ಭಾರತೀಯ ಪೌರತ್ವ ಪಡೆದ ನಟ ಅಕ್ಷಯ್ ಕುಮಾರ್‌..! ಇಲ್ಲಿವೆಯವರೆಗೆ ಏನಾಗಿದ್ರು..?

Akshay Kumar : ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಈಗ ಭಾರತೀಯ ನಾಗರಿಕರಾಗಿದ್ದಾರೆ. ಹಾಗಿದ್ರೆ ಭಾರತದಲ್ಲಿದ್ದ ನಟ ಇಲ್ಲಿಯವರೆಗೆ ಏನಾಗಿದ್ದರು, ಸಧ್ಯ ಅವರು ಭಾರತೀಯ ಪೌರತ್ವವನ್ನು ಏಕೆ ಪಡೆದುಕೊಂಡರು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿದ್ದರೆ ಬನ್ನಿ ಈ ಕುರಿತು ತಿಳಿದುಕೊಳ್ಳೋಣ.

Written by - Krishna N K | Last Updated : Aug 17, 2023, 05:03 PM IST
  • ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಈಗ ಭಾರತೀಯ ನಾಗರಿಕರಾಗಿದ್ದಾರೆ.
  • ಇತ್ತೀಚೆಗಷ್ಟೇ ತಮ್ಮ ಪೌರತ್ವವನ್ನು ಮೇಲ್ದರ್ಜೆಗೇರಿಸಿ ಭಾರತೀಯ ಪೌರತ್ವವನ್ನು ಪಡೆದಿದುಕೊಂಡಿದ್ದಾರೆ.
  • ದಾಖಲೆಗಳನ್ನು ತೋರಿಸಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ ಅಕ್ಕಿ.
ಭಾರತೀಯ ಪೌರತ್ವ ಪಡೆದ ನಟ ಅಕ್ಷಯ್ ಕುಮಾರ್‌..! ಇಲ್ಲಿವೆಯವರೆಗೆ ಏನಾಗಿದ್ರು..? title=

Indian citizenship for Akshay Kumar : ನಟ ಅಕ್ಷಯ್ ಕುಮಾರ್ ಈಗ ಭಾರತೀಯ ನಾಗರಿಕರಾಗಿದ್ದಾರೆ. ಇಲ್ಲಿಯವರೆಗೆ ಅವರು ಕೆನಡಾದ ಪೌರತ್ವವನ್ನು ಹೊಂದಿದ್ದರು. ಆದರೆ ಇತ್ತೀಚೆಗಷ್ಟೇ ತಮ್ಮ ಪೌರತ್ವವನ್ನು ಮೇಲ್ದರ್ಜೆಗೇರಿಸಿ ಭಾರತೀಯ ಪೌರತ್ವವನ್ನು ಪಡೆದಿದುಕೊಂಡಿದ್ದಾರೆ.

ಹೌದು.. ಅಕ್ಷಯ್‌ ಕುಮಾರ್‌ ಕೆನಡಾದ ಪ್ರಜೆ. ಇದೇ ಕಾರಣಕ್ಕೆ ಅವರು ಭಾರತದ ಕುರಿತು ಮಾತನಾಡಿದಾಗ ಪೌರತ್ವದ ನೆಪದಲ್ಲಿ ಅವರನ್ನು ಟೀಕಿಸಲಾಗುತ್ತಿತ್ತು. ಅದಕ್ಕೇ ಇನ್ನು ಮುಂದೆ ಈ ರೀತಿ ಮಾತನಾಡುವ ಅವಶ್ಯಕತೆ ಇಲ್ಲ.. ಟೀಕಾಕಾರರಿಗೆ ಇದೇ ನನ್ನ ಉತ್ತರ ಎಂಬಂತೆ ಭಾರತ ಸರ್ಕಾರ ತನಗೆ ಭಾರತೀಯ ಪೌರತ್ವ ನೀಡಿರುವ ಪ್ರಮಾಣಪತ್ರದ ದಾಖಲೆಗಳನ್ನು ತೋರಿಸಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ ಅಕ್ಕಿ.

ಇದನ್ನೂ ಓದಿ:  ಕಾಂತಾರ, ಆದಿಪುರುಷ್ ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ಉಡೀಸ್‌ ಮಾಡಿದ ಜೈಲರ್..ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?!

ಅಕ್ಷಯ್ ಕುಮಾರ್ ತೋರಿಸಿದ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಕ್ಷಯ್ ಅವರ ಪೂರ್ಣ ಹೆಸರು ಅಕ್ಷಯ್ ಹರಿಓಂ ಭಾಟಿಯಾ. ಅಕ್ಷಯ್ ತಂದೆಯ ಹೆಸರು ಬ್ರಿಜ್ ಮೋಹನ್ ಭಾಟಿಯಾ ಮತ್ತು ತಾಯಿಯ ಹೆಸರು ಅರುಣಾ ಭಾಟಿಯಾ. ಹುಟ್ಟಿದ ದಿನಾಂಕ ಸೆಪ್ಟೆಂಬರ್ 9, 1967 ಹಾಗೂ ಹುಟ್ಟಿದ ಸ್ಥಳ ದೆಹಲಿ ಮತ್ತು ಇಲ್ಲಿಯವರೆಗೆ ಅಕ್ಷಯ್ ಕೆನಡಾದ ಪೌರತ್ವವನ್ನು ಹೊಂದಿದ್ದಾರೆ ಎಂದು ತಿಳಿದು ಉಲ್ಲೇಖಿಸಲಾಗಿದೆ.

ಇನ್ನು ಮೂರು ದಶಕಗಳಿಂದ ಭಾರತದಲ್ಲಿ ಚಲನಚಿತ್ರಗಳನ್ನು ಮಾಡುತ್ತಿರುವ ಅಕ್ಷಯ್ ಅವರು ಪೌರತ್ವ ಪಡೆದ ದಾಖಲೆ ಫೋಟೋ ಜೊತೆಗೆ ತಮ್ಮ ಟ್ವೀಟ್‌ನಲ್ಲಿ "ಹೃದಯ ಮತ್ತು ಪೌರತ್ವ .. ಎರಡೂ ಹಿಂದೂಸ್ತಾನಿ" ಎಲ್ಲಾ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! "ಜೈ ಹಿಂದ್" ಎಂದು ಹೇಳಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ ಭೋಲಾ ಶಂಕರ್ ಹಿಂದಿಯಲ್ಲಿ ಬಿಡುಗಡೆ: ಎಲ್ಲಿ? ಯಾವಾಗ? ಇಲ್ಲಿದೆ ಡಿಟೇಲ್ಸ್‌!

ಅಕ್ಷಯ್ ಕುಮಾರ್ ಅಭಿನಯದ OMG 2 ಈ ಶುಕ್ರವಾರ ತೆರೆ ಕಂಡಿದೆ. ಸದ್ಯ ಚಿತ್ರಕ್ಕೆ ಗದರ್ 2 ತೀವ್ರ ಪೈಪೋಟಿ ನೀಡುತ್ತಿದೆ. ಇದಲ್ಲದೇ ತಮಿಳಿನ ಸುರಾರೈ ಪೊಟ್ರು ಸಿನಿಮಾ ಹಿಂದಿಯಲ್ಲಿ ಅಕ್ಷಯ್ ನಾಯಕನಾಗಿ ರಿಮೇಕ್ ಆಗುತ್ತಿದೆ. ಈ ಚಿತ್ರ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಬಾಲಿವುಡ್ ಯುವ ನಟ ಟೈಗರ್ ಶ್ರಾಫ್ ಅವರೊಂದಿಗೆ ಆಕ್ಷನ್ ಥ್ರಿಲ್ಲರ್ ಚಿತ್ರ ಬಡೇ ಮಿಯಾ ಚೋಟೆ ಮಿಯಾದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಹೌಸ್‌ಫುಲ್ 5 ನೇ ಸೀಕ್ವೆಲ್ ಮತ್ತು ಹೇರಾ ಫೆರಿ 3 ನೇ ಸೀಕ್ವೆಲ್‌ನಂತಹ ಚಿತ್ರಗಳನ್ನು ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News