Yash Raj Films: 30 ಸಾವಿರ ಸಿನಿ ಕಾರ್ಮಿಕರ ಉಚಿತ ವ್ಯಾಕ್ಸಿನೇಷನ್ ಜವಾಬ್ದಾರಿ ಹೊತ್ತ YRF
Yash Raj Films - ಕೊರೊನಾ ವೈರಸ್ ನ ಎರಡನೇ ಅಲೆಗೆ (Coronavirus Second Wave)ಚಿತ್ರೋದ್ಯಮ (Bollywood) ಕೂಡ ತತ್ತರಿಸಿ ಹೋಗಿದೆ. ಮುಂಬೈನಲ್ಲಿ ಲಾಕ್ ಡೌನ್ ಬಳಿಕ ಶೂಟಿಂಗ್ ಕೆಲಸ ಬಹುತೇಕ ನಿಂತುಹೋಗಿದೆ.
ಮುಂಬೈ: Yash Raj Films - ಕೊರೊನಾ ವೈರಸ್ ನ ಎರಡನೇ ಅಲೆಗೆ (Coronavirus Second Wave)ಚಿತ್ರೋದ್ಯಮ (Bollywood) ಕೂಡ ತತ್ತರಿಸಿ ಹೋಗಿದೆ. ಮುಂಬೈನಲ್ಲಿ ಲಾಕ್ ಡೌನ್ ಬಳಿಕ ಶೂಟಿಂಗ್ ಕೆಲಸ ಬಹುತೇಕ ನಿಂತುಹೋಗಿದೆ. ಇದರಿಂದ ಮುಂಬೈ ನ ಚಲನಚಿತ್ರ ನಗರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ತಂತ್ರಜ್ಞರು ಹಾಗೂ ಜ್ಯೂನಿಯರ್ ಆರ್ಟಿಸ್ಟ್ ಗಳು ನಲುಗಿಹೋಗಿದ್ದಾರೆ. ಈ ಜನರ ವ್ಯಾಕ್ಸಿನೆಶನ್ (Corona Vaccination) ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಯಶ್ ರಾಜ್ ಫಿಲಂಸ್ ಧಾವಿಸಿದೆ.
30 ಸಾವಿರ ಸಿನಿ ಕಾರ್ಮಿಕರಿಗೆ ವ್ಯಾಕ್ಸಿನ್
ಯಶ್ ರಾಜ್ ಫಿಲಂಸ್ (Yash Raj Films) ಚಿತ್ರ ನಗರಿಯಲ್ಲಿ (Mumbai Film City) ಕಾರ್ಯನಿರ್ವಹಿಸುವ ಸುಮಾರು 30 ಸಾವಿರ ಸಿನಿ ಕಾರ್ಮಿಕರಿಗೆ ಉಚಿತ ವ್ಯಾಕ್ಸಿನೆಷೆನ್ ಮಾಡಿಸುವುದಾಗಿ ಹೇಳಿದೆ. ಈ ಹಿನ್ನೆಲೆ ಯಶ್ ರಾಜ್ ಫಿಲಂಸ್ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರುಗೆ ಪತ್ರ ಬರೆದು ಲಸಿಕೆಯ ಪ್ರಮಾಣಗಳನ್ನು ನೀಡಲು ಕೋರಿದೆ.
ಇದನ್ನೂ ಓದಿ- Oxygen Shortage : ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಮತ್ತೆ 4 ರೋಗಿಗಳು ಸಾವು!
ಮುಖ್ಯಮಂತ್ರಿಗಳಿಗೆ ಪತ್ರ ಬರೆದ YRF
ದಿ ಯಶ್ ಚೋಪ್ರಾ ಫೌಂಡೇಶನ್ ವತಿಯಿಂದ ಬರೆಯಲಾಗಿರುವ ಈ ಪತ್ರದಲ್ಲಿ, "ಚಿತ್ರೋದ್ಯಮದ ಸುಮಾರು 30 ಸಾವಿರ ನೊಂದಾಯಿತ ಕಾರ್ಮಿಕರಿಗಾಗಿ ಲಸಿಕೆ ಖರೀದಿಸಲು ಅನುಮತಿ ನೀಡಬೇಕು. ಲಸಿಕೆಗಳ ಸಾಗಾಣಿಕೆ ಹಾಗೂ ಲಸಿಕಾಕರಣಕ್ಕಾಗಿ ಬೇಕಾಗುವ ಎಲ್ಲ ಸೌಕರ್ಯಗಳ ಖರ್ಚು ಯಶ್ ಚೋಪ್ರಾ ಫೌಂಡೇಶನ್ ಭರಿಸಲಿದೆ" ಎಂದು ಹೇಳಲಾಗಿದೆ.
ಇದನ್ನೂ ಓದಿ- Coronavirus: ಶಾಕಿಂಗ್! ನಿಮ್ಮ ತೂಕದಿಂದಲೂ ಕರೋನ ಅಪಾಯ
FWICE ಕೂಡ ಪತ್ರ ಬರೆದಿದೆ
ಇದಕ್ಕೆ ಸಂಬಂಧಿಸಿದಂತೆ ಫೆಡರೇಶನ್ ಆಫ್ ವೆಸ್ಟ್ರನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE)ಕೂಡ ಮಹಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, "ಸಿನಿ ನಗರಿಯ 30 ಸಾವಿರ ಕಾರ್ಮಿಕರಿಗೆ ಲಸಿಕೆ ಹಾಗೂ ಪ್ರತ್ಯೇಕ ಲಸಿಕಾಕರಣ (Coronavirus Vaccination) ಕೇಂದ್ರದ ವ್ಯವಸ್ಥೆಯ" ಕುರಿತು ಹೇಳಿಕೊಂಡಿದೆ. "ಇದಕ್ಕಾಗಿ ತಗಲುವ ವೆಚ್ಚವನ್ನು ಭರಿಸಲು ಯಶ್ ಚೋಪ್ರಾ ಫೌಂಡೇಶನ್ ಮುಂದೆ ಬಂದಿದ್ದು, ಅದು ವ್ಯಾಕ್ಸಿನ್ ಗೆ ಸಂಬಂಧಿಸಿದ ಖರ್ಚು ಭರಿಸಲಿದೆ ಮತ್ತು FWICE ಈ ಕೆಲಸದಲ್ಲಿ ಬೇಕಾಗುವ ಎಲ್ಲ ರೀತಿಯ ಸಹಾಯ ಒದಗಿಸಲಿದೆ" ಎಂದು ಅದು ಹೇಳಿದೆ.
ಇದನ್ನೂ ಓದಿ-Coronavirus : ಇದೆಂಥಾ ಕಲಿಗಾಲ..! ಸ್ಮಶಾನದ ಮುಂದೆಯೂ ಹೌಸ್ ಫುಲ್ ಬೋರ್ಡ್ ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.