ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಪ್ರಕರಣದಲ್ಲಿ ಪ್ರಾರಂಭವಾದ ಡ್ರಗ್ಸ್ ದಂಧೆಯ ತನಿಖೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಈ ಪ್ರಕರಣದಲ್ಲಿ ಧರ್ಮ ಪ್ರೊಡಕ್ಷನ್ ಕಾರ್ಯನಿರ್ವಾಹಕ ನಿರ್ಮಾಪಕ ಕ್ಷಿತಿಜ್ ಪ್ರಸಾದ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ಅವರನ್ನು ಇಂದು ಎನ್‌ಸಿಬಿಯ ಮುಂಬೈ ಕಚೇರಿಯಲ್ಲಿ ಪ್ರಶ್ನಿಸಲಿದೆ. ಮೂಲಗಳ ಪ್ರಕಾರ, ಎನ್‌ಸಿಬಿಗೆ ಕೆಲವು ಪ್ರಮುಖ ಸುಳಿವು ಸಿಕ್ಕಿದ್ದು, ಅದರ ಪ್ರಕಾರ ಕ್ಷಿತಿಜ್ ಪ್ರಸಾದ್ ಕೆಲ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.  ಇಂತಹ ಪರಿಸ್ಥಿತಿಯಲ್ಲಿ NCB ತಂಡವು ಕರಣ್ ಜೋಹರ್ ಅವರ ಪರ ಸತ್ಯವನ್ನು ಕ್ಷಿತಿಜ್ ಪ್ರಸಾದ್ ಮೂಲಕ ಬಹಿರಂಗಪಡಿಸುತ್ತಾರೆಯೇ ಎಂಬುದು ಕುತೂಹಲ ಮೂಡಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Drugs Case:Deepika Padukone ಗೋಸ್ಕರ NCB ಅಧಿಕಾರಿಗಳಿಗೆ ಪತಿ ರಣವೀರ್ ಸಿಂಗ್ ಮನವಿ


ಕರಣ್ ಜೋಹರ್ ಗೆ ಆಪ್ತರಾಗಿದ್ದಾರೆ ಕ್ಷಿತಿಜ್
ಕರಣ್ ಜೋಹರ್ ಗೆ ಕ್ಷಿತಿಜ್ ತುಂಬಾ ಆಪ್ತರಾಗಿದ್ದಾರೆ ಎನ್ನಲಾಗಿದೆ. ಕರಣ್ ಜೋಹರ್ ಅವರ ಮನೆಯಲ್ಲಿ 2019ರಲ್ಲಿ ಔತಣಕೂಟ ನಡೆದಿತ್ತು. ಈ ಪಾರ್ಟಿಯ ವಿಡಿಯೋ ಅನ್ನು ಕರಣ್ ಜೋಹರ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು ಈ ವಿಡಿಯೋ ಕುರಿತು ದೂರು ಬಂದ ಬಳಿಕ NCB ತಂಡ ಪ್ರಕರಣದ ತನಿಖೆಯಲ್ಲಿ ತೊಡಗಿದೆ. ಈ ವಿಡಿಯೋದಲ್ಲಿ ಕರಣ್ ಜೋಹರ್ ಸೇರಿದಂತೆ ಹಲವರು ಶಾಮೀಲಾಗಿದ್ದರು ಎನ್ನಲಾಗಿದೆ.


ಇದನ್ನು ಓದಿ- BIG NEWS: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಸೇರಿದಂತೆ ಹಲವರಿಗೆ ಸಮನ್ಸ್ ಜಾರಿಗೊಳಿಸಿದ NCB


ಶೀಘ್ರವೇ ಬಾಲಿವುಡ್ ನಟರನ್ನು NCB ತಲುಪುವ ಸಾಧ್ಯತೆ
ಕರಣ್ ಜೋಹರ್ ಅವರ ಈ ಔತಣಕೂಟದಲ್ಲಿ ಡ್ರಗ್ಸ್ ತಲುಪಿತ್ತೆ? ಎಂಬುದರ ಕುರಿತು ಕ್ಷಿತಿಜ್ ಅವರನ್ನು NCB ವಿಚಾರಣೆ ನಡೆಸಲಿದೆ. ಒಂದು ವೇಳೆ ಉತ್ತರ ಹೌದು ಎಂದಾದಲ್ಲಿ ಅಲ್ಲಿಗೆ ಡ್ರಗ್ಸ್ ತಲುಪಿಸಿದ್ದ್ತು ಯಾರು? ಮೂಲಗಳ ಪ್ರಕಾರ, ಈ ಆರಂಭಿಕ ಕೊಂಡಿಗಳನ್ನು ಜೋಡಿಸಿ ಶೀಘ್ರದಲ್ಲಿಯೇ NCB ಅಧಿಕಾರಿಗಳು ಖ್ಯಾತ ಬಾಲಿವುಡ್ ನಟರನ್ನು ಕೂಡ ತಲುಪಲಿದೆ.


ಇದನ್ನು ಓದಿ- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು