Complete Lockdown : ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದಿನ ದಿನಗಳಲ್ಲಿ ಅಸಂಭವ! ಯಾಕೆ ಇಲ್ಲಿದೆ 

ವೈರಸ್ ತಡೆಗಟ್ಟಲು ದೇಶದಲ್ಲಿ ಒಟ್ಟು ಲಾಕ್ ಡೌನ್ ವಿಧಿಸುವಂತೆ ತಜ್ಞರು ಒತ್ತಾಯ

Last Updated : May 4, 2021, 11:50 AM IST
  • ಭಾರತದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ
  • ಕಳೆದ ವರ್ಷದಂತೆ ಈ ವರ್ಷವೂ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸುವ ಸಾಧ್ಯತೆಯಿಲ್ಲ
  • ವೈರಸ್ ತಡೆಗಟ್ಟಲು ದೇಶದಲ್ಲಿ ಒಟ್ಟು ಲಾಕ್ ಡೌನ್ ವಿಧಿಸುವಂತೆ ತಜ್ಞರು ಒತ್ತಾಯ
Complete Lockdown : ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದಿನ ದಿನಗಳಲ್ಲಿ ಅಸಂಭವ! ಯಾಕೆ ಇಲ್ಲಿದೆ  title=

ನವದೆಹಲಿ : ಭಾರತದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ವರ್ಷದಂತೆ ಈ ವರ್ಷವೂ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್(Complete Lockdown) ವಿಧಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

ದೇಶಾದ್ಯಂತ ಈಗಾಗಲೇ 150 ಜಿಲ್ಲೆಗಳಲ್ಲಿ ಮಿನಿ-ಲಾಕ್‌ಡೌನ್ ಮತ್ತು ಶೇ.15 ಕ್ಕಿಂತ ಹೆಚ್ಚು ಪ್ರಕರಣಗಳಿದ್ದರು ಕೋವಿಡ್-19 ಹರಡುವುದನ್ನು ತಡೆಯಲು ಕೇಂದ್ರವು ಲಾಕ್‌ಡೌನ್(Lockdown) ಅನ್ನು ವಿಧಿಸುವುದಿಲ್ಲ ಎಂದು ಹೇಳಿದೆ. ಆದ್ರೆ, ಕೊರೊನಾವೈರಸ್ ಹರಡುವುದನ್ನು ತಡೆಯಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ಬಂಧಗಳನ್ನು ವಿಧಿಸಲು ಮತ್ತು ‘ಕಸ್ಟಮೈಸ್ ಮಾಡಿದ ಲಾಕ್‌ಡೌನ್‌ಗಳನ್ನು’ ಜಾರಿಗೆ ತರಲು ಕೇಂದ್ರವು ನಿರ್ದೇಶಿಸಿದೆ. ಸುಮಾರು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಲಾಕ್‌ಡೌನ್ ತರಹದ ನಿರ್ಬಂಧಗಳು ಜಾರಿಯಲ್ಲಿವೆ.

ಇದನ್ನೂ ಓದಿ : Oxygen On Wheel ಶುರು ಮಾಡಿದ ಆನಂದ್ ಮಹೇಂದ್ರ : ಅಗತ್ಯ ಇರುವವರ ಮನೆ ಬಾಗಿಲಿಗೆ ತಲುಪಲಿದೆ ನೆರವು

ದೇಶದಲ್ಲಿ ಪೂರ್ಣ ಲಾಕ್‌ಡೌನ್ ಯಾಕೆ ಬೇಡ?

ಏಪ್ರಿಲ್ 20, 2021 ರಂದು ಪ್ರಧಾನಿ ಮೋದಿ(PM Narendra Modi) ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರಗಳು ಲಾಕ್ ಡೌನ್ ಅನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಬೇಕು ಎಂದು ಹೇಳಿದ್ದರು. ಕರೋನವೈರಸ್ ನ ಎರಡನೇ ಅಲೆಯಿಂದಾಗಿ ಆರ್ಥಿಕ ಚಟುವಟಿಕೆ ಮತ್ತು ಜೀವನೋಪಾಯವು ಅಸ್ತವ್ಯಸ್ತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. “ನಾವು ದೇಶವನ್ನು ಲಾಕ್‌ಡೌನ್‌ನಿಂದ ಉಳಿಸಬೇಕಾಗಿದೆ. ರಾಜ್ಯಗಳು ಸೂಕ್ಷ್ಮ ವಲಯಗಳತ್ತ ಗಮನ ಹರಿಸಬೇಕು ”ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ : ICICI ಬ್ಯಾಂಕ್‌ಗೆ 3 ಕೋಟಿ ರೂ.ಗಳ ದಂಡ ವಿಧಿಸಿದ ಆರ್‌ಬಿಐ, ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?

ತಜ್ಞರು ಪೂರ್ಣ ಲಾಕ್‌ಡೌನ್‌ಗೆ ಒತ್ತಾಯ!

ವೈರಸ್ ತಡೆಗಟ್ಟಲು ದೇಶದಲ್ಲಿ ಒಟ್ಟು ಲಾಕ್ ಡೌನ್ ವಿಧಿಸುವಂತೆ ತಜ್ಞರು ಒತ್ತಾಯಿಸಿದ್ದಾರೆ. ಭಾರತದ ಕೋವಿಡ್ -19(COVID-19) ಟಾಸ್ಕ್ ಪೋರ್ಸ್ ಸದಸ್ಯರು ಮತ್ತು ಏಮ್ಸ್(AIIMS) ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಅವರು ಕೇಂದ್ರಕ್ಕೆ ದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಎಣ್ಣೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ -10ರಿಂದ 40 ರೂ ಹೆಚ್ಚಾಗಲಿದೆ ಬೆಲೆ

ಕೋವಿಡ್ -19 ಹರಡುವುದನ್ನು ತಡೆಯಲು ಭಾರತ ಸರ್ಕಾರ(Govt of India)ವು ಕೆಲವು ವಾರಗಳವರೆಗೆ ಲಾಕ್‌ಡೌನ್ ವಿಧಿಸಬೇಕು ಎಂದು ಅಮೆರಿಕದ ಉನ್ನತ ಸಾಂಕ್ರಾಮಿಕ ಸಲಹೆಗಾರ ಆಂಥೋನಿ ಫೌಸಿ ಸೂಚಿಸಿದ್ದಾರೆ.  ಆಮ್ಲಜನಕ ಪಡೆಯುವುದು, ಸರಬರಾಜು ಮಾಡುವುದು, ಔಷಧಿ ಪಡೆಯುವುದು, ಪಿಪಿಇ ಪಡೆಯುವುದು, ಆ ರೀತಿಯ ವಸ್ತುಗಳು ಪಡೆಯುವುದು ಮುಖ್ಯ ಎಂದು ಫೌಸಿ ಹೇಳಿದ್ದಾರೆ.

ಇದನ್ನೂ ಓದಿ : Apple Watch: ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರಲಿದೆ ಹೊಸ ಆಪಲ್ ವಾಚ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News