ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಮಾಜಿಕ ಮಾಧ್ಯಮಗಳ ಮೇಲೆ ಹಲವು ವಿಡಿಯೋಗಳು ವೈರಲ್ ಆಗಿವೆ. ಅವುಗಳಲ್ಲಿ  ರಾನು ಮಂಡಲ್ ಅವರ ವಿಡಿಯೋ ಕೂಡ ಒಂದಾಗಿದೆ. ಹೌದು, ಬಾಲಿವುಡ್ ನಿಂದ ಹಾಲಿವುಡ್ ನಲ್ಲಿಯೂ ಕೇಳಿಬರುತ್ತಿರುವ ರಾನು ಮಂಡಲ್ ಧ್ವನಿ.  ಇಂದು ನಾವು ನಿಮಗೆ 2019ನೇ ಸಾಲಿನಲ್ಲಿ ಸಾಮಾಜಿಕ  ಮಾಧ್ಯಮಗಳ ಮೇಲೆ ಭಾರೀ ಹವಾ ಸೃಷ್ಟಿಸಿರುವ 5 ವಿಡಿಯೋಗಳನ್ನು ತೋರಿಸಲು ಹೊರಟಿದ್ದೇವೆ. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಹೊಸ ಟ್ರೆಂಡ್ ಹುಟ್ಟುಹಾಕಿದ್ದು, ಇವುಗಳಲ್ಲಿ ರಾನು ಮಂಡಲ್ ಸೇರಿದಂತೆ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಸಾರಾ ಅಲಿ ಖಾನ್, ಜಸಲೀನ್ ಮಥರು ಹಾಗೂ ಮೋನಾಲಿಸಾ ಅವರ ಹೆಸರುಗಳು ಶಾಮೀಲಾಗಿವೆ.


COMMERCIAL BREAK
SCROLL TO CONTINUE READING

ರಾನು ಮಂಡಲ್
ಇಡೀ ವಿಶ್ವಾದ್ಯಂತ ಇಂದು ಕೇಳಿ ಬರುತ್ತಿರುವ ಹೆಸರು ಅಂದರೆ ಅದು ರಾನು ಮಂಡಲ್. ಸದ್ಯ ಇವರ ಧ್ವನಿ ವಿಶ್ವಾದ್ಯಂತ ಪ್ರತಿಧ್ವನಿಸುತ್ತಿದೆ. ಪಶ್ಚಿಮ ಬಂಗಾಳದ ನಡಿಯಾ ಜಿಲ್ಲೆಯ ವಾಸಿಯಾಗಿರುವ 55 ವರ್ಷದ ರಾನೂ ಮರಿಯಾ ಮಂಡಲ್, ರೈಲು ನಿಲ್ದಾಣಗಳಲ್ಲಿ ಹಾಡನ್ನು ಹೇಳಿ ತಮ್ಮ ಉಪಜೀವನ ಸಾಗಿಸುತ್ತಿದ್ದರು. ಇಂದು ಅವರು ಇಡೀ ಬಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇದೇ ವರ್ಷ ಅವರ ಕುರಿತಾದ ವಿಡಿಯೋವೊಂದು ಸೋಸಿಯಲ್ ಮೀಡಿಯಾನಲ್ಲಿ ಭಾರೀ ಹಲ್-ಚಲ್ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ಅವರು ಲತಾ ಮಂಗೇಶ್ಕರ್ ಅವರು ಹಾಡಿರುವ 'ಏಕ್ ಪ್ಯಾರ್ ಕಾ ನಗಮಾ ಹೈ' ಹಾಡನ್ನು ಹೇಳುತ್ತಿದ್ದು, ಇದೇ ವೈರಲ್ ವಿಡಿಯೋ ರಾನು ಅವರ ಭವಿಷ್ಯವನ್ನೇ ಬದಲಾಯಿಸಿದೆ. ವೀಡಿಯೊ ವಿಕ್ಷೀಸಲು ಇಲ್ಲಿ ಕ್ಲಿಕ್ಕಿಸಿ.


ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಹರಿಬಿಟ್ಟ ವೈರಲ್ ವಿಡಿಯೋವೊಂದರಲ್ಲಿ ಪ್ರಿಯಾಂಕಾ ಒಂದು ಚಿಕ್ಕ ಮಗುವಿನ ಜೊತೆಗೆ ನೀರಿನಲ್ಲಿ ಆಟವಾಡುತ್ತಿರುವುದು ಕಂಡುಬಂದಿದೆ. ಪ್ರಿಯಾಂಕಾ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರೀ ವೈರಲ್ ಆಗಿ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.



ಸಾರಾ ಅಲಿ ಖಾನ್
ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಅವರಿಗೆ ಸಂಬಂಧಿಸಿದ ವಿಡಿಯೋವೊಂದೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ವಿಡಿಯೋದಲ್ಲಿ ಸಾರಾ ವ್ಯಾಕ್ಸಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋಗೆ ಜಬರದಸ್ತ್ ಎಂದು ಕಾಮೆಂಟ್ ಮಾಡಿದ್ದ ಆಕೆಯ ಅಭಿಮಾನಿಗಳು ಸಾರಾ ಅಲಿ ಖಾನ್ ಅವರ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.



ಜಸಲೀನ ಮಥರು
'ಬಿಗ್ ಬಾಸ್' ಮಾಜಿ ಸ್ಪರ್ಧಿ ಜಸಲೀನ ಮಥರುಗೆ ಸಂಬಂಧಿಸಿದ ವೀಡಿಯೊವೊಂದು ಕೂಡ ಸೋಸಿಯಲ್ ಮೀಡಿಯಾ ಮೇಲೆ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜಸಲೀನ್ ಕೈಯಲ್ಲಿ ಪೊರಕೆ ಹಿಡಿದು ಮಾಲ್ ವೊಂದರಲ್ಲಿ ಕಸಗೂಡಿಸುತ್ತಿರುವುದು ಕಂಡು ಬಂದಿದೆ. ನಿಜ ಹೇಳುವುದಾದರೆ ಅವರು ಪೊರಕೆ ಖರೀದಿಸಲು ಮಾಲ್ ಗೆ ಭೇಟಿ ನೀಡಿದ್ದರು. ಪೊರಕೆ ಖರೀದಿಯ ವೇಳೆ ಓರ್ವ ಜಾಗರೂಕ ಗ್ರಾಹಕರ ರೀತಿ ತಾವು ಖರೀದಿಸಿದ್ದ ಪೊರಕೆಯನ್ನು ಜಸಲೀನ್ ಪರೀಕ್ಷಿಸುತ್ತಿದ್ದರು ಎನ್ನಲಾಗಿದೆ.



ಮೋನಾಲಿಸಾ
ಭೋಜಪುರಿ ಚಿತ್ರರಂಗದಿಂದ ಬಾಲಿವುಡ್ ವರೆಗೆ ತನ್ನದೇ ಆದ ಛಾಪು ಮೂಡಿಸಿರುವ ಮೋನಾಲಿಸಾ ಅವರ ವಿಡಿಯೋವೊಂದು ಈ ವರ್ಷ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೋನಾಲಿಸಾ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 25ಲಕ್ಷ ಹಿಂಬಾಲಕರನ್ನು ಹೊಂದಿದ ಸಂತಸ ವ್ಯಕ್ತಪಡಿಸಲು ಮೋನಾಲಿಸಾ ಈ ಡಾನ್ಸ್ ವೀಡಿಯೊ ಹಂಚಿಕೊಂಡಿದ್ದು, ಈ ವಿಡಿಯೋ ಹರಿಬಿಡುತ್ತಿದ್ದಂತೆ ಭಾರೀ ವೈರಲ್ ಆಗಿತ್ತು.