Garadi Hodirele Halagi song : ಯೋಗರಾಜ್‌ ಭಟ್‌ ನಿರ್ದೇಶನಕ ಕುಸ್ತಿ ಕ್ರೀಡಾ ಆಧಾರಿತ ಕನ್ನಡ ಮಣ್ಣಿನ ʼಗರಡಿʼ ಸಿನಿಮಾದ ʼಹೊಡಿರಲೆ ಹಲಗಿʼ ಹಾಡಿನ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದೆ. ಈ ಅದ್ಭುತ ಗೀತೆಯನ್ನು ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಮತ್ತು ಪ್ರಭುದೇವ ಅವರು ಬಿಡುಗಡೆ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ ಸುಂದರಿ ನಿಶ್ವಿಕಾ ನಾಯ್ಡು ಅಭಿನಯದ ಈ ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.


COMMERCIAL BREAK
SCROLL TO CONTINUE READING

ನಿನ್ನೆ ರಾಜಧಾನಿಯಲ್ಲಿ ಗರಡಿ ಸಿನಿಮಾದ ʼಹೊಡೆರಲೆ ಹಲಗಿʼ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಭಟ್ಟರ ಬರೆದಿರುವ ಹೊಡೆರಲೆ ಹಲಗಿ ಎಂಬ ಪಕ್ಕಾ ಹಳ್ಳಿ ಹಾಡನ್ನು ಚಿತ್ರತಂಡ ರಿಲೀಸ್‌ ಮಾಡಿತು. ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದ್ದು, ನಿಶ್ವಿಕಾ ನಾಯ್ಡು ಡಾನ್ಸ್‌ ಪಡ್ಡೆ ಹೈಕ್ಳ ಮನಗೆದ್ದಿದೆ. ಗರಡಿ ಸಿನಿಮಾದಲ್ಲಿ ಗುರು-ಶಿಷ್ಯ ಪರಂಪರೆಯ ಕಥಾಹಂದರ ಹೊಂದಿರುವ ಸಿನಿಮಾ. ಈ ಸಿನಿಮಾದಲ್ಲಿ ಗುರುವಿನ ಪಾತ್ರವನ್ನು ಮಾಜಿ ಸಚಿವರ ಬಿ.ಸಿ. ಪಾಟೀಲ್‌ ನಟಿಸಿದ್ದಾರೆ. ಶಿಷ್ಯನ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ.


'ಸಪ್ತ ಸಾಗರದಾಚೆ ಎಲ್ಲೋ' ಎರಡೂ ಪಾರ್ಟ್‌ಗಳ ಬಿಡುಗಡೆ ದಿನಾಂಕ ಅನೌನ್ಸ್‌


ಇನ್ನು ಈ ಸಿನಿಮಾಗಾಗಿ ನಾಯಕ ಮತ್ತು ವಿಲನ್‌ ಇಬ್ಬರೂ ಮೈಸೂರಿನ ಗರಡಿ ಮನೆಯಲ್ಲಿ ತಿಂಗಳುಗಟ್ಟಲೆ ಕುಸ್ತಿ ಕಲಿತದ್ದು ವಿಶೇಷವಾಗಿದೆ. ಈ ಚಿತ್ರದ ಪಾತ್ರಗಳ ಪರಿಪೂರ್ಣತೆಗಾಗಿ ಸಾಕಷ್ಟು ಬೆವರು ಹರಿಸಿದ್ದಾರೆ. ಇನ್ನು ಗರಡಿ ಸಿನಿಮಾ ಹಿಂದಿ ಭಾಷೆಗೂ ಸಹ ಡಬ್ಬಿಂಗ್‌ ಮಾಡಲು ಚಿತ್ರತಂಡ ಪ್ಲಾನ್‌ ಮಾಡುತ್ತಿದೆ. ಕನ್ನಡ ಮಣ್ಣಿನ ಕ್ರಿಡೆಯನ್ನು ಎಲ್ಲೆಡೆ ಪಸರಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.


ಇನ್ನು ʼಹೊಡಿರಲೆ ಹಲಗಿʼ ವಿಶೇಷ ಅಂದ್ರೆ, ತಮಟೆ ಸೌಂಡ್‌. ತಮಟೆ ಮೇಲೆನೆ ಈ ಹಾಡನ್ನು ಬರೆದಿದ್ದಾರೆ ಯೋಗರಾಜ್ ಭಟ್ರು, ಹಳ್ಳಿ ಸೊಗಡಗಿನ ಫೀಲ್ ಇರೋ ಈ ಸಾಂಗ್‌ನಲ್ಲಿ ನಿಶ್ವಿಕಾ ಕುಣಿದು ಕುಪ್ಪಳಿಸಿದ್ದಾರೆ. ಸೌಮ್ಯ ಫಿಲ್ಮ್ಸ್ ಬ್ಯಾನರ್‌ನಡಿ ಈ ಸಿನಿಮಾವನ್ನು ವನಜಾ ಪಾಟೀಲ್‌ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸೂರ್ಯ, ಸೋನಲ್‌ ಮೊಂಥೆರೋ, ಧರ್ಮಣ್ಣ ಕಡೂರು, ರವಿಶಂಕರ್‌ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.