ಆರ್ ಚಂದ್ರು ಹುಟ್ಟುಹಬ್ಬದಂದು ʻಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘʼಕ್ಕೆ ಚಾಲನೆ

R Chandru Birthday: ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಆರ್ ಚಂದ್ರು ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಚಂದ್ರು ಅವರ ಹುಟ್ಟುಹಬ್ಬದಂದು ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘ ಆರಂಭವಾಗಿದೆ. 

Written by - YASHODHA POOJARI | Last Updated : Feb 8, 2024, 05:49 PM IST
  • ಸ್ಯಾಂಡಲ್‌ವುಡ್‌ ನಿರ್ಮಾಪಕ ಆರ್ ಚಂದ್ರು ಹುಟ್ಟುಹಬ್ಬ
  • ʻಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘʼಕ್ಕೆ ಚಾಲನೆ
  • ಚಂದ್ರು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಅಭಿಮಾನಿಗಳು
ಆರ್ ಚಂದ್ರು ಹುಟ್ಟುಹಬ್ಬದಂದು ʻಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘʼಕ್ಕೆ ಚಾಲನೆ  title=

R Chandru Birthday: ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಆರ್ ಚಂದ್ರು ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಚಂದ್ರು ಅವರ ಹುಟ್ಟುಹಬ್ಬದಂದು ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘ ಆರಂಭವಾಗಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಆರ್ ಚಂದ್ರು ಕೆಲವು ವಿಷಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

22 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದವನು ನಾನು ಎಂದು ಮಾತು ಆರಂಭಿಸಿದ ಆರ್ ಚಂದ್ರು,  ನಂತರ "ತಾಜ್ ಮಹಲ್" ಚಿತ್ರವನ್ನು ನಿರ್ದೇಶನ ಮಾಡಿದೆ. "ತಾಜ್ ಮಹಲ್" ಚಂದ್ರು ಅಂತಲೇ ಎಲ್ಲರೂ ಕರೆಯುವಷ್ಟು ಆ ಚಿತ್ರ ಯಶಸ್ವಿಯಾಯಿತು. ನಂತರ "ಚಾರ್ ಮಿನಾರ್", ಆನಂತರ " ಮೈಲಾರಿ" ಚಿತ್ರಗಳನ್ನು ನಿರ್ದೇಶಿಸಿದ್ದೆ. ಆಗಿನಿಂದ "ಮೈಲಾರಿ" ಚಂದ್ರು ಆದೆ. ಈ ರೀತಿ ಮಾಧ್ಯಮದವರು, ಉದ್ಯಮದವರು ಹಾಗೂ ಕನ್ನಡ ಅಭಿಮಾನಿಗಳು ನನ್ನ ಮೊದಲ ಚಿತ್ರದಿಂದ ನೀಡುತ್ತಾ ಬರುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ ಎಂದರು. 

ಇದನ್ನೂ ಓದಿ: ಪ್ರೇಮ್‌ ನಿರ್ದೇಶನದ ದರ್ಶನ್‌ ಮುಂದಿನ ಚಿತ್ರದಲ್ಲಿ ಸಂಜಯ್‌ ದತ್‌ ವಿಲನ್!‌ 

ಕೆಲವು ವರ್ಷಗಳ ಹಿಂದಿನಿಂದಲೇ ಅಭಿಮಾನಿಗಳ ಸಂಘ ಸ್ಥಾಪಿಸುವುದಾಗಿ ಸ್ನೇಹಿತರು ಹೇಳುತ್ತಾ ಬರುತ್ತಿದ್ದರು. ನಾನು ಬೇಡ ಎನ್ನುತ್ತಿದೆ. ಈ ಬಾರಿ ಎಲ್ಲರ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡಿದ್ದೇನೆ. ನೀವು ಯಾರು ನನ್ನ ಅಭಿಮಾನಿಗಳಲ್ಲ. ನನ್ನ ಸ್ನೇಹಿತರು ಎಂದು ಹೇಳಿದ್ದೇನೆ. ನಾನು ಮೊದಲಿನಿಂದಲೂ ಕೆಲಸವನ್ನು ದೇವರು ಅಂದುಕೊಂಡು ಬಂದವನು. ನಿಷ್ಠೆಯಿಂದ ಮಾಡುವವನು ಕೂಡ. ಆ ಕರ್ತವ್ಯ ನಿಷ್ಠೆ ನನ್ನ ಈವರೆಗೂ ತಂದು ನಿಲ್ಲಿಸಿದೆ. "ಕಬ್ಜ" ಎಂಬ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹಾಗೆ ಮಾಡಿದೆ ಎಂದು ಹೇಳಿದರು. 

ಇನ್ನು ನಾನು ಇತ್ತೀಚಿಗೆ ಆರ್ ಸಿ ಸ್ಟುಡಿಯೋಸ್ ಎಂಬ ಸಂಸ್ಥೆ ಮೂಲಕ ಐದು ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಚಿತ್ರವಾಗಿ "ಫಾದರ್" ಚಿತ್ರ ಈ ತಿಂಗಳ ಕೊನೆಗೆ ಆರಂಭವಾಗಲಿದೆ. ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ತಂದೆಯ ಪಾತ್ರದಲ್ಲಿ ಹೆಸರಾಂತ ನಟ ಪ್ರಕಾಶ್ ರೈ ಅಭಿನಯಿಸುತ್ತಿದ್ದಾರೆ. ಅಪ್ಪ - ಮಗನ ಬಾಂಧವ್ಯದ ಚಿತ್ರವಿದು. ತೆಲುಗಿನ ಸುನೀಲ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ ಇದೇ ವರ್ಷ ಐದು ಚಿತ್ರಗಳಿಗೂ ಚಾಲನೆ ಸಿಗಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಆರ್ ಚಂದ್ರು ಅವರ ಸ್ನೇಹಿತರಾದ ಮಂಜುನಾಥ್, ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘದ ಬಗ್ಗೆ ಮಾಹಿತಿ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆರ್ ಚಂದ್ರು ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಅವರ ನಿವಾಸಕ್ಕೆ ಬಂದಿದ್ದರು.

ಇದನ್ನೂ ಓದಿ: ಈ ಬಾಲಿವುಡ್ ಸ್ಟಾರ್ ನಟನ ಪತ್ನಿಯ ಬೆತ್ತಲೆ ಬೆನ್ನಿನ ಫೋಟೋ ವೈರಲ್! ‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News