Yuva Coffee Partner Sudharani: ಚಂದನವನದ ನಟ ಯುವ ರಾಜ್‌ಕುಮಾರ್‌ ಅಭಿನಯದ ಯುವ ಸಿನಿಮಾ ದೊಡ್ಮನೆಯ ಕುಡಿಯ ಮೊದಲ ಚಿತ್ರವಾಗಿದೆ. ನಟ ಯುವರಾಜ್ ಕುಮಾರ್ ಕಲಾವಿದರ ಕುಟುಂಬದಿಂದ ಬಂದರೂ ನಟನೆ ಕಲಿಯುವಾಗ ತಪ್ಪುಗಳು ಆಗಿದ್ದು, ಆಗಿರೋ ತಪ್ಪುಗಳ ಬಗ್ಗೆ ತಿಳಿದುಕೊಂಡಿರೋ ಬಗ್ಗೆ ಮತ್ತು ಮಾಡಿರೋ ತಪ್ಪುಗಳನ್ನ ಮುಂದಿನ ಸಿನಿಮಾದಲ್ಲಿ ತಿದ್ದಿಕೊಳ್ಳುವೆ ಅಂತ ಹೇಳಿಕೊಂಡಿದ್ದರು.


COMMERCIAL BREAK
SCROLL TO CONTINUE READING

ನಟ ಯುವ ರಾಜ್‌ಕುಮಾರ್‌ ʻಯುವʼ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ ಶೂಟಿಂಗ್ ಟೈಮ್‌ನಲ್ಲಿ ಸಾಕಷ್ಟು ಕಲಿತುಕೊಂಡಿದ್ದೇನೆ, ಅಚ್ಯುತ್ ಕುಮಾರ್ ಮತ್ತು ಸುಧಾರಾಣಿ ಅವರಿಂದ ತುಂಬಾನೆ ಕಲಿತಿದ್ದೇನೆ. ಇಂತಹ ಹಿರಿಯ ನಟರ ಜೊತೆಗೆ ಅಭಿನಯಿಸೋದು ಹೇಗೆ ಅನ್ನುವ ಭಯ ಕೂಡ ಇತ್ತು. ಆದರೆ ಮುಂದೆ ಹೋಗ್ತಾ ಹೋಗ್ತಾ ಕಂಫರ್ಟ್ ಜೋನ್ ಕ್ರಿಯೇಟ್ ಆಯಿತು ಎಂದು ಹೇಳಿಕೊಂಡಿದ್ದರು. ಈ ನಟ ಚಿತ್ರೀಕರಣದ ಸಮಯದಲ್ಲಿ ನಾನು ತುಂಬಾನೆ ಕಾಫಿ ಕುಡಿಯುತ್ತಿದ್ದೆ. ಇದಕ್ಕೆ ಕಾರಣವೇನೆಂದರೆ ನನಗೆ ಕಾಫಿ ಅಂದ್ರೆ ತುಂಬಾನೆ ಇಷ್ಟ ಆಗುತ್ತದೆ ಎಂದಿದ್ದಾರೆ.


ಇದನ್ನೂ ಓದಿ: Kotee Heroine: ಡಾಲಿ ಧನಂಜಯ್ 'ಕೋಟಿ' ಸಿನಿಮಾದ ಹೀರೋಯಿನ್‌ ಯಾರು ಗೊತ್ತೇ?


ಯುವ ರಾಜ್‌ಕುಮಾರ್‌ ಸುಧಾರಾಣಿ ಮೇಡಂ ನನ್ನ ಕಾಫಿ ಪಾರ್ಟ್ನರ್ ಎಂದು ಹೇಳಿದ್ದಾರೆ. ಯುವ "ಪ್ರತಿ ಸಲ ಕಾಫಿ ಕುಡಿಯೋವಾಗ ಸುಧಾರಾಣಿ ಅವರನ್ನ ‘ಮ್ಯಾಡಂ ಕಾಫಿ’ ಅಂತಲೇ ಕೇಳುತ್ತಿದ್ದೆ. ಆಗ ಅವರು ಓಕೆ ಅಂತಲೇ ಹೇಳುತ್ತಿದ್ದರು. ಹೀಗೆ ನಾನು ಸುಧಾರಾಣಿ ಅವರು ಒಟ್ಟಿಗೆ ಸುಮಾರು ಕಾಫಿಯನ್ನು ಕುಡಿದಿದ್ದೇವೆ. ಅಂದ್ಹಾಗೆ ಸುಧಾರಾಣಿ ಮ್ಯಾಡಂ ನನಗೆ ಆನಂದ್ ಸಿನಿಮಾದಿಂದಲೂ ತುಂಬಾ ಇಷ್ಟ ಆಗುತ್ತಾರೆ" ಅಂತ ನಟಿ ಸುಧಾರಾಣಿಯ ಬಗ್ಗೆ ಮಾತನಾಡಿದ್ದಾರೆ.


ಸುಧಾರಾಣಿ ಯುವನ ನೋಡಿ ನಗುತ್ತಿರುವಾಗ, ಈ ನಟ ನೀವು ಈಗಲೂ ಹೀರೋಯಿನ್ ಬಿಡಿ ಮ್ಯಾಡಂ ಅಂತ ತಮಾಷೆ ಮಾಡಿದ್ದರು. ನಟ ಯುವ ರಾಜ್‌ಕುಮಾರ್‌ ತಮಗೆ ಶೂಟಿಂಗ್ ಟೈಮ್‌ನಲ್ಲಿ ಯಾರೆಲ್ಲ ಸಹಾಯ ಮಾಡಿದ್ದಾರೋ ಅವರೆಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾದಲ್ಲಿ ಒಂದೇ ಏಜ್‌ನ ನಟಿ ಸಪ್ತಮಿ ಗೌಡ ಕುರಿತು ಕೂಡ ಮಾತನಾಡಿದ್ದಾರೆ. ಇವರಿಬ್ಬರು ಕಾಲೇಜಿನಲ್ಲಿ ಚಿತ್ರೀಕರಣ ಮಾಡುವಾಗ ತುಂಬಾ ಎಂಜಾಯ್ ಮಾಡಿಕೊಂಡೇ ಅಭಿನಯಿಸಿದ್ದೇವೆ  ಎಂದು ಹೇಳಿದ್ದಾರೆ.


ಇದನ್ನೂ ಓದಿ: ಲವ್‌ ಡೇ ದಿನ ನನ್ನ ಲವರ್‌.. ಅವನ ಹಳೆ ಲವರ್‌ ಜೊತೆ...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ವಿದ್ಯಾ ಬಾಲನ್‌


ಯುವ ಸಕ್ಸಸ್‌ ಮೀಟ್‌ನಲ್ಲಿ ನಟ ಯುವ ರಾಜ್‌ಕುಮಾರ್‌ ಸಿನಿಮಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೂ ಕೂಡ  ಧನ್ಯವಾದ ಹೇಳಿದ್ದಾರೆ. ಈ ಮ್ಯೂಸಿಕ್‌ ಕಂಪೋಸರ್‌ ಶೂಟಿಂಗ್‌ ಪ್ರಾರಂಭವಾಗುವ ಮುನ್ನವೇ  ಮ್ಯೂಸಿಕ್ ಮಾಡಿಕೊಟ್ಟಿದ್ದಕ್ಕೇನೆ ತುಂಬಾನೆ ಹೆಲ್ಪ್ ಆಗಿದೆ. ಎಕ್ಸಪ್ರೆಷನ್ ಕೊಡಲು ತುಂಬಾನೆ ಹೆಲ್ಪ್ ಆಯಿತು ಅಂತ ಹೇಳಿದ್ದಾರೆ. ಹೀಗೆ  ಈ ನಟ ಸಿನಿಮಾಗೆ ಸಂಬಂಧ ಪಟ್ಟ ಎಲ್ಲರನ್ನೂ ನೆನಪಿಸಿಕೊಂಡು ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.