ಸೆಲಬ್ರಿಟಿ ಜೋಡಿಗಳ ಕೈ ರುಚಿ ತೋರಿಸೋಕೆ ʼಕಪಲ್ಸ್ ಕಿಚನ್ʼ ರೆಡಿ.! ಮನರಂಜನೆ ಜೊತೆ ಸಂಬಂಧ ಬೆಸುಗೆಯ ಕತೆ
ಕರುನಾಡಿನಲ್ಲಿ ಮನೆಮಾತಾಗಿರುವ ಜೀ಼ ಕನ್ನಡ ವಾಹಿನಿ ಈಗ ಮನೆಮಂದಿಗೆಲ್ಲ ಮಧ್ಯಾಹ್ನದ ಮನೋರಂಜನೆ ಕೊಡೋಕೆ ಅಂತಾನೆ ರೆಡಿಮಾಡಿರೋ ಶೋನೆ ಈ ``ಕಪಲ್ಸ್ ಕಿಚನ್`. ಇಲ್ಲಿ ಬರೀ ಮನೋರಂಜನೆ ಇರಲ್ಲ ಇಲ್ಲ ಅವರ ಕೈ ಅಡುಗೆ, ಅವರನ್ನ ಒಂದು ಮಾಡಿದ ಮದುವೆಯೆಂಬ ಬೆಸುಗೆಯ ಕಥೆ ಇಲ್ಲಿರುತ್ತೆ.
Couples kitchen : ದಶಕಗಳು ಮೀರಿದರು ಮನೋರಂಜನ ಲೋಕದ ಆದಿಪತ್ಯ ಉಳಿಸಿಕೊಂಡಿರುವ ಜೀ ಕನ್ನಡ ವಾಹಿನಿ, ವೀಕೆಂಡ್ ಆಯ್ತಂದ್ರೆ ತನ್ನ ರಿಯಾಲಿಟಿ ಶೋಗಳ ಮೂಲಕ ರಿಯಲ್ ಎಂಟರ್‌ಟೈನ್‌ಮೆಂಟ್ ಕೊಡೋಕೆ ರೆಡಿಯಾಗಿರುತ್ತೆ, ಈಗಾಗಲೇ ಹಲವಾರ ರಿಯಾಲಿಟಿ ಶೋಗಳ ಮೂಲಕ ಕರುನಾಡಿನಲ್ಲಿ ಮನೆಮಾತಾಗಿರುವ ಜೀ಼ ಕನ್ನಡ ವಾಹಿನಿ ಈಗ ಮನೆಮಂದಿಗೆಲ್ಲ ಮಧ್ಯಾಹ್ನದ ಮನೋರಂಜನೆ ಕೊಡೋಕೆ ಅಂತಾನೆ ರೆಡಿಮಾಡಿರೋ ಶೋನೆ ಈ ""ಕಪಲ್ಸ್ ಕಿಚನ್'. ಇಲ್ಲಿ ಬರೀ ಮನೋರಂಜನೆ ಇರಲ್ಲ ಅವರ ಕೈ ಅಡುಗೆ, ಅವರನ್ನ ಒಂದು ಮಾಡಿದ ಮದುವೆಯೆಂಬ ಬೆಸುಗೆಯ ಕಥೆ ಇಲ್ಲಿರುತ್ತೆ.
ಹೌದು.. ವೀಕೆಂಡ್ ಬಂತಂದ್ರೆ ಎಲ್ಲಿ ಹೋಗೋಣ ಅಂತ ಯೋಚನೆ ಮಾಡೋ ಕಪಲ್ಸ್, ಗಂಡ ಮನೇಲೆ ಇದ್ರೆ ಏನು ಅಡುಗೆ ಮಾಡಲಿ ಅನ್ನೋ ಹೆಂಡತಿ, ಯಾವಾಗಲು ಹೆಂಡತಿನೆ ಅಡುಗೆ ಮಾಡ್ತಾಳಲ್ಲ ಅವಳಿಗೆ ನನ್ನ ಕೈರುಚಿ ತೋರಿಸೋಣ ಅನ್ನೋ ಗಂಡ, ಹೀಗೆ ವೀಕೆಂಡ್ ಬಂತು ಅಂದ್ರೆ ಅಡುಗೆಗೆ ಅಟೆನ್ಷನ್ ಕೊಡೋ ಕಪಲ್ಸ್ ಕಂಪಲ್ಸರಿ ನೋಡಬೇಕಾಗಿರೋ ಕಾರ್ಯಕ್ರಮ ಇದು. ಮನುಷ್ಯ ಏನು ಕೊಟ್ಟರು ಸಾಕು ಅನ್ನೋಲ, ಆದ್ರೆ ಊಟ ಮಾತ್ರ ಸಾಕು ಹೊಟ್ಟೆ ತುಂಬಿತು ಅನ್ನುತ್ತಾನೆ. ಮನುಷ್ಯನ ಹೊಟ್ಟೆ ತುಂಬಿಸಿ ಅವನನ್ನ ಖುಷಿ ಪಡಿಸೋ ಈ ಅಡುಗೆ ಎಷ್ಟೋ ಸಂಬಂಧಗಳನ್ನ ಬೆಸೆದಿದೆ. ಪ್ರತಿ ಸಂಬಂಧ ಒಂದು ಕಪ್ ಕಾಫಿಯಲ್ಲಿ ಶುರುವಾಗಿ ಅಡುಗೆ ಮನೆಯಲ್ಲಿ ಬಂದು ಒಂದಾಗುತ್ತದೆ, ಇದು ಎಲ್ಲ ಸಂಬಂಧಗಳ ಶುರುವಾಗುವ ಪರಿ.
ಇದನ್ನೂ ಓದಿ: ಇವ್ರು ನಿಜ್ವಾಗ್ಲೂ ನಮ್ಮ ಡಾಕ್ಟ್ರೇನಾ..ಕನ್ಯ್ಫೂಸ್ ಆಗ್ಬೇಡಿ ಇವ್ರು ಅದೇ ಡಾಕ್ಟರ್ ಸ್ವಾತಿ..!
ಒಬ್ಬರನೊಬ್ಬರು ಅರಿತುಕೊಂಡು ದಾಂಪತ್ಯ ಜೀವನ ಸಾಗಿಸೋ ಪ್ರತಿ ದಂಪತಿಗಳನ್ನ ಹತ್ತಿರಕ್ಕೆ ತರೋದೆ ಈ ಅಡುಗೆ. ಆದ್ರೆ ಈ ಬಾರಿ ಕಫಲ್ಸ್ ಕಿಚನ್ ಅಡುಗೆ ಮನೆ ನಿಮ್ಮ ಮನೆಗೆ ಕರೆತರುತ್ತಿರೋದು ಮಾತ್ರ ಸಲಬ್ರಿಟಿ ಕುಕ್ಕುಗಳನ್ನ ಅಂದ್ರೇ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಸಲಬ್ರಿಟಿ ಜೋಡಿಗಳ ಕೈಯಲ್ಲಿ ಹೊಸರುಚಿಯನ್ನ ಮಾಡಿಸ್ತಾ ಅದನ್ನ ಸವಿಯುತ್ತ ಅವರ ಪ್ರೇಮ್ ಕಹಾನಿ, ಮದುವೆ ಜೀವನದ ಕಥೆಯನ್ನ ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗುವ ಈ ಕಾರ್ಯಕ್ರಮದ ಜವಾಬ್ದಾರಿಯನ್ನ ಹೊತ್ತಿರೋದು ಮಾಸ್ಟರ್ ಆನಂದ್.
ತೆರೆಮೇಲೆ ನಮ್ಮನ್ನ ಮನೋರಂಜಿಸೋ ಪ್ರತಿ ಸಲಬ್ರಟಿ ಈ ಅಡುಗೆ ಮನೆಗೆ ಬಂದಾಗ ನಳಮಹಾರಾಜರಾಗಿ ಬಿಡುತ್ತಾರೆ,ಯಾವಾಗಲು ಬಣ್ಣ ಹಚ್ಚಿ ನಿಮ್ಮನ್ನ ರಂಜಿಸೋ ನಿಮ್ಮ ನೆಚ್ಚಿನ ನಟನಟಿಯರು ಅಡುಗೆ ಮಾಡೋಕೆ ಸೌಟ್ ಹಿಡಿಯೋದನ್ನ ನೋಡೋದೆ ಒಂದು ಖುಷಿ, ಅಡುಗೆ ಮಾಡೋಕೆ ಅಂತ ಒಲೆ ಹಚ್ಚಿ ತಮ್ಮ ಪ್ರೇಮ್ ಕಹಾನಿ ಶುರುಮಾಡಿದ್ರೆ, ಆಗಾಗ ಅಡುಗೆಗೆ ಬೀಳೋ ಮಸಾಲೆ ಜೊತೆ ಅವರ ಜೀವನದ ಸುಂದರ ಕ್ಷಣವನ್ನ ರಸವತ್ತಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಾ ಸಾಗುತ್ತಾರೆ,ಹೆಂಡತಿನ ಇಂಪ್ರೆಸ್ ಮಾಡೋಕೆ ಗಂಡ,ಗAಡನ ಕೈರುಚಿ ನೋಡೋಕೆ ಕಾದಿರೋ ಹೆಂಡತಿ ಇಬ್ಬರು ಪರಸ್ಪರ ತಮ್ಮ ಕಾಲುಗಳನ್ನ ಎಳೆದುಕೊಳ್ಳುತ್ತ ಅಡುಗೆ ಮಾಡಿ ಕನ್ನಡಿಗರ ಮುಂದೆ ಇಡುತ್ತಾರೆ.
ಇದನ್ನೂ ಓದಿ: ಅನಿರುದ್ಧ್ ಜತ್ಕರ್ ಚಿತ್ರಕ್ಕೆ ಭಾರತಿ ವಿಷ್ಣುವರ್ಧನ್ ಅವರಿಂದ ಚಾಲನೆ..!
ಜಗಮಗಿಸೋ ಸೆಟ್ಟಿನಲ್ಲಿ ಅಡುಗೆ ಮನೆಯೆಂಬ ಅರಮನೆಯಲ್ಲಿ ಸ್ಟಾರ್ ದಂಪತಿಗಳ ಅಡಿಗೆ ರುಚಿಯನ್ನ ಸವಿಯುವುದರ ಜೊತೆಗೆ, ಅವರಿಗೆ ಹೊಸ ಅಡುಗೆಯೊಂದನ್ನ ಹೇಳಿಕೊಡೋಕೆ ಸ್ಪೇಷಲ್ ಶೆಫ್ ಕೂಡ ಅಲ್ಲಿ ಹಾಜರಿರುತ್ತಾರೆ.ಶೆಫ್ ಮಾರ್ಗದರ್ಶನದಲ್ಲಿ ಹೊಸ ಅಡುಗೆ ಕಲಿಯೋ ಸ್ಟಾರ್ ದಂಪತಿಗಳು ತಮ್ಮ ಜೀವನದ ಕಥೆಯನ್ನ ಹೇಳುತ್ತಾ ಸಾಗುವ ಈ ಹೊಸ ಶೋನಲ್ಲಿ ಮೊದಲ ಅತಿಥಿಗಳಾಗಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಹಾಗು ಅಭಿಜಿತ್ ಮತ್ತು ರೋಹಿಣೀ ದಂಪತಿಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮ ಇದೆ 22-07-2023ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12:00ಕ್ಕೆ ನಿಮ್ಮ ನೆಚ್ಚಿನ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಮನೆಮಂದಿಯನ್ನೆಲ್ಲ ಹಿಡಿದಿಡೋಕೆ ಆಗೋ ಒಂದೇ ಒಂದು ವಿಷಯ ಅಂದ್ರೆ ಅದು ಅಡುಗೆ, ಈ ಅಡುಗೆ ಕೈರುಚಿಯನ್ನೆ ಪ್ರಧಾನವಾಗಿ ಇಟ್ಟುಕೊಂಡು ಮಾಡ್ತೀರೋ ಈ ಕಾರ್ಯಕ್ರಮ ಕಪಲ್ಸ್ ಕಿಚನ್‌ನಲ್ಲಿ ಮನೋರಂಜನೆಗೆ ಕೊರತೆ ಇರಲ್ಲ, ಇಲ್ಲಿ ಬರೋ ಪ್ರತಿ ಸಲಬ್ರಟಿ ತಮ್ಮ ಪಾಕಪ್ರಾವಿಣ್ಯತೆಯನ್ನ ಕರುನಾಡಿಗೆ ತೋರಿಸುವುದರ ಜೊತೆಗೆ ತಮ್ಮ ಬಾಳಸಂಗಾತಿಯನ್ನ ಇಂಪ್ರೆಸ್ ಮಾಡಿದ ಕಥೆಯ ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಈ ಕಾರ್ಯಕ್ರಮ ಉಳಿದ ಕುಕರೀ ಶೋಗಳಿಗಿಂತ ವಿಭಿನ್ನವಾಗಿ ನಿಲ್ಲುವ ಎಲ್ಲ ಗ್ಯಾರಂಟಿಯನ್ನ ನಾವು ಕರುನಾಡಿಗೆ ಕೊಡಲು ಬಯಸುತ್ತೇವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.