ಮುಂಬೈ: ಕೆಜಿಎಫ್ 2 ಆರ್ಭಟಕ್ಕೆ ಬಹುತೇಕ ಬಾಲಿವುಡ್ ಸಿನಿಮಾಗಳು ನಲುಗಿ ಹೋಗಿವೆ, ಅಷ್ಟರ ಮಟ್ಟಿಗೆ ಈಗ ಕೆಜಿಎಫ್ ೨ ಭಾರತೀಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ.ಈ ಚಿತ್ರ ಬಿಡುಗಡೆಯಾದ ಮೊದಲ ದಿನದಿಂದ ಹಿಡಿದು ಇಂದಿನವರೆಗೂ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ.ಈ ಚಿತ್ರದ ಭರ್ಜರಿ ನಾಗಾಲೋಟಕ್ಕೆ ಹಿರೋಪಂತಿ ೨ ಹಾಗೂ ರನ್ವೇ 34 ನಂತಹ ಘಟಾನುಘಟಿ ನಾಯಕರುಗಳ ಚಿತ್ರಗಳು ಈಗ ಸಪ್ಪೆಯಾಗಿವೆ.


ಕೆಜಿಎಫ್ ೨ ಚಿತ್ರವು ಹಿಂದಿ ಬೆಲ್ಟ್ ವೊಂದರಲ್ಲಿಯೇ  397.95 ಕೋಟಿಗಳನ್ನು ಗಳಿಸಿದೆ. ಅಚ್ಚರಿ ಎಂದರೆ ಇದುವರೆಗೆ ಯಾವುದೇ ಹಿಂದಿ ಸಿನಿಮಾ ಕೂಡ ಸಾಧನೆಯನ್ನು ಮಾಡಿಲ್ಲ, ಈಗ ಬಾಹುಬಲಿ 2 ಮತ್ತು ಕೆಜಿಎಫ್ 2 ಕ್ರಮವಾಗಿ ಹಿಂದಿ ಬೆಲ್ಟ್ ನಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ.ಕೆಜಿಎಫ್ ಚಿತ್ರವು ಇನ್ನೂ ಬಾಕ್ಸ್ ಆಫೀಸ್ ನಲ್ಲಿ ಹವಾ ಮಾಡುತ್ತಿರುವುದರಿಂದ ಇದರ ಅಂತಿಮ ಗಳಿಕೆಯನ್ನು ನಾವು ಇನ್ನೂ ಕುತೂಹಲದಿಂದ ನೋಡಬೇಕಾಗಿದೆ.ಈದ್ ನಂತರ ಮತ್ತೆ ಗರಿಗೆದರಿರುವ ಕೆಜಿಎಫ್ ೨ ಗಳಿಕೆ ಈಗಿನ ಟ್ರೆಂಡ್ ಇನ್ನೂ ಕೆಲವು ದಿನಗಳು ಮುಂದುವರೆದಿದ್ದೆ ಆದಲ್ಲಿ ಸುಲಭವಾಗಿ 440 ಕೋಟಿ ರೂ.ಗಳ ವರೆಗೆ ಸುಲಭವಾಗಿ ಹಿಂದಿ ಬೆಲ್ಟ್ ನಲ್ಲಿಯೇ ಗಳಿಸಲಿದೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೇವಲ 3 ವಾರಗಳಲ್ಲಿ 1084.37 ಕೋಟಿ ರೂ ಗಳಿಸಿದ ಕೆಜಿಎಫ್ 2..!


ತರಣ್ ಆದರ್ಶ್ ಟ್ವೀಟ್ ಮಾಡಿ ಹಾಲಿವುಡ್ ನಂತಹ ಡಾಕ್ಟರ್ ಸ್ಟ್ರೇಂಜ್ ಸಿನಿಮಾ ಬಿಡುಗಡೆ ನಡುವೆಯೂ ಕೂಡ ಕೆಜಿಎಫ್ 2 ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಇನ್ನೂ ಹಾಗೆ ಮುನ್ನುಗ್ಗುತ್ತಿದೆ,ನಾಲ್ಕನೇ ವಾರದ ಅಂತ್ಯಕ್ಕೆ ಈ ಚಿತ್ರವು 400 ಕೋಟಿ ರೂ.ಗಳ ಗಾಡಿಯನ್ನು ತಲುಪಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.


ಇದನ್ನು ಓದಿ: ರಾಜ್ಯದಲ್ಲಿ ಒಮಿಕ್ರಾನ್‌ ಪತ್ತೆ: ದೇಶದಲ್ಲಿ 3,545 ಹೊಸ ಕೊರೊನಾ ಪ್ರಕರಣ ದಾಖಲು


ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ೨ ಮಾಡುತ್ತಿರುವ ಹವಾಗೆ ಬೆರಗಾಗಿರುವ ಭಾರತೀಯ ಸಿನಿಮಾದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ರನ್ನು ಭಾರತೀಯ ಸಿನಿಮಾದ ವೀರಪ್ಪನ್ ಎಂದು ಶ್ಲಾಘಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.