Zee ಎಂಡಿ ಮತ್ತು CEO ಪುನಿತ್ ಗೋಯೆಂಕಾ ಅವರಿಗೆ `ಗೇಮ್ ಚೇಂಜರ್ ಆಫ್ ದಿ ಇಯರ್` ಪ್ರಶಸ್ತಿ!
ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಬೆಳವಣಿಗೆಗೆ ಅವರ ಅಮೂಲ್ಯ ಕೊಡುಗೆಗಾಗಿ ಗೋಯೆಂಕಾ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ನವದೆಹಲಿ : ಮುಂಬೈನಲ್ಲಿ ನಡೆದ ಇಂಟರ್‌ನ್ಯಾಶನಲ್ ಅಡ್ವರ್ಟೈಸಿಂಗ್ ಅಸೋಸಿಯೇಷನ್‌ನ (IAA) ಲೀಡರ್‌ಶಿಪ್ ಅವಾರ್ಡ್ಸ್‌ನಲ್ಲಿ ಮನರಂಜನಾ ಕ್ಷೇತ್ರದ ದೊಡ್ಡ ಕಂಪನಿಯಾಗಿರುವ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುನಿತ್ ಗೋಯೆಂಕಾ ಅವರಿಗೆ 'ಗೇಮ್ ಚೇಂಜರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಬೆಳವಣಿಗೆಗೆ ಅವರ ಅಮೂಲ್ಯ ಕೊಡುಗೆಗಾಗಿ ಗೋಯೆಂಕಾ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಜೀ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೆ ಪ್ರಶಸ್ತಿ ಅರ್ಪಿಸುತ್ತಾ ಮಾತನಾಡಿದ ಗೋಯೆಂಕಾ, ಇದು ಕೇವಲ ಪ್ರೋತ್ಸಾಹವಲ್ಲ, ಆದರೆ ನಾವು ನಿಜವಾಗಿಯೂ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಮುಂದೆ ಸಾಗುತ್ತಿದ್ದೇವೆ ಎಂಬುದಕ್ಕೆ ದೃಢವಾದ ಸಾಕ್ಷಿಯಾಗಿದೆ. ಈ ಗೆಲುವು ಜೀ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಸೇರಿದ್ದು ಅವರ ಸತತ ಪ್ರಯತ್ನದಿಂದ ಈ ಯಶಸ್ಸನ್ನು ಸಾಧಿಸಲು ಸಾಧ್ಯವಾಗಿದೆ. ನಮ್ಮ ಎಲ್ಲಾ ಪಾಲುದಾರರಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಲು ಶ್ರಮಿಸುತ್ತಿದ್ದಾರೆ ಎಂದರು.
ಜೀ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿರುವ ಗೋಯೆಂಕಾ ಅವರು ಕಂಪನಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಮತ್ತು ಗುಣಮಟ್ಟದ ಮನರಂಜನಾ ವಿಷಯವನ್ನು ಸೃಷ್ಟಿಸುವ ಮೂಲಕ ಮಾತ್ರವಲ್ಲದೆ ಸಮಾಜದಲ್ಲಿ ಪಾಸಿಟಿವ್ ಬದಲಾವಣೆಯನ್ನು ತರುವ ಮೂಲಕ ಅದರ ನಿಗದಿತ ಗುರಿಗಳತ್ತ ವ್ಯಾಪಾರವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರ ಭವಿಷ್ಯದ ದೃಷ್ಟಿ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೀಕ್ಷ್ಣವಾದ ಮುಂದಾಲೋಚನೆ ಜೀ ಮನರಂಜನಾ ವಲಯದಲ್ಲಿ ಮುಂಚೂಣಿಯಲ್ಲಿರಲು ಅನುವು ಮಾಡಿಕೊಟ್ಟಿದೆ ಮತ್ತು ಕಂಪನಿಯು ಇಂದು ಜಾಗತಿಕ ಸ್ಥಾನವನ್ನು ಸಾಧಿಸಲು ಕಾರಣವಾಗಿದೆ.
ಗೋಯೆಂಕಾ ಅವರು ಸಮರ್ಥ ನಾಯಕತ್ವದಲ್ಲಿ, ಜೀ ಸಂಸ್ಥೆ 190 ದೇಶಗಳಲ್ಲಿ ತನ್ನ ಮಾರುಕಟ್ಟೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಅಲ್ಲದೆ, ಇಂದು ಪ್ರತಿದಿನ 1.3 ಬಿಲಿಯನ್ ವೀಕ್ಷಕರನ್ನು ತಲಪುತ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.