ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ ಅವರ ಅಗಲಿಕೆ ಬಳಿಕ ದೊಡ್ಮನೆ ಅಭಿಮಾನಿಗಳು  ಯುವರಾಜ್‌ನನ್ನು ಅಪ್ಪು ಉತ್ತರಾಧಿಕಾರಿಯಾಗಿ ನೋಡೊಕೆ ಕಾತರದಿಂದ ಕಾಯ್ತಿದ್ದಾರೆ. ಅಷ್ಟೇ ಅಲ್ಲದೆ ಯುವರಾಜ್‌ ಕೂಡ ಅಪ್ಪು ಅಭಿಮಾನಿಗಳ ಇಚ್ಛೆಯಂತೆ, ಅಪ್ಪು ಹಾಕಿ ಕೊಟ್ಟು ಹೋಗಿರುವ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಇನ್ನು ಯುವರಾಜ್‌ ಅವರ ಈ ನಡೆ ನುಡಿಗೆ ಮೆಚ್ಚುಗೆ ಸೂಚಿಸಿದ ಪವರ್‌ಸ್ಟಾರ್‌ ಫ್ಯಾನ್ಸ್ ಯುವನ ಮುಖದಲ್ಲಿ ಅಪ್ಪುವನ್ನು ಕಾಣುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಪಾರ ದೈವ ಭಕ್ತರಾಗಿದ್ದರು. ಅದರಲ್ಲೂ ಮಂತ್ರಾಲಯದ ರಾಯರೆಂದರೆ ಅಪ್ಪುಗೆ ಇನ್ನಿಲ್ಲದ ಭಕ್ತಿ‌. ಇನ್ನು ಅಪ್ಪು ನಮ್ಮನ್ನು ಅಗಲುವ ಮುನ್ನ ರಾಯರ ದರ್ಶನವನ್ನು ಪಡೆದು ಬಂದಿದ್ದರು. ಯುವರತ್ನ ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನವರಸ ನಾಯಕ ಜಗ್ಗೇಶ್ ಜೊತೆಗೂಡಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದು ಬಂದಿದ್ದರು.


ಇದನ್ನೂ ಓದಿ: Singapore Open 2022: ಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು


ಆದರೆ ಅದ್ಯಾವ ಕೆಟ್ಟ ಕಣ್ಣು ಅಭಿಮಾನಿಗಳ ಪ್ರೀತಿಯ ಅಪ್ಪು ಮೇಲೆ ಬಿದ್ದಿತೋ ಗೊತ್ತಿಲ್ಲ. ದೊಡ್ಮನೆ ಅಭಿಮಾನಿಗಳು ಪವರ್ ಸ್ಟಾರ್ ಕಳೆದುಕೊಂಡು ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ. ಇದೀಗ ಅಪ್ಪು ಸ್ಥಾನದಲ್ಲಿ, ಅವರ ಉತ್ತರಾಧಿಕಾರಿಯಾಗಿ ರಾಘಣ್ಣನ ಎರಡನೇ ಮಗ ಯುವರಾಜ್‌ನನ್ನು ನೋಡಲು ಪವರ್‌ ಫ್ಯಾನ್ಸ್‌ ಕಾತುರದಿಂದ ಕಾಯ್ತಿದ್ದಾರೆ.


ಇನ್ನು ಈಗಾಗಲೇ ಅಪ್ಪು ಅಭಿಮಾನಿಗಳು ಯುವರಾಜ್ ಅಭಿಮಾನಿಗಳಾಗಿ ಪ್ರೀತಿಯಿಂದ ಯುವನನ್ನು ಮೆರೆಸೋಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಯುವ ಮೊದಲ ಸಿನಿಮಾ ಅನೌನ್ಸ್ ಆಗ್ತಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಯುವರಾಜ್ ಅಭಿಮಾನಿಗಳ ಸಂಘ ಕಟ್ಟಿ ಅಪ್ಪುಗೆ ನೀಡಿದ್ದ ಪ್ರೀತಿಯನ್ನು ಯುವರಾಜ್‌ಗೆ ನೀಡೊಕೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.


ಇನ್ನು ಅಪ್ಪು ಫ್ಯಾನ್ಸ್‌ಗಳ ಪ್ರೀತಿಗೆ ಮನಸೋತಿರುವ ಯುವ ಕೂಡ ತನ್ನ ಚಿಕ್ಕಪ್ಪನ ಅಭಿಮಾನಿಗಳನ್ನು ದೇವರಂತೆ ನೋಡ್ತಿದ್ದಾರೆ. ಅಪ್ಪು ಹೇಗೆ ಅಭಿಮಾನಿಗಳನ್ನು  ಪ್ರೀತಿಯಿಂದ ಕಾಣ್ತಿದ್ರೋ ಅದೇ ರೀತಿ ಯುವ ಕೂಡ ಅಭಿಮಾನಿ ದೇವರುಗಳನ್ನು ಪ್ರೀತಿಯಿಂದ ಕಾಣ್ತಿದ್ದಾರೆ. ಇನ್ನು ಯುವನ ನಡೆ ನುಡಿಯನ್ನು ಗಮನಿಸಿದ  ದೊಡ್ಮನೆ ದೇವರುಗಳು ಯುವರಾಜ್ ಅಪ್ಪು ಹಾದಿಯಲ್ಲೆ ಸಾಗುತ್ತಿದ್ದಾರೆ. ಅಪ್ಪು ಅವರ ಸರಳತೆ ಯುವನಲ್ಲೂ ಇದೆ ಎಂದು ಸಲಾಂ ಹೊಡೆಯುತ್ತಿದ್ದಾರೆ. 


ಯುವವನ್ನು ಸಿನಿರಂಗದಲ್ಲಿ ಭರ್ಜರಿಯಾಗಿ ಎಂಟ್ರಿ ಮಾಡಿಸಬೇಕು ಎಂದು ಅಪ್ಪು ಕನಸು ಕಂಡಿದ್ದರು.  ಅದರೆ ವಿಧಿಯಾಟವೇ ಬೇರೆಯಾಗಿತ್ತು. ಆದರೂ ಸಹ ಈಗ ಯುವ, ಅಪ್ಪು ನಟಿಸಬೇಕಿದ್ದ ಚಿತ್ರದಲ್ಲೇ ನಾಯಕನಾಗಿ ಕಾಣಿಸೋದರ ಜೊತೆಗೆ ಅಪ್ಪು ಹಾದಿಯಲ್ಲೆ ಮುನ್ನಡೆಯುತ್ತಿದ್ದಾರೆ. 


ಇದನ್ನೂ ಓದಿ: ದೇಶದಲ್ಲಿ ವೇಗವಾಗಿ ಹರಡುತ್ತಿದೆ ಕೋವಿಡ್‌: ಒಂದೇ ದಿನದಲ್ಲಿ 20ಸಾವಿರಕ್ಕೂ ಹೆಚ್ಚು ಕೇಸ್‌ ದಾಖಲು!


ಅಪ್ಪುಗೆ ರಾಯರೆಂದರೆ ಇನ್ನಿಲ್ಲದ ಭಕ್ತಿ. ಅದೇ ರೀತಿ ಯುವ ಕೂಡ ರಾಯರ ಮೇಲೆ ಅಷ್ಟೇ ಭಕ್ತಿ ಹೊಂದಿದ್ದಾರೆ. ಇತ್ತೀಚೆಗಷ್ಟೇ ಯುವರಾಜ್‌ ನಟ ಜಗ್ಗೇಶ್ ಹಾಗೂ ಸಂತೋಷ್ ಆನಂದ್ ರಾಮ್ ಜೊತೆಗೂಡಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಮಾಡಿ ಬಂದಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.