Yuva : 'ಯುವ' ಸಿನಿಮಾದಲ್ಲಿ ಹಿತ ಚಂದ್ರಶೇಖರ್ : ಪ್ರಮುಖ ಪಾತ್ರವೊಂದರಲ್ಲಿ ಸಿಹಿ ಕಹಿ ಪುತ್ರಿ

Yuva  Movie : ಯುವರಾಜಕುಮಾರ್ ಅವರ ಚೊಚ್ಚಲ  ಸಿನಿಮಾ ಯುವ ಚಿತ್ರದಲ್ಲಿ ಹಿತ ಚಂದ್ರಶೇಖರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Written by - Zee Kannada News Desk | Last Updated : Mar 26, 2024, 08:57 PM IST
  • ಯುವ ಚಿತ್ರದಲ್ಲಿ ಸಹೋದರಿಯ ಪಾತ್ರವನ್ನು ನಿರ್ವಹಿಸಿದ್ದು, ಇದು ವಿಭಿನ್ನ ಅನುಭವವನ್ನು ನೀಡಿದೆ" ಎಂದು ತಿಳಿಸಿದ್ದಾರೆ.
  • ಚಿತ್ರ ತಂಡ ನಡೆಸಿಕೊಡ ರೀತಿ ಸಂತಸ ತಂದಿದೆ ಹಾಗೂ ಸೆಟ್ ನಲ್ಲಿ ಅದ್ಭುತ ಅನುಭವಗಳನ್ನು ಪಡೆದುಕೊಂಡೆ ಎಂದು ತಿಳಿಸಿದ ಹಿತ
  • ಇದು ನನ್ನ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಾಗಿದೆ.
Yuva : 'ಯುವ' ಸಿನಿಮಾದಲ್ಲಿ ಹಿತ ಚಂದ್ರಶೇಖರ್ : ಪ್ರಮುಖ ಪಾತ್ರವೊಂದರಲ್ಲಿ ಸಿಹಿ ಕಹಿ ಪುತ್ರಿ title=

ಹಿತಾ ಚಂದ್ರಶೇಖರ್ ಅವರು, ರಾಜ್‌ಕುಮಾರ್‌ ಕುಟುಂಬದ ಕುಡಿ ಯುವರಾಜಕುಮಾರ್ ಅವರ ಚೊಚ್ಚಲ ಸಿನಿಮಾ ಯುವ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : IPL ಆಫರ್ : ಹಾಸ್ಯಮಯ ಚಿತ್ರ ಮಡ್ಗಾಂವ್ ಎಕ್ಸ್ಪ್ರೆಸ್ ಐಪಿಎಲ್ ಕೊಡುಗೆಯೊಂದಿಗೆ 150 ರೂ

ಹಿತಾ ಚಂದ್ರಶೇಖರ್ ಅವರು  "ನನ್ನ 7 ವರ್ಷಗಳ ವೃತ್ತಿಜೀವನದಲ್ಲಿ ಎಂಟು ಸಿನಿಮಾಗಳಲ್ಲಿ ನಟಿಸಿದ್ದೇನೆ. "ಈ ಪಾತ್ರಕ್ಕೆ ನಾನು ನಿರ್ದೇಶಕರ ಮೊದಲ ಆಯ್ಕೆಯಾಗಿದ್ದೆ. ಆದರೂ ನಾನು ಏಕೆ ಎಂದು ಎಂದಿಗೂ ಪ್ರಶ್ನಿಸಲಿಲ್ಲ.  ಪ್ರತೀ ನಿರ್ಧಾರದಲ್ಲೂ ಸವಾಲು, ಉತ್ಸಾಹ ಹಾಗೂ ಕಲಿಕೆ ಮತ್ತು ಬೆಳೆಯುವ ಅವಕಾಶವನ್ನು ಕಂಡುಕೊಳ್ಳುತ್ತಿದ್ದೆ. ಯುವ ಚಿತ್ರದಲ್ಲಿ ಸಹೋದರಿಯ ಪಾತ್ರವನ್ನು ನಿರ್ವಹಿಸಿದ್ದು, ಇದು ವಿಭಿನ್ನ ಅನುಭವವನ್ನು ನೀಡಿದೆ" ಎಂದು ತಿಳಿಸಿದ್ದಾರೆ. 

ಇದೀಗ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಸಿನಿಮಾ ಮಾಡಿದ್ದೇನೆ. ಇದು ನನ್ನ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಾಗಿದೆ.

ಇದನ್ನು ಓದಿ : Uttarakanda' : ಡಾಲಿ ಧನಂಜಯ ನಟನೆಯ 'ಉತ್ತರಕಾಂಡ' ಸಿನಿಮಾದಿಂದ ಹೊರನಡೆದ ನಟಿ ರಮ್ಯಾ

ಯುವ ಪಾತ್ರದಲ್ಲಿ ನಟಿಸಿರುವ ಯುವರಾಜಕುಮಾರ್ ಮತ್ತು ನನಗೆ ಹೆಚ್ಚಿನ ವಯಸ್ಸಿನ ಅಂತರವಿಲ್ಲ, ಹೀಗಾಗಿ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಎನಿಸಲಿಲ್ಲ. ಇದು ನಟನೆಗೂ ಸಹಾಯಕವಾಯಿತು. ಚಿತ್ರ ತಂಡ ನಡೆಸಿಕೊಡ ರೀತಿ ಸಂತಸ ತಂದಿದೆ ಹಾಗೂ ಸೆಟ್ ನಲ್ಲಿ ಅದ್ಭುತ ಅನುಭವಗಳನ್ನು ಪಡೆದುಕೊಂಡೆ ಎಂದು ತಿಳಿಸಿದ ಹಿತ, ಯುವ ಒಂದು ಕುಟುಂಬ ಕೇಂದ್ರಿತ ಚಿತ್ರವಾಗಿದ್ದು, ಕುಟುಂಬದಲ್ಲಿ ನಿಯಮಗಳನ್ನು ಅನುಸರಿಸದ ಸಹೋದರ ಹಾಗೂ ಸಣ್ಣ ಪುಟ್ಟ ಮನಸ್ತಾಪಗಳಿದ್ದರೂ ಒಡಹುಟ್ಟಿದವರ ನಡುವೆ ಯಾವಾಗಲೂ ಬಲವಾದ ಬಂಧವಿದ್ದೇ ಇರುತ್ತದೆ ಎಂಬ ಸಂದೇಶವನ್ನು ಚಿತ್ರ ನೀಡುತ್ತದೆ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News