Yash Toxic movie : 'ಕೆಜಿಎಫ್' ಫ್ರಾಂಚೈಸಿಯ ಯಶಸ್ಸಿನ ನಂತರ, ರಾಕಿಂಗ್ ಸ್ಟಾರ್ ಯಶ್ ಕೊನೆಗೂ ತಮ್ಮ ಮುಂದಿನ ಚಿತ್ರದ ಟೈಟಲ್‌ ಘೋಷಿಸಿದ್ದಾರೆ. ರಾಕಿಭಾಯ್‌ 19ನೇ ಚಿತ್ರಕ್ಕೆ 'ಟಾಕ್ಸಿಕ್' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್‌ ಕಟ್‌ ಹೇಳಲಿದ್ದಾರೆ.


COMMERCIAL BREAK
SCROLL TO CONTINUE READING

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಟಾಕ್ಸಿಕ್‌ ಸಿನಿಮಾದ ಟೈಟಲ್‌ ಅನ್ನು ಇಂದು ಬೆಳಗ್ಗೆ 9.55ಕ್ಕೆ ಬಹಿರಂಗ ಪಡಿಸಲಾಯಿತು. ಈಗಾಗಲೇ ಟೈಟಲ್‌ ರಿವೀಲ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಲ್ಲದೆ, ಕೆಜಿಎಫ್‌ 2 ನಂತರ ವರ್ಷಗಳ ಗ್ಯಾಪ್‌ ತೆಗೆದುಕೊಂಡಿದ್ದ ಯಶ್‌ ಈ ಸಿನಿಮಾದ ಮೂಲಕ ಕಮ್‌ಬ್ಯಾಕ್‌ ಮಾಡುತ್ತಿರುವುದು ಅವರ ಫ್ಯಾನ್ಸ್‌ಗೆ ಖುಷಿ ನೀಡಿದೆ.


ಇದನ್ನೂ ಓದಿ: Yash 19 : ಯಶ್‌ ʼಟಾಕ್ಸಿಕ್‌ʼ ಮೂಲಕ ಸ್ಯಾಂಡಲ್‌ವುಡ್‌ಗೆ ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಎಂಟ್ರಿ ಪಕ್ಕಾ..! 


ಟೀಸರ್ ಹಂಚಿಕೊಂಡಿರುವ ಯಶ್, ʼನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತಿದೆʼ - ರೂಮಿ ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್" ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಟಾಕಿಕ್ಸ್‌ ಸಿನಿಮಾ ಏಪ್ರಿಲ್ 10, 2025 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.


'ಟಾಕ್ಸಿಕ್' ಡ್ರಗ್ ಮಾಫಿಯಾದ ಕಥಾ ಹಂದರ ಹೊಂದಿರುವ ಸಿನಿಮಾ. ಈ ಚಿತ್ರವು ಗೋವಾ ಮೂಲದ ಗ್ಯಾಂಗ್‌ಸ್ಟರ್ ಕಥೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 'ಕೆಜಿಎಫ್' ಚಿತ್ರದಂತೆ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ. 


ಇದನ್ನೂ ಓದಿ: Yash : ಯಶ್‌ ಹೊಸ ಸಿನಿಮಾ Toxic ಟೈಟಲ್‌ ಅರ್ಥವೇನು ಗೊತ್ತೆ..? ಸಖತ್‌ ಇಂಟ್ರಸ್ಟಿಂಗ್‌ ಆಗಿದೆ


ಯಶ್ ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಟಾಕ್ಸಿಕ್‌ ಕನ್ನಡದಲ್ಲಿ ತಯಾರಾಗುತ್ತಿದ್ದರೂ ಸಹ ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದ ನಾಯಕಿ ಸೇರಿದಂತೆ ಇತರೆ ಪಾತ್ರಗಳು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕ ಸೇರಿದಂತೆ ಚಿತ್ರತಂಡದ ಹೆಸರು ಇನ್ನೂ ಬಹಿರಂಗವಾಗಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.