Yo Yo Honey Singh: ಪತ್ನಿಗೆ 1 ಕೋಟಿ ಜೀವನಾಂಶ ನೀಡಿ ವಿಚ್ಛೇದನ ಪಡೆದ ಖ್ಯಾತ ಗಾಯಕ ಹನಿಸಿಂಗ್!
ಮದುವೆಯಾದ 11 ವರ್ಷಗಳ ನಂತರ ಪತ್ನಿ ಶಾಲಿನಿ ತಲ್ವಾರ್ನಿಂದ ವಿಚ್ಛೇದನ ಪಡೆದ ಬಾಲಿವುಡ್ ಗಾಯಕ ಹನಿ ಸಿಂಗ್ ದೊಡ್ಡ ಮೊತ್ತದ ಜೀವನಾಂಶ ನೀಡಿದ್ದಾರೆ.
ನವದೆಹಲಿ: ಖ್ಯಾತ ಪಂಜಾಬಿ ಹಾಗೂ ಬಾಲಿವುಡ್ ಸಿಂಗರ್ ಯೋ ಯೋ ಹನಿಸಿಂಗ್ ತಮ್ಮ ಪತ್ನಿ ಶಾಲಿನಿ ತಲ್ವಾರ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಪತ್ನಿಗೆ 1 ಕೋಟಿ ರೂ. ಜೀವನಾಂಶ ನೀಡಿದ ಹನಿಸಿಂಗ್ 11 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.
ಕಳೆದ ವರ್ಷ ಹನಿ ಸಿಂಗ್ ವಿರುದ್ಧ ಶಾಲಿನಿ ತಲ್ವಾರ್ ಹಿಂಸಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆ ಬಾಲಿವುಡ್ ಗಾಯಕನ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಪತಿ ಮತ್ತು ಆತನ ಕುಟುಂಬದವರಿಂದ ದೈಹಿಕ, ಮೌಖಿಕ, ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳಕ್ಕೆ ತುತ್ತಾಗಿದ್ದೇನೆಂದು ಶಾಲಿನಿ ಆರೋಪಿಸಿದ್ದರು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ಹನಿಸಿಂಗ್ ತಳ್ಳಿ ಹಾಕಿದ್ದರು. ಈ ಆರೋಪದ ಬಳಿಕ ವಿಚ್ಛೇದನ ಕೋರಿ ಹನಿಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು.
Yashoda teaser: ಯಶೋದಾ ಟೀಸರ್‌ನಲ್ಲಿ ಗರ್ಭಿಣಿ ಸಮಂತಾ
ಶುಕ್ರವಾರ (ಸೆ.8) ದೆಹಲಿ ಕೋರ್ಟ್‌ನಲ್ಲಿ ನ್ಯಾಯಾಧೀಶರ ಎದುರು ಇಬ್ಬರು ‘ಸೆಟಲ್‌ಮೆಂಟ್’ ಮಾಡಿಕೊಂಡಿದ್ದು, ಶಾಲಿನಿ ತಲ್ವಾರ್‌ಗೆ 1 ಕೋಟಿ ರೂ. ಜೀವನಾಂಶವನ್ನು ಚೆಕ್ ಮೂಲಕ ಹನಿಸಿಂಗ್ ನೀಡಿದ್ದಾರೆ. ಶಾಲಿನಿ ಹಾಗೂ ಹನಿ ಸಿಂಗ್ 2011ರಲ್ಲಿ ವಿವಾಹವಾಗಿದ್ದರು. 11 ವರ್ಷ ಒಟ್ಟಿಗೆ ಸಂಸಾರ ನಡೆಸಿದ ಬಳಿಕ ಇದೀಗ ಪರಸ್ಪರ ಬೇರೆಯಾಗಿದ್ದಾರೆ. ಈ ಹಿಂದೆ ಶಾಲಿನಿ ತಮ್ಮ ವಿರುದ್ಧ ದೈಹಿಕ ಹಿಂಸೆಯ ಆರೋಪ ಮಾಡಿದಾಗ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪತ್ರ ಹಂಚಿಕೊಂಡಿದ್ದ ಹನಿ ಸಿಂಗ್, ಈ ಆರೋಪದಿಂದ ತನಗೆ ತೀವ್ರ ಆಘಾತವಾಗಿದೆ ಅಂತಾ ಹೇಳಿದ್ದರು.
‘ಕಳೆದ 15 ವರ್ಷಗಳಿಂದಲೂ ನಾನು ಸಿನಿಮಾ ಹಾಗೂ ಸಂಗೀತ ಉದ್ಯಮದಲ್ಲಿದ್ದೇನೆ. ನನ್ನ ಹಾಗೂ ನನ್ನ ಪತ್ನಿಯ ಸಂಬಂಧದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ನಾನು ಎಲ್ಲಿಗೇ ಶೂಟಿಂಗ್‌ಗೆ ಹೋದರೂ ಪತ್ನಿಯನ್ನು ತಪ್ಪದೆ ಕರೆದುಕೊಂಡು ಹೋಗುತ್ತೇನೆ. ಖಾಸಗಿ ಇವೆಂಟ್‌ಗಳು, ಮೀಟಿಂಗ್‌ಗಳಿಗೆ ಸಹ ಆಕೆ ನನ್ನ ಜೊತೆಯಲ್ಲಿಯೇ ಇರುತ್ತಾಳೆ. ಆದರೆ ಇದೀಗ ಆಕೆ ನನ್ನು ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾಳೆ. ಈ ಆರೋಪಗಳು ಆಧಾರ ರಹಿತವಾದುದು. ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿರೋ ಕಾರಣ ನಾನು ಹೆಚ್ಚಿಗೆ ಏನೂ ಹೇಳುವುದಿಲ್ಲ’ ಅಂತಾ ಹನಿ ಸಿಂಗ್ ಹೇಳಿದ್ದರು.
ಇದನ್ನೂ ಓದಿ: ರಮೇಶ್ ಅರವಿಂದ್ ಬರ್ತ್‌ಡೇಗೆ ವಿಶ್ ಮಾಡಬೇಕಾ? ಅವರ ಫೋನ್ ನಂಬರ್ ಇಲ್ಲಿದೆ
ಕೌಟುಂಬಿಕ ಹಿಂಸಾಚಾರ ಮತ್ತು ಮದುವೆಯಲ್ಲಿ ಮೋಸ ಮಾಡಿದ್ದಾರೆಂದು ಶಾಲಿನಿ ಆರೋಪಿಸಿದ ನಂತರ ಹನಿಸಿಂಗ್ ವಿಚಾರಣೆಗಾಗಿ ಹಲವಾರು ಬಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಈಗ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ. ದೆಹಲಿಯ ಜಿಲ್ಲಾ ನ್ಯಾಯಾಲಯ ಸಾಕೇತ್ ಇವರಿಬ್ಬರ ವಿಚ್ಛೇದನದ ಮನವಿಯನ್ನು ಅಂಗೀಕರಿಸಿದ್ದರಿಂದ ಪ್ರಕರಣವು ಸುಖಾಂತ್ಯ ಕಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.