ಬೆಂಗಳೂರು: "ಬನಾರಸ್" ಚಿತ್ರದ ನಂತರ ಝೈದ್ ಖಾನ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕಾತುರಕ್ಕೆ ಕೆಲವು ದಿನಗಳ ಹಿಂದಷ್ಟೇ ತೆರೆ ಬಿದ್ದಿತ್ತು. ಈ ವರ್ಷದ ಭರ್ಜರಿ ಹಿಟ್ "ಉಪಾಧ್ಯಕ್ಷ" ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಸುದ್ದಿ ಅಧಿಕೃತವಾಗಿ ಹೊರಬಂತು.


COMMERCIAL BREAK
SCROLL TO CONTINUE READING

ಈ ವಿಷಯ ತಿಳಿಸುವ ಚಿತ್ರದ ಪೋಸ್ಟರ್ ಸಹ ಎಲ್ಲರ ಗಮನ ಸೆಳೆದಿತ್ತು. ಅಂದಿನಿಂದಲೂ ಚಿತ್ರದ ಶೀರ್ಷಿಕೆ ಏನಿರಬಹುದೆಂಬ? ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಬಹು ನಿರೀಕ್ಷಿತ ಈ ಚಿತ್ರಕ್ಕೆ "ಕಲ್ಟ್" ಎಂದು ಹೆಸರಿಡಲಾಗಿದೆ. "ಯುಗಾದಿ" ಹಾಗೂ "ರಂಜಾನ್" ಹಬ್ಬದ ಶುಭ ಸಂದರ್ಭದಲ್ಲಿ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ.


ಇದನ್ನು ಓದಿ :Night Curfew Trailer : ಆಕ್ಷನ್ ಕ್ವೀನ್ ಹಾಗೂ ಕನ್ನಡತಿ ಕಾಂಬಿನೇಷನ್ ನಲ್ಲಿ ನೈಟ್ ಕರ್ಫ್ಯೂ , ಟ್ರೈಲರ್ ರಿಲೀಸ್


ನಮ್ಮ ಚಿತ್ರಕ್ಕೆ "ಕಲ್ಟ್" ಎಂದು ಹೆಸರಿಡಲಾಗಿದೆ. ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಸಮಾಜಿಕ ಜಾಲತಾಣಗಳಲ್ಲಿ ಈ ಪದ ಹೆಚ್ಚು ಪ್ರಚಲಿತವಾಗಿದೆ. ಚಿತ್ರ ಕೂಡ ಯುವಜನತೆಗೆ ಹತ್ತಿರವಾಗಿರಲಿದೆ‌‌. ಹಾಗಾಗಿ ಚಿತ್ರಕ್ಕೆ "ಕಲ್ಟ್" ಶೀರ್ಷಿಕೆ ಇಡಲಾಗಿದೆ‌. ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. "ಬನಾರಸ್" ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್, ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ‌‌. ಫಸ್ಟ್ ಲುಕ್ ಪೋಸ್ಟರ್ ನಲ್ಲಿರುವ ಝೈದ್ ಖಾನ್ ಅವರ ರಗಡ್ ಲುಕ್ ಗೆ ಯುವಕರು ಫಿದಾ ಆಗಿದ್ದಾರೆ‌. ಸದ್ಯದಲ್ಲೇ "ಕಲ್ಟ್" ಸೆಟ್ಟೇರಲಿದೆ. ಅದ್ದೂರಿ ಮುಹೂರ್ತದೊಂದಿಗೆ ಚಿತ್ರಕ್ಕೆ ಚಾಲನೆ ಸಿಗಲಿದೆ. ಆ ಸಂದರ್ಭದಲ್ಲಿ ಚಿತ್ರದ ಕುರಿತು ಸಾಕಷ್ಟು ಮಾಹಿತಿ ನೀಡುವುದಾಗಿ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.


ಇದನ್ನು ಓದಿ : IPL 2024 : ಪಂಜಾಬ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ : ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ


ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.