Yuva Rajkumar Action Sequence: ಸ್ಯಾಂಡಲ್‌ವುಡ್‌ ಹೊಸ ಪ್ರತಿಭೆ ನಟ ಯುವ ರಾಜ್‌ಕುಮಾರ್‌ ಸಿನಿಮಾರಂಗಕ್ಕೆ ಹೆಜ್ಜೆಹಾಕುವ ಮೊದಲೇ ಎಲ್ಲಾ ತರಬೇತಿ ಹಾಗೈ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಈ ನಟ ಅಭಿನಯದಿಂದ ಹಿಡಿದು  ಆ್ಯಕ್ಷನ್‌ವರೆಗೂ ಎಲ್ಲಾ ಅಚುಕಟ್ಟಾಗಿಯೇ ಕಲಿತುಕೊಂಡು ಹೆಜ್ಜೆಹಾಕಿದ್ದಾರೆ. ಈ ನಟ ʻಯುವʼ ತಮ್ಮ ಮೊದಲ ಚಿತ್ರ ಎನ್ನುವ ಸಣ್ಣ ಭಯವಿದ್ದರೂ ಅಷ್ಟೇ ವಿಶ್ವಾಸದಲ್ಲಿ ಸಾಹಸ ದೃಶ್ಯಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗ ಯುವ ಸಿನಿಮಾದ ಸ್ಟಂಟ್‌ ಮಾಸ್ಟರ್‌ ಅರ್ಜುನ್ ರಾಜ್ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್‌ ಮಾಡಿದ್ದಾರೆ. ನಟ ಯುವ ರಾಜ್‌ಕುಮಾರ್‌ ʻಯುವʼ ಚಿತ್ರದಲ್ಲಿ ಓಡಿ ಬಂದು ಕಾರಿನ ಮುಂದಿನ ಗ್ಲಾಸ್ ಬ್ರೇಕ್ ಮಾಡುವ ದೃಶ್ಯವನ್ನು ಯಾವುದೇ ಡ್ಯೂಪ್  ಸಹಾಯವಿಲ್ಲದೇ ಮಾಡಿ ಮುಗಿಸಿದ್ದಾರೆ. ಶೂಟಿಂಗ್‌ನ ಕೆಲವು ಮೇಕಿಂಗ್ ಝಲಕ್‌ಗಳನ್ನು ಹೊಂಬಾಳೆ ಫಿಲ್ಮ್ಸ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಮಾಡಿದೆ.


ಇದನ್ನೂ ಓದಿ: Yuva : 'ಯುವ' ಸಿನಿಮಾದಲ್ಲಿ ಹಿತ ಚಂದ್ರಶೇಖರ್ : ಪ್ರಮುಖ ಪಾತ್ರವೊಂದರಲ್ಲಿ ಸಿಹಿ ಕಹಿ ಪುತ್ರಿ


ʻಯುವʼ ಸಿನಿಮಾದ ನಿರ್ದೇಶಕರಾದ ಸಂತೋಷ್‌ ಆನಂದ್‌ ರಾಮ್‌ ಹೆಚ್ಚು ಆ್ಯಕ್ಷನ್‌ ಸೀನ್‌ಗಳಿಗೆ ಒತ್ತು ನೀಡಿದ್ದರೆ. ಈ ಚಿತ್ರದಲ್ಲಿಯೂ ಕೂಡ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ತಮ್ಮ ಸಿನಿಮಾವೊಂದರಲ್ಲಿ ಮಾಡಿದ್ದ ಆಕ್ಷನ್‌ ಇದರಲ್ಲಿಯೂ ಇದೆ. ಅಪ್ಪು ಕೂಡ ಈ ಹಿಂದೆ ಕೆಲವಯ ಆಕ್ಷನ್‌ ದೃಶ್ಯಗಳಲ್ಲಿ ಡ್ಯೂಪ್‌ ಇಲ್ಲದೇ ಅಭಿನಯಿಸಿದ್ದರು ಎನ್ನಲಾಗಿತ್ತು. ಅದೇ ರೀತಿ ಸದ್ಯ ಪುನೀತ್‌ ರಾಜ್‌ಕುಮಾರ್‌ ಜಾಗವನ್ನು ಯುವ ತುಂಬುತ್ತಿದ್ದಾರೆಂದು ಹೇಳಬಹುದು.


ಡೈರೆಕ್ಟರ್‌ ಸಂತೋಷ್‌ ಆನಂದ್‌ ರಾಮ್‌ ಯುವ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಯಾರೂ ನಿರೀಕ್ಷೆ ಮಾಡದಿರುವ ಒಂದಷ್ಟು ಆ್ಯಕ್ಷನ್‌ ಸಹ ಇದೆ ಎಂದಿದ್ದರು. ಈ ಸಿನಿಮಾದಲ್ಲಿ ಆಕ್ಷನ್‌ ಸೀನ್‌ಗಳ ಜೊತೆಗೆ  ಒಳ್ಳೆ ಅಭಿನಯ, ಎಮೋಷನಲ್‌ ದೃಶ್ಯಗಳು, ಒಳ್ಳೆಯ ಹಾಡುಗಳಿಗೆ ಅಷ್ಟೇ ಚೆನ್ನಾಗಿಯೇ ಡ್ಯಾನ್ಸ್‌ ಕೂಡ ಇದೆ. ಇದರ ಗ್ಲಿಮ್ಸ್‌ ಅನ್ನು ಈಗಾಗಲೇ ಚಿತ್ರದ ಟ್ರೇಲರ್‌ನಲ್ಲಿ ಕಾಣಬಹುದು. ಈ ಸಿನಿಮಾ ಇದೇ ಮಾರ್ಚ್‌ 29 ರಂದು ತೆರೆಗೆ ಬರಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.