ನವದೆಹಲಿ : 'ಕಾಮಿಡಿ ನೈಟ್ಸ್ ವಿಥ್ ಕಪಿಲ್'(Comedy nights with Kapil) ಮತ್ತು 'ದಿ ಕಪಿಲ್ ಶರ್ಮಾ ಶೋ' (The Kapil Sharma Show)ಯಶಸ್ಸು ಪಡೆಯುತ್ತಿದ್ದಂತೆ ಮನೆ ಮಾತಾದ ಹೆಸರು ಕಪಿಲ್ ಶರ್ಮಾ( Kapil Sharma)  ಮತ್ತು ಸುನಿಲ್ ಗ್ರೋವರ್(Sunil Grover). ಆದರೆ ನಂತರ ಇಬ್ಬರ ನಡುವೆ ನಡೆದ ಮನಸ್ತಾಪದ ಕಾರಣದಿಂದ ಸುನಿಲ್ ಗ್ರೋವರ್  ಶೋ ಬಿಟ್ಟು ಹೊರ ನಡೆದದ್ದು ಕೂಡಾ ಎಲ್ಲರಿಗೂ ತಿಳಿದಿರುವ ವಿಚಾರ. ಸಾರ್ವಜನಿಕವಾಗಿಯೇ ಈ ಇಬ್ಬರು ಕಲಾವಿದರ ನಡುವೆ ನಡೆದ ಜಗಳ ಚರ್ಚೆಗೆ ಕಾರಣವಾಗಿತ್ತು. 


COMMERCIAL BREAK
SCROLL TO CONTINUE READING

'ಅವಕಾಶ ಸಿಕ್ಕರೆ ಜೊತೆಯಾಗಿ ಕೆಲಸ' :
ಆರ್.ಜೆ. ಸಿದ್ಧಾರ್ಥ ಕಣ್ಣನ್ ಅವರೊಂದಿಗೆ ಮಾತುಕತೆ ವೇಳೆ, ಕಪಿಲ್ ಶರ್ಮಾ (Kapil Sharma) ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಕಪಿಲ್ ಶರ್ಮಾ ಜೊತೆ ಮತ್ತೆ ಕೆಲಸ ಮಾಡಲು ಬಯಸುತ್ತೀರಾ ಎಂಬ ಪ್ರಶ್ನೆಯನ್ನು ಸುನಿಲ್ ಗೆ (Sunil Grover) ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಸುನಿಲ್ , ಮುಂದೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಜೊತೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದರೆ, ಸದ್ಯಕ್ಕೆ ಅಂಥಹ ಯಾವುದೇ ಪ್ರಾಜೆಕ್ಟ್ ತಮ್ಮ ಬಳಿ ಇಲ್ಲ ಎಂದು ಕೂಡಾ ಹೇಳಿದ್ದಾರೆ.


ಇದನ್ನೂ ಓದಿ : ನಟಿ ಕತ್ರಿನಾ ಕೈಫ್ ಡೇಟಿಂಗ್ ಮಾಡುತ್ತಿರುವ ಆ ನಟ ಯಾರು ಗೊತ್ತಾ?


ಸದ್ಯಕ್ಕೆ ಸುನಿಲ್ ಗ್ರೋವರ್, (Sunil Grover) ಬಾಲಿವುಡ್‌ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಜನ್ಮದಿನದ ಹಿನ್ನೆಲೆಯಲ್ಲಿ ಟ್ವೀಟ್ (Tweet)ಮೂಲಕ ಕಪಿಲ್ ಶರ್ಮಾಗೆ ಅಭಿನಂದನೆ ಸಲ್ಲಿಸಿದ್ದರು.  ಕಪಿಲ್ ಶರ್ಮಾ ಕೂಡಾ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದರು. 


ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ವಿವಾದ : 
2017 ರಲ್ಲಿ ಕಪಿಲ್ ಮತ್ತು ಸುನಿಲ್ ನಡುವೆ ಜಗಳ ನಡೆದಿತ್ತು. ಇದಾದ ನಂತರ ಇಬ್ಬರೂ ಬಹಳ ಸಮಯದವರೆಗೆ ಮಾತುಕತೆ ನಡೆಸುತ್ತಿರಲಿಲ್ಲ.  ನಡೆದಿರುವುದನ್ನು ಮರೆತು ಮೂವ್ ಆನ್ ಆಗಲು ಇಚ್ಛಿಸಿದ್ದಾರೆ.   ವಿವಾದದ ನಂತರ, 2019 ರ ಇವೆಂಟ್ ಒಂದರಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. 


ಇದನ್ನೂ ಓದಿ : ಶಿಲ್ಪಾ ಶೆಟ್ಟಿ ಜನ್ಮದಿನಕ್ಕೆ ಪತಿ ರಾಜ್ ಕುಂದ್ರಾ ನೀಡಿದ ಗಿಫ್ಟ್ ಏನು ಗೊತ್ತಾ?


ಕಳೆದ ವರ್ಷ ಈ ಬಗ್ಗೆ ಮಾತನಾಡಿದ್ದ ಕಪಿಲ್ : 
ಜೀವನದಲ್ಲಿ ಸಂಭವಿಸುವ ಸಣ್ಣ ಸಂಗತಿಗಳು ಸಂಬಂಧವನ್ನು ಕೊನೆಗೊಳಿಸುವುದಿಲ್ಲ. ಸುನಿಲ್ ಅದ್ಭುತ ಕಲಾವಿದ.  ನಾನು ಸುನಿಲ್ ಅವರಿಂದ ಸಾಕಷ್ಟು ಕಲಿತಿದ್ದೇನೆ ಮತ್ತು ಭವಿಷ್ಯದಲ್ಲಿ ಒಟ್ಟಿಗೆ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕರೆ ಅದು ತುಂಬಾ ಖುಷಿಯಾಗುತ್ತದೆ ಎಂದಿದ್ದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ