Singapore Open 2022: ಶುಕ್ರವಾರ ನಡೆದ ಸಿಂಗಾಪುರ ಓಪನ್ 2022ರಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ.ಸಿಂಧು ಅವರು ಜಪಾನ್‌ನ ಸೈನಾ ಕವಾಕಮಿ ಅವರನ್ನು 21-15, 21-7 ಸೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. ಇದು ಎರಡು ಬಾರಿ ಒಲಿಂಪಿಕ್ ಪದಕ ವಿಜೇತರ ಮೊದಲ ಸೂಪರ್ 500 ಮತ್ತು ವರ್ಷದ ಫೈನಲ್ ಆಗಿದೆ. ಸಿಂಗಾಪುರ ಓಪನ್‌ನಲ್ಲಿ ಇದು ಅವರ ಚೊಚ್ಚಲ ಫೈನಲ್ ಆಗಿದೆ.
ಇದನ್ನೂ ಓದಿ: ಲೆಜೆಂಡ್ಸ್ ಲೀಗ್ ಕ್ರಿಕೆಟ್: ಮತ್ತೆ ಮೈದಾನಕ್ಕಿಳಿಯಲಿದ್ದಾರೆ ನಿಮ್ಮ ನೆಚ್ಚಿನ ಈ ಆಟಗಾರ!
ಪಿ.ವಿ.ಸಿಂಧು ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಸೈನಾ ಕವಾಕಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು, ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೀನದ ಹಾನ್ ಯುವೆ ಯನ್ನು 17-21, 21-11, 21-19 ಸೆಟ್‌ಗಳಿಂದ ರೋಚಕ ಜಯಗಳಿಸಿದರು.
ಇಂದು ಪಂದ್ಯದ ಆರಂಭದಿಂದಲೇ ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ ಸಿಂಧು, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಲಂಡನ್ 2012 ರ ಕಂಚಿನ ಪದಕ ವಿಜೇತೆ ಸೈನಾ ಸೆಮಿಫೈನಲ್‌ನಲ್ಲಿ ವಿಫಲರಾದ ನಂತರ ಸಿಂಧು ಸಿಂಗಾಪುರ ಓಪನ್‌ನಲ್ಲಿ ಭಾರತದ ಏಕೈಕ ಭರವಸೆಯಾಗಿದ್ದಾರೆ.
ಇದೇ ತಿಂಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಮುನ್ನ ನಡೆಯುತ್ತಿರುವ ಸಿಂಗಪುರ ಟೂರ್ನಿ ಬ್ಯಾಡ್ಮಿಂಟನ್ ಆಟಗಾರರಿಗೆ ಪೂರ್ವಾಭ್ಯಾಸದ ವೇದಿಕೆಯಾಗಿದೆ.
ಇದನ್ನೂ ಓದಿ:3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯದಲ್ಲಿ ಭಾರೀ ಬದಲಾವಣೆ: ಮತ್ತೆ ಕಣಕ್ಕಿಳಿಯಲಿದ್ದಾರೆ ಈ ಸ್ಟಾರ್ ಆಟಗಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.