Yash missing Poster: ನಟ ಯಶ್ ಅಭಿಮಾನಿಗಳು ಯಶ್ 19 ರ ಅಪ್‌ಡೇಟ್‌ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್‌ನಿಂದ ಪ್ರತಿಕ್ರಿಯೆಗಾಗಿ ಕಾದು ಸುಸ್ತಾಗಿದ್ದಾರೆ. ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ಬಗ್ಗೆ ಸುದ್ದಿ ಕೇಳಲು ಉತ್ಸುಕರಾಗಿದ್ದಾರೆ.  ಆದರೆ ಯಶ್‌ ಈ ಬಗ್ಗೆ ಯಾವ ಅಪ್‌ಡೇಟ್‌ ಅನ್ನೂ ನೀಡಿದ ಹಿನ್ನೆಲೆ ಫ್ಯಾನ್ಸ್‌ ಒಂದು ವಿಶಿಷ್ಟವಾದ ಆಲೋಚನೆಯೊಂದಿಗೆ ಬಂದಿದ್ದಾರೆ. ಕೆಜಿಎಫ್‌ 2 ಬಳಿಕ ಯಶ್‌ ಯಾವ ಸಿನಿಮಾವನ್ನೂ ಘೋಷಿಸದಿರುವ ಕಾರಣ, ಅವರ ಕಟ್ಟಾ ಬೆಂಬಲಿಗರು ಈಗ ತಮ್ಮ ಹತಾಶೆ ಅಥವಾ ನಿರಾಶೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿದ್ದಾರೆ. ಅತ್ಯಂತ ಸೃಜನಶೀಲತೆಯಿಂದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟ್ರೆಂಡ್ ಆಯ್ತು ರಾಕಿ KGF ಲುಕ್...ಸಲಾಂ ರಾಕಿಭಾಯ್‌ ಎಂದ ಜಪಾನಿಯರು..!


ಯಶ್ ಅವರ ಮುಂದಿನ ಸಿನಿಮಾವನ್ನು ಆದಷ್ಟು ಬೇಗ ಘೋಷಿಸಲು ಮನವಿ ಮಾಡುವ ಪ್ರಯತ್ನದಲ್ಲಿ, ಅವರ ಅಭಿಮಾನಿಗಳ ಗುಂಪು ಈಗ ಮಿಸ್ಸಿಂಗ್ ಜಾಹೀರಾತನ್ನು ರಚಿಸಿದೆ. ಅದರಲ್ಲಿ "ಕಾಣೆಯಾಗಿದ್ದಾರೆ" ಎಂದು ಬರೆದು ಕೆಳಗೆ ಯಶ್‌ ಫೋಟೋ ಹಾಕಿದ್ದಾರೆ. "ರಾಕಿಂಗ್ ಸ್ಟಾರ್ ಯಶ್ ನಮ್ಮ ಚಿತ್ರರಂಗದ ಹೆಮ್ಮೆ, ಕೆಜಿಎಫ್ 2 ಯಶಸ್ಸಿನ ನಂತರ ಅವರು ತಮ್ಮ ಮುಂದಿನ ಚಿತ್ರವನ್ನು ಘೋಷಿಸುವುದಾಗಿ ಹೇಳಿದರು ಆದರೆ ಅವರು ಅದನ್ನು ಇನ್ನೂ ಮಾಡಿಲ್ಲ, ಇದು ನಮ್ಮಲ್ಲಿ ಬಹಳಷ್ಟು ನಿರಾಶೆಯನ್ನು ಉಂಟುಮಾಡಿದೆ. ಅಭಿಮಾನಿಗಳ ಭಾವನೆಗಳೊಂದಿಗೆ ಆಟವಾಡುತ್ತಿದ್ದೀರಿ" ಎಂದು 'ಜಾಹೀರಾತು' ಪೋಸ್ಟರ್‌ ವೈರಲ್‌ ಮಾಡಿದ್ದಾರೆ.


 


 ಹೊಸ ಅವತಾರದಲ್ಲಿ ʼದಿ ಕೇರಳ ಸ್ಟೋರಿʼ ಬೆಡಗಿ..ಪೋಟೋಸ್‌ ನೋಡಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.