ಹಳೆ ಪ್ರೀತಿ ಮರೆಯೋಕೆ ಸಾಧ್ಯಾನಾ?.. ಮಾಜಿ ಪ್ರೇಮಿ ಶಾಹಿದ್‌ ಕಪೂರ್‌ ಜೊತೆ ಕಾಣಿಸಿಕೊಂಡ ಕರೀನಾ ಕಪೂರ್!‌ ಫ್ಯಾನ್ಸ್‌ ಫುಲ್‌ ಖುಷ್..‌

kareena kapoor and shahid kapoor: ಶಾಹಿದ್‌ ಕಪೂರ್-ಕರೀನಾ ಕಪೂರ್‌ ಲವ್‌ ಸ್ಟೋರಿ ಯಾರಿಗೆ ಗೊತ್ತಿಲ್ಲ ಹೇಳಿ.. ಈಗ ಇಬ್ಬರು ಬೇರೆಯವರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ.. ಆದರೆ ಇವರಿಬ್ಬರು ಇದೀಗ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.. ಸದ್ಯ ಆ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ. 

1 /6

ನಟ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಈ ಫೋಟೋಗಳು ಮತ್ತು ವೀಡಿಯೊಗಳಿಗೆ ಅಭಿಮಾನಿಗಳಿಂದ ಲೈಕ್‌ಗಳು ಮತ್ತು ಕಾಮೆಂಟ್‌ಗಳು ಹರಿದು ಬರುತ್ತಿವೆ. ಸುಮಾರು ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ಬೇರ್ಪಟ್ಟರು.  

2 /6

 ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಯಾಗಿದ್ದರು. ಇವರಿಬ್ಬರ ಬ್ರೇಕಪ್ ನಂತರ ಅಭಿಮಾನಿಗಳು ಕೂಡ ತುಂಬಾ ನೊಂದುಕೊಂಡಿದ್ದರು. ಆದರೆ ಈಗ ಹಲವು ವರ್ಷಗಳ ನಂತರ ಶಾಹಿದ್-ಕರೀನಾ ಒಂದೇ ಪ್ರೆಮ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  

3 /6

ಇಬ್ಬರೂ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಈ ಶಾಲೆಯಲ್ಲಿ ಓದುತ್ತಾರೆ. ಆದ್ದರಿಂದ, ವಾರ್ಷಿಕ ಕಾರ್ಯಕ್ರಮವು ಹಲವಾರು ಸೆಲೆಬ್ರಿಟಿಗಳ ಆಗಮನವನ್ನು ಕಂಡಿತು.  

4 /6

ವಾರ್ಷಿಕ ಸಮಾರಂಭದಲ್ಲಿ, ಶಾಹಿದ್ ಕಪೂರ್ ಕರೀನಾ ಮತ್ತು ಸೈಫ್ ಅಲಿ ಖಾನ್ ಅವರ ಪತ್ನಿ ಮೀರಾ ರಜಪೂತ್ ಅವರೊಂದಿಗೆ ಒಂದೇ ಸಾಲಿನಲ್ಲಿ ಕುಳಿತಿದ್ದಾರೆ. ಹೀಗಾಗಿ ಇದೀಗ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

5 /6

ಕರೀನಾ ಮತ್ತು ಸೈಫ್ ಅವರ ಮಕ್ಕಳಾದ ತೈಮೂರ್ ಮತ್ತು ಜಹಾಂಗೀರ್ ಇಬ್ಬರೂ ಅಂಬಾನಿಯ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಹಿದ್ ಮತ್ತು ಮೀರಾ ಅವರ ಮಕ್ಕಳಾದ ಮಿಶಾ ಮತ್ತು ಜೈನ್ ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಹಾಗಾಗಿ ವಾರ್ಷಿಕ ಕಾರ್ಯಕ್ರಕ್ಕೆ ಈ ಎಲ್ಲಾ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ..   

6 /6

ಶಾಹಿದ್ ಮತ್ತು ಕರೀನಾ 2000 ರಲ್ಲಿ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿ.. ಏಳುವರ್ಷಗಳ ಬಳಿಕ 2007 ರಲ್ಲಿ ಬೇರ್ಪಟ್ಟರು. ಕರೀನಾ ನಂತರ 2012 ರಲ್ಲಿ ಸೈಫ್ ಅವರನ್ನು ವಿವಾಹವಾದರು ಮತ್ತು ಶಾಹಿದ್ 2015 ರಲ್ಲಿ ಮೀರಾ ರಜಪೂತ್ ಅವರನ್ನು ವಿವಾಹವಾದರು.