ರಮೇಶ್‌ ಅರವಿಂದ್‌ ಬರ್ತ್‌ಡೇಗೆ ವಿಶ್ ಮಾಡಬೇಕಾ? ಅವರ ಫೋನ್ ನಂಬರ್ ‌ಇಲ್ಲಿದೆ

Ramesh Aravind : ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್ ಅವರಿಗೆ ಸಾರ್ವಕಾಲಿಕ ಅಭಿಮಾನಿಗಳಿದ್ದಾರೆ. ವಿವಿಧ ಬಗೆಯ ಪಾತ್ರಗಳ ಮೂಲಕ ಜನರ ಮನಸ್ಸನ್ನು ಗೆದ್ದವರು.

Written by - Chetana Devarmani | Last Updated : Sep 9, 2022, 06:30 PM IST
  • ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್
  • ರಮೇಶ್‌ ಅರವಿಂದ್‌ ಬರ್ತ್‌ಡೇಗೆ ವಿಶ್ ಮಾಡಬೇಕಾ?
  • ರಮೇಶ್‌ ಅರವಿಂದ್‌ ಅವರ ಫೋನ್‌ ನಂಬರ್‌ ಇಲ್ಲಿದೆ
ರಮೇಶ್‌ ಅರವಿಂದ್‌ ಬರ್ತ್‌ಡೇಗೆ ವಿಶ್ ಮಾಡಬೇಕಾ? ಅವರ ಫೋನ್ ನಂಬರ್ ‌ಇಲ್ಲಿದೆ   title=
ರಮೇಶ್​ ಅರವಿಂದ್

Ramesh Aravind : ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್ ಅವರಿಗೆ ಸಾರ್ವಕಾಲಿಕ ಅಭಿಮಾನಿಗಳಿದ್ದಾರೆ. ವಿವಿಧ ಬಗೆಯ ಪಾತ್ರಗಳ ಮೂಲಕ ಜನರ ಮನಸ್ಸನ್ನು ಗೆದ್ದವರು. ಕನ್ನಡದ ಚಿತ್ರರಂಗದಲ್ಲಿ ಅವರು ಎವರ್​ಗ್ರೀನ್ ಹೀರೋ ರಮೇಶ್‌ ಅರವಿಂದ್.‌ ಇವರ ಹುಟ್ಟು ಹಬ್ಬ ಸಮೀಪಿಸುತ್ತಿದೆ. ಇದೇ ಸೆಪ್ಟೆಂಬರ್​ 10ರಂದು ರಮೇಶ್​ ಅರವಿಂದ್​ ಅವರಗೆ ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು ಅವರಿಗೆ ಶುಭಾಶಯ ತಿಳಿಸಬೇಕು ಎಂಬ ಆಸೆ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ತಮ್ಮ ಹುಟ್ಟು ಹಬ್ಬಕ್ಕೆ ಫ್ಯಾನ್ಸ್‌ಗೆ ರಮೇಶ್‌ ಅರವಿಂದ್‌ ಸಿಹಿ ಸುದ್ದಿ ನೀಡಿದ್ದಾರೆ. ಸ್ವತಃ ರಮೇಶ್​ ಅರವಿಂದ್​ ಅವರೇ ತಮ್ಮ ನಂಬರ್‌ ಹಂಚಿಕೊಂಡಿದ್ದು, ಇದಕ್ಕೆ ಸಂದೇಶ ಕಳುಹಿಸಿ ವಿಶ್‌ ಮಾಡಿ ಎಂದಿದ್ದಾರೆ.

ಇದನ್ನೂ ಓದಿ : 

ನೂರಾರು ಸಿನಿಮಾಗಳಲ್ಲಿ ನಟಿಸಿದ, ಪಾಸಿಟಿವ್​ ಮಾತುಗಳಿಂದ ಯುವಜನರನ್ನು ಸೆಳೆದವರು. ರಮೇಶ್​ ಅರವಿಂದ್​ ಎಂದರೆ ಎಲ್ಲ ವಯಸ್ಸಿನವರಿಗೂ ಅಚ್ಚುಮೆಚ್ಚು. ಇದೀಗ ನೀವು ರಮೇಶ್‌ ಅರವಿಂದ್‌ ಅವರ ಅಭಿಮಾನಿಯಾಗಿದ್ದು, ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸಲು ಬಯಸಿದರೆ - 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸಬಹುದು. ಈ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು.

 

 

ವಿಶ್‌ ಮಾತ್ರವಲ್ಲ ರಮೇಶ್​ ಅರವಿಂದ್​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಈ ರೀತಿ ಸಂದೇಶ ಕಳುಹಿಸುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮತ್ತೊಂದು ವಿಶೇಷ ಅಂದ್ರೆ ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ರಿಪ್ಲೈ ನೀಡಲಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ರಮೇಶ್ ಅರವಿಂದ್ ಅವರೇ ಕರೆ ಮಾಡಿ ಮಾತನಾಡಲಿದ್ದಾರೆ.

ಇದನ್ನೂ ಓದಿ : 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News