ಶ್ರೀದೇವಿಯನ್ನು ಬಂಧಿಸಲು ಪೊಲೀಸರು ಈಗ ಸ್ವರ್ಗಕ್ಕೆ ಹೋಗುತ್ತಾರಾ? ರಾಮ್ ಗೋಪಾಲ್ ವರ್ಮಾ ಹೀಗೆ ಹೇಳಿದ್ದೇಕೆ?
Sridevi Arrest: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವಾಗ ಯಾರ ಪರ ಇರುತ್ತಾರೆ? ಯಾವ ವಿಚಾರ ಮಾತನಾಡುತ್ತಾರೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಅಭಿಮಾನಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಲ್ಲು ಅರ್ಜುನ್ ಅವರನ್ನು ಬೆಂಬಲಿಸಿದ್ದಾರೆ.
Sridevi Arrest: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವಾಗ ಯಾರ ಪರ ಇರುತ್ತಾರೆ? ಯಾವ ವಿಚಾರವನ್ನು ಮಾತನಾಡುತ್ತಾರೆ ಅಂತಾ ಹೇಳೋಕೆ ಸಾಧ್ಯವಿಲ್ಲ. ವಿಚಿತ್ರ ವ್ಯಕ್ತಿತ್ವ ಅವರದು. ಈಗ ಪುಷ್ಪಾ 2 ಸಿನಿಮಾ ಬಿಡುಗಡೆ ವೇಳೆ ನೂಕುನುಗ್ಗಲಿನಲ್ಲಿ ಅಭಿಮಾನಿಯೊಬ್ಬರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಬೆಂಬಲಿಸಿದ್ದಾರೆ.
ಸಾವು ಸಂಭವಿಸಿದ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರನ್ನು ಸಮರ್ಥಿಸಿ ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಅಭಿಮಾನಿಗಳು ಮಾಡಿಕೊಳ್ಳುವ ಅವಾಂತರಗಳಿಗೆ ಸೆಲೆಬ್ರಿಟಿಗಳನ್ನು ಜವಾಬ್ದಾರರನ್ನಾಗಿ ಮಾಡಬಾರದು ಎಂದು ಹೇಳಿದ್ದರು. ಈಗ ಹಿಂದಿನ ಪ್ರಕರಣವೊಂದನ್ನು ಉಲ್ಲೇಖಿಸಿ ಶ್ರೀದೇವಿಯನ್ನು ಬಂಧಿಸಲು ಪೊಲೀಸರು ಸ್ವರ್ಗಕ್ಕೆ ಹೋಗುತ್ತಾರಾ? ಎಂದು ರಾಮ್ ಗೋಪಾಲ್ ವರ್ಮಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ- Bigg Boss Kannada 11: ಮನೆಯಿಂದ ಹೊರಬಂದವರಿಂದಲೇ ರಿವೀಲ್ ಆಯ್ತು 'ಬಿಗ್ ಬಾಸ್ ವಿನ್ನರ್' ಹೆಸರು...!
ದಶಕಗಳ ಕಾಲ ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಶ್ರೀದೇವಿ ಅವರ ಕುರಿತಾದ ಘಟನೆ ಇದು. ಕ್ಷಣ ಕ್ಷಣ ಸಿನಿಮಾದ ಚಿತ್ರೀಕರಣದ ವೇಳೆ ನಟಿ ಶ್ರೀದೇವಿ ಅವರನ್ನು ನೋಡಲು ಸಹಸ್ರ ಸಹಸ್ರ ಅಭಿಮಾನಿಗಳು ಜಮಾಯಿಸಿದ್ದರು. ಆಗಲೂ ಕಾಲ್ತುಳಿತ ಆಗಿ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದರು. ಇದನ್ನು ನೆನಪಿಸಿ ಈಗ ಶ್ರೀದೇವಿಯನ್ನು ಬಂಧಿಸಲು ಪೊಲೀಸರು ಸ್ವರ್ಗಕ್ಕೆ ಹೋಗುತ್ತಾರಾ? ರಾಮ್ ಗೋಪಾಲ್ ವರ್ಮಾ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ- ಅಭಿಷೇಕ್ ಜೊತೆಗಿನ ಡಿವೋರ್ಸ್ ವದಂತಿ ಮಧ್ಯೆ ಪುತ್ರಿಯೊಂದಿಗೆ ಒಬ್ಬಂಟಿಯಾಗಿ ಹೊರಹೋದ ಐಶ್ವರ್ಯ ರೈ! ವಿಚ್ಚೇದನ ಕನ್ಫರ್ಮ್??
ಅಲ್ಲು ಅರ್ಜುನ್ ಅವರನ್ನು ಡಿಸೆಂಬರ್ 13ರಂದು ಬಂಧಿಸಿ ಚಂಚಲಗುಡ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿತ್ತು. ಮರು ದಿನ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಇದಾದ ನಂತರವೂ ಅಲ್ಲು ಅರ್ಜುನ್ ಸತ್ತ ಅಭಿಮಾನಿಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದರೆ ಹೊರತು ಅವರ ಮನೆಗೆ ತೆರಳಿ ಸಾಂತ್ವನ ಹೇಳುವ ಸೌಜನ್ಯ ತೋರಲಿಲ್ಲ. ಈ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವುದರಿಂದ ರಾಮ್ ಗೋಪಾಲ್ ವರ್ಮಾ ಈಗ ಅಲ್ಲು ಅರ್ಜುನ್ ಪರ ಪೋಸ್ಟ್ ಹಾಕಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.