ಚಿತ್ರರಂಗಕ್ಕೆ ಮತ್ತೊಂದು ಶಾಕ್: ಸ್ಪಂದನಾ ಬಳಿಕ ಮತ್ತೊಬ್ಬ ಯುವನಟ ಹೃದಯಾಘಾತಕ್ಕೆ ಬಲಿ..!
Actor Pawan Death: ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಮಂಡ್ಯ ಮೂಲದ ಪವನ್(25) ಶುಕ್ರವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದರು. ಇದೀಗ ಮತ್ತೊಬ್ಬ ಯುವನಟ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಮಂಡ್ಯ ಮೂಲದ ಪವನ್(25) ಶುಕ್ರವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹರಿಪುರದ ಗ್ರಾಮದ ಪವನ್ ಮುಂಬೈನಲ್ಲಿ ನೆಲೆಸಿದ್ದರು.
ಇದನ್ನೂ ಓದಿ: ರಾಘು ಮೊದಲ ʼಸ್ಪಂದನʼ..! ಮುದ್ದಿನ ಮಡದಿಗೆ ಪ್ರೀತಿಯ ನಮನ
ಮುಂಬೈನಲ್ಲಿ ತಂದೆ ನಾಗರಾಜು ಮತ್ತು ತಾಯಿ ಸರಸ್ವತಿ ಅವರೊಂದಿಗೆ ನೆಲೆಸಿದ್ದ ಪವನ್ ಕನ್ನಡಕ್ಕಿಂತ ಹಿಂದಿ ಹಾಗೂ ತಮಿಳು ಕಿರುತೆರೆಯಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಸಿನಿಮಾಗಳಲ್ಲಿ ಅಭಿನಯಿಸಿ ಬೆಳ್ಳಿತೆರೆಯಲ್ಲಿ ಮಿಂಚಬೇಕೆಂದು ಕನಸ್ಸು ಕಂಡಿದ್ದರು.
ಮುಂಬೈನ ತಮ್ಮ ನಿವಾಸದಲ್ಲಿ ಮುಂಜಾನೆ 5 ಗಂಟೆ ವೇಳೆಗೆ ಪವನ್‍ಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಇಂದು(ಆಗಸ್ಟ್ 18) ಹುಟ್ಟೂರು ಕೆ.ಆರ್.ಪೇಟೆಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿದೆ. ಮಗನ ಕಳೆದುಕೊಂಡು ಕುಟುಂಬವು ಇದೀಗ ಶೋಕ ಸಾಗರದಲ್ಲಿ ಮುಳುಗಿದೆ.
ಇದನ್ನೂ ಓದಿ: ಮದುವೆ ಮುನ್ನವೇ ಭಾವಿ ಪತ್ನಿಯನ್ನ ಪ್ರೋಡ್ಯೂಸರ್ ಮಾಡಿದ ಭುವನ್ ಪೊನ್ನಣ್ಣ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.