


ಇದನ್ನೂ ಓದಿ-ಆರ್ ಚಂದ್ರು ಹುಟ್ಟುಹಬ್ಬದಂದು ʻಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘʼಕ್ಕೆ ಚಾಲನೆ


ಹೌದು ನಾಗ ಚೈತನ್ಯ ಹೆಸರು ಹೇಳಿದಾಗ ಸಮಂತಾ ಹಾವಭಾವ, ಸಮಂತಾ ಹೆಸರು ಹೇಳಿದಾಗ ನಾಗ ಚೈತನ್ಯ ಹಾವಭಾವವನ್ನು ಗಮನಿಸಿ ಇಬ್ಬರಿಗೂ ಇನ್ನೂ ಒಬ್ಬರಿಗೊಬ್ಬರ ಮೇಲೆ ಪ್ರೀತಿ ಇದೆ ಎಂದು ಅರ್ಥ ಮಾಡಿಕೊಂಡು ಮುಂದೆಯಾದರೂ ಒಂದಾಗಲಿ ಎಂಬುದು ಅಭಿಮಾನಿಗಳ ಆಸೆ. ಇತ್ತೀಚೆಗೆ ಸೌತ್‌ ಸಿನಿರಂಗದಲ್ಲಿ ಸುದ್ದಿಯೊಂದು ವೈರಲ್ ಆಗಿದೆ.. ನಾಗ ಚೈತನ್ಯ ಇತ್ತೀಚೆಗೆ ನಟಿಸಿದ ದೂತ ಎಂಬ ವೆಬ್ ಸೀರೀಸ್ ನ ಮುಂದುವರಿದ ಭಾಗ ಮಾಡಲು ನಿರ್ದೇಶಕ ವಿಕ್ರಮ್ ಮುಂದಾಗಿದ್ದಾರೆ. ಈ ಹಿಂದೆ ವಿಕ್ರಮ್ ನಿರ್ದೇಶನದಲ್ಲಿ ನಾಗ ಚೈತನ್ಯ ಮತ್ತು ಸಮಂತಾ ಮನಂ ಸಿನಿಮಾ ಮಾಡಿದ್ದರು. ಇವರಿಬ್ಬರನ್ನೂ ಮತ್ತೊಮ್ಮೆ ದೂತ ಸರಣಿಯಲ್ಲಿ ಒಂದೇ ತೆರೆಮೇಲೆ ತರಲು ನಿರ್ದೇಶಕರು ಮುಂದಾಗಿದ್ದಾರೆ ಎನ್ನಲಾಗಿದೆ..


ಈ ಬಗ್ಗೆ ಸಮಂತಾಗೆ ಕಥೆ ಹೇಳುವ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಆದರೆ ನಾಗ ಚೈತನ್ಯ ಜೊತೆಗಿನ ಮನಸ್ತಾಪದಿಂದ ಮನನೊಂದಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸಮಂತಾ ಈಗ ಅವರ ಜೊತೆ ನಟಿಸುತ್ತಾರಾ? ಇಲ್ಲವಾ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.. ಅಲ್ಲದೇ ನಿರ್ದೇಶಕರ ಪ್ರಯತ್ನಕ್ಕೆ ಫಲ ಸಿಗುತ್ತದಾ ಎಂದು ಇಬ್ಬರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


ಇದನ್ನೂ ಓದಿ-ಪ್ರೇಮ್‌ ನಿರ್ದೇಶನದ ದರ್ಶನ್‌ ಮುಂದಿನ ಚಿತ್ರದಲ್ಲಿ ಸಂಜಯ್‌ ದತ್‌ ವಿಲನ್!‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.