Yash Letter to Fans : ರಾಕಿಂಗ್ ಸ್ಟಾರ್‌ ಯಶ್‌ ಹುಟ್ಟು ಹಬ್ಬ ಅಂದರೆ ಅದು ಅವರ ಅಭಿಮಾನಿಗಳಿಗೆ ದೊಡ್ಡ ಹಬ್ಬದಂತೆ. ಪ್ರತಿ ವರ್ಷ ಯಶ್ ತಮ್ಮ ಅಭಿಮಾನಿಗಳ ಜೊತೆ ಕೇಕ್‌ ಕಟ್‌ ಮಾಡಿ ಜನ್ಮದಿನವನ್ನು ಸಂಭ್ರಮಿಸುತ್ತಾರೆ. ಜನವರಿ 8 ರಂದು ತಮ್ಮ ಬರ್ತ್‌ ಡೇ ಆಚರಿಸಿಕೊಳ್ಳಲಿರುವ ಯಶ್‌ ಅಭಿಮಾನಿಗಳಿಗಾಗಿ ಸರ್‌ಪ್ರೈಸ್‌ ಕೊಡಲು ಸಿದ್ಧರಾಗಿದ್ದಾರೆ. ಅಲ್ಲದೇ ಈ ಬಗ್ಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಬಿಸೋಕೆ ಶುರು ಮಾಡಿದ್ದೀರಿ ಎಂದು ಯಶ್‌ ಬರೆದುಕೊಂಡಿದ್ದಾರೆ.


ಇದನ್ನೂ ಓದಿ : ಥಿಯೇಟರ್ & OTTಯಲ್ಲಿ ‘ಕಾಂತಾರ’ ಸೂಪರ್ ಹಿಟ್; ಸ್ಟಾರ್ ಸುವರ್ಣದಲ್ಲಿ ದೈವ ದರ್ಶನ!


ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿರುವ ಯಶ್‌, ನಾನು ಕೂಡ ಈ ವರ್ಷದ ಹುಟ್ಟು ಹಬ್ಬದಂದು ನಿಮ್ಮನ್ನು ನೋಡಬೇಕು. ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯಕೊಡಿ ಎಂದಿದ್ದಾರೆ.


 


ಗೋಲ್ಡನ್ ಸ್ಟಾರ್ ಗಣೇಶ್ ‘ಬಾನ ದಾರಿಯಲ್ಲಿ’ ಬಂತು ಇಂಪಾದ ಹಾಡು..


ನಟ ಯಶ್‌ ಅವರು ಇತ್ತೀಚೆಗೆ ಹೊಸ ಫೋಟೋವೊಂದನ್ನು ಶೇರ್‌ ಮಾಡಿದ್ದರು, ಇದನ್ನು ನೋಡಿ ಅನೇಕರು ಅವರು ಹೊಸ ಪ್ರಾಜೆಕ್ಟ್‌ ಒಂದರಲ್ಲಿ ಕೆಲಸ ಮಾಡಲಿದ್ದಾರೇನೋ ಎಂದು ಭಾವಸಿದ್ದರು. ಅಲ್ಲದೇ ಕೆಜಿಎಫ್‌ 2  ಬಳಿಕ ಯಶ್‌ ಅವರ ಮುಂದಿನ ಸಿನಿಮಾ ಯಾವುದಾಗಲಿದೆ ಎಂಬ ಕಾತುರ ಕೂಡ ಹೆಚ್ಚಾಗಿತ್ತು. ಇದೀಗ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಯಶ್‌ ಬರೆದ ಈ ವಿಶೇಷ ಪತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.