ಹೊಸ ಬದಲಾವಣೆ, ಹೊಸ ಮುಖಗಳೊಂದಿಗೆ ಮತ್ತೆ ಬರುತ್ತಿದೆ The Kapil Sharma Show

ಟೆಲಿ ಚಕ್ಕರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಪಿಲ್ ಶರ್ಮಾ ಶೋ ಇನ್ನು ಒಂದೂವರೆ ತಿಂಗಳ ನಂತರ ಆರಂಭವಾಗಲಿದೆ.   ಈ ಬಾರಿ ಶೋನಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. 

Written by - Ranjitha R K | Last Updated : May 27, 2021, 10:43 AM IST
  • ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ ಕಪಿಲ್ ಶರ್ಮಾ ಶೋ
  • ಈ ಬಾರಿ ಹೊಸ ಮಾದರಿಯೊಂದಿಗೆ ಬರಲಿದೆ ತಂಡ
  • ತಂಡದಲ್ಲಿ ಹೊಸಬರಿಗೆ ಅವಕಾಶ
ಹೊಸ ಬದಲಾವಣೆ, ಹೊಸ ಮುಖಗಳೊಂದಿಗೆ ಮತ್ತೆ ಬರುತ್ತಿದೆ The Kapil Sharma Show  title=
ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ ಕಪಿಲ್ ಶರ್ಮಾ ಶೋ (photo instagram)

ನವದೆಹಲಿ : ಟಿವಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ದಿ ಕಪಿಲ್ ಶರ್ಮಾ ಶೋ' (The Kapil Sharma Show ) ಅಭಿಮಾನಿಗಳಿಗೊಂದು ಸಿಹಿ ಸುದ್ದಿ.  ಈ ಕಾಮಿಡಿ ಶೋ ಮತ್ತೆ ಪುನರಾರಂಭವಾಗಲಿದೆ.  ಹೊಸ ಶೈಲಿಯೊಂದಿಗೆ ಕೆಲ ಬದಲಾವಣೆಗಳ ಜೊತೆ ಪ್ರೇಕ್ಷಕರನ್ನು ನಕ್ಕು ನಗಿಸಲು ಕಪಿಲ್ ಶರ್ಮಾ ತಂಡ ತಯಾರಾಗಿದೆ. 

ಈ ದಿನ ಪ್ರಾರಂಭವಾಗಲಿದೆ ಶೋ : 
ಟೆಲಿ ಚಕ್ಕರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಪಿಲ್ ಶರ್ಮಾ ಶೋ (The Kapil Sharma Show) ಇನ್ನು ಒಂದೂವರೆ ತಿಂಗಳ ನಂತರ ಆರಂಭವಾಗಲಿದೆ.  ಕಪಿಲ್ ಶರ್ಮಾ ಕಾಮಿಡಿ ಶೋ  ಜುಲೈ 21 ರಿಂದ ಟಿವಿಯಲ್ಲಿ ಮತ್ತೆ ಪ್ರದರ್ಶನವಾಗಲಿದೆ ಎನ್ನಲಾಗಿದೆ. ಈ ಬಾರಿ ಶೋನಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. 

ಇದನ್ನೂ ಓದಿ : Viral Video: ಇದ್ದಕ್ಕಿದ್ದಂತೆ ಕುದುರೆಯಾದ ತಾಯಿ, ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆದ 10 ಸೆಕೆಂಡ್ ಗಳ ವಿಡಿಯೋ

ಹೊಸಬರಿಗೆ ಅವಕಾಶ : 
ಸುದ್ದಿಗಳ ಪ್ರಕಾರ, ದಿ ಕಪಿಲ್ ಶರ್ಮಾ ಶೋ ಶೂಟಿಂಗ್ (Shooting) ಕೂಡ ಪ್ರಾರಂಭವಾಗಿದೆ. ಮೇ 15 ರಿಂದ, ಪ್ರದರ್ಶನಕ್ಕೆ ಸಂಬಂಧಿಸಿದ ಜನರು ಸೆಟ್ಟಿಗೆ ಆಗಮಿಸುತ್ತಿದ್ದಾರೆ. ಇನ್ನು ಈ ಸೀಸನ್ ನಲ್ಲಿ ಹೊಸ ಕಲಾವಿದರಿಗೆ, ಲೇಖಕರಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.  ಈ ಹಿಂದೆ ಶೋನಲ್ಲಿ ಇದ್ದ ಎಲ್ಲಾ ಕಲಾವಿದರು ಅಂದರೆ, ಭಾರತಿ ಸಿಂಗ್ (Bharti Singh) , ಕಿಕು ಶಾರದಾ, ಸುಮೋನಾ ಚಕ್ರವರ್ತಿ, ಚಂದನ್ ಪ್ರಭಾಕರ್ ಮತ್ತು ಕೃಷ್ಣ ಅಭಿಷೇಕ್ (Krishna Abhishek) ಇವರುಗಳು ಈ ಬಾರಿಯೂ ಶೋನ ಭಾಗವಾಗಿರಲಿದ್ದಾರೆ. ಸೇರಿದ್ದಾರೆ.

ಮಾಹಿತಿ ನೀಡಿದ ಕೃಷ್ಣ ಅಭಿಷೇಕ್ : 
ಕಾರ್ಯಕ್ರಮವು ಹೊಸ ಮಾದರಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ವಿಚಾರವನ್ನು 'ದಿ ಕಪಿಲ್ ಶರ್ಮಾ ಶೋ'ನ ಪ್ರಮುಖ ಭಾಗವಾಗಿದ್ದ ಕೃಷ್ಣ ಅಭಿಷೇಕ್ ಸಂದರ್ಶನವೊಂದರಲ್ಲಿ ಹೇಳಿದ್ದರು.   ಈ ಸೀಸನ್ ನಲ್ಲಿ ಶೋನ ಸೆಟ್ ಕೂಡಾ ಬದಲಾಗಲಿದೆ. 

ಇದನ್ನೂ ಓದಿ : Sushmita Sen Viral Instagram Post: ತನ್ನ ತಪ್ಪುಗಳನ್ನು ಒಪ್ಪಿಕೊಂಡ Sushmita Sen ಹೇಳಿದ್ದೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News