Apigate ಜೊತೆ ZEE5 ಪಾಲುದಾರಿಕೆ; ಇನ್ಮುಂದೆ ವಿಶ್ವಾದ್ಯಂತ ZEE5 ವೀಕ್ಷಣೆಗೆ ಅವಕಾಶ!
ಅಪಿಗೇಟ್`ನ API ವ್ಯವಸ್ಥೆಯು ZEE5 ನ ಬಹು-ಭಾಷಾ ವಿಷಯಗಳನ್ನು, ಕಾರ್ಯಕ್ರಮಗಳನ್ನು ಜಂಟಿಯಾಗಿ ಜಗತ್ತಿನಾದ್ಯಂತ ವೀಕ್ಷಕರಿಗೆ ತಲುಪಿಸಲಿದೆ.
ಬಾರ್ಸಿಲೋನಾ: ವಿಶ್ವದ ಬಹುದೊಡ್ಡ ನೆಟ್ವರ್ಕ್ ಆದ ಅಪಿಗೇಟ್ ಜೊತೆ ಮಹಾತ್ವಾಕಾಂಕ್ಷಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಇಂದು ಮೊಬೈಲ್ ವರ್ಲ್ಡ್ ಕಾಂಗ್ರೆಸ್ನಲ್ಲಿ ZEE5 ಘೋಷಿಸಿದೆ. ಈ ಮೂಲಕ ಅಪಿಗೇಟ್'ನ API ವ್ಯವಸ್ಥೆಯು ZEE5 ನ ಬಹು-ಭಾಷಾ ವಿಷಯಗಳನ್ನು, ಕಾರ್ಯಕ್ರಮಗಳನ್ನು ಜಂಟಿಯಾಗಿ ಜಗತ್ತಿನಾದ್ಯಂತ ವೀಕ್ಷಕರಿಗೆ ತಲುಪಿಸಲಿದೆ.
ಈ ಪಾಲುದಾರಿಕೆಯ ಮೂಲಕ, ZEE5 ಗ್ರಾಹಕರಿಗೆ ಸುರಕ್ಷಿತ ಮತ್ತು ಅನುಕೂಲಕರ ಪಾವತಿಗೆ ಅಗತ್ಯವಾದ ನೇರವಾದ ಕ್ಯಾರಿಯರ್ ಬಿಲ್ಲಿಂಗ್ ಒದಗಿಸುವುದು ಮಾತ್ರವಲ್ಲದೇ ಎಲ್ಲ ಚಂದಾದಾರರಿಗೂ ವ್ಯಾಲೆಟ್ ಸೌಲಭ್ಯ, ಸಂದೇಶ ಕಳುಹಿಸುವ ಸೌಲಭ್ಯವನ್ನೂ ನೀಡಲಿದೆ.
ಅಪಿಗೇಟ್ ಜೊತೆಗಿನ ಪಾಲುದಾರಿಕೆಯಿಂದಾಗಿ ಕುಂಕುಮ್ ಭಾಗ್ಯ, ಜೊಧಾ ಅಕ್ಬರ್ ಮತ್ತು ಸೆಂಬರುಥಿ, ಕೇದಾರನಾಥ್, ವೀರ್ ದಿ ವೆಡ್ಡಿಂಗ್, ಮರ್ಸಲ್ ಮತ್ತು ಅಭಯ್ (ಕುನಾಲ್ ಕೆಮ್ಮು), ಫೈನಲ್ ಕಾಲ್ (ಅರ್ಜುನ್ ರಾಂಪಾಲ್), ರಂಗ್ಬಾಜ್ ಮೊದಲಾದ ಒರಿಜಿನಲ್ಸ್ ನ ಉನ್ನತ ಟಿವಿ ಕಾರ್ಯಕ್ರಮಗಳನ್ನೂ ಒಳಗೊಂಡಂತೆ ZEE5ನ ಹಲವು ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ 11 ದೇಶಗಳ ಪ್ರೇಕ್ಷಕರಿಗೆ ಮತ್ತು ಗ್ರಾಹಕರಿಗೆ ತಲುಪಿಸಲು ಸಹಾಯವಾಗಲಿದೆ. ಅಬಿಗೇಟ್ ಜಾಗತಿಕ ಜಾಲವು ವಿಶ್ವಾದ್ಯಂತ 3.5 ಶತಕೋಟಿ ಜನರನ್ನು ತಲುಪಲಿದ್ದು, ಇದರಲ್ಲಿ ಏಷ್ಯಾ, ಮಧ್ಯ ಪೂರ್ವ, ಆಫ್ರಿಕಾ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದ 110 ಮೊಬೈಲ್ ನೆಟ್ವರ್ಕ್ ನಿರ್ವಾಹಕರನ್ನು ಒಳಗೊಂಡಿದೆ.
"ವಿಷಯ ರಚನೆಕಾರರಾಗಿ, ನಾವು ಜಗತ್ತಿನಾದ್ಯಂತ ನಮ್ಮ ವೀಕ್ಷಕರಿಗೆ ಬಹು ಭಾಷೆಗಳಲ್ಲಿ ಉತ್ತಮವಾದ ವಿಷಯಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಹಾಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ZEE5 ವ್ಯಾಪಕವಾದ ಪ್ರೇಕ್ಷಕರನ್ನು ಹೊಂದಲು ಅದರ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಅಪಿಗೇಟ್(Apigate) ಜೊತೆ ಪಾಲುದಾರಿಕೆ ಸಾಧಿಸಿದ್ದೇವೆ. ಈ ವಿಷಯವನ್ನು ಘೋಷಿಸಲು ನಿಜಕ್ಕೂ ಸಂತೋಷವಾಗುತ್ತಿದೆ" ಎಂದು ZEE ಇಂಟರ್ ನ್ಯಾಷನಲ್ ಮತ್ತು Z5 ಗ್ಲೋಬಲ್ ಸಿಇಓ ಅಮಿತ್ ಗೊಯೆಂಕಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ZEE5 ಗ್ಲೋಬಲ್ ಸಿಇಓ ಅರ್ಚನಾ ಆನಂದ್, "ದಕ್ಷಿಣ ಏಷ್ಯನ್ನರಿಗೆ ಮತ್ತು ಅದಕ್ಕೂ ಮೀರಿದ ಭಾಷೆಯ ವಿಷಯಕ್ಕಾಗಿ ಅತಿ ಕಡಿಮೆ ಸಮಯದಲ್ಲಿ ಮಾರುಕಟ್ಟೆಯನ್ನು ತಲುಪಲು ಸಹಾಯವಾಗುವಂತೆ ZEE5 ಅನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ. ಇದಕ್ಕಾಗಿ ನಾವು ಅಪಿಗೇಟ್ ಜೊತೆ ಪಾಲುದಾರರಿಗೆ ಹೊಂದಿದ್ದು, ಇದು ವಿಶ್ವದಾದ್ಯಂತ ವೀಕ್ಷರನ್ನು ತಲುಪಲು ಇದ್ದ ಬಹು ಒಪ್ಪಂದಗಳ ಸಂಕೀರ್ಣತೆಗಳನ್ನು ತೊಡೆದು ಹಾಕಿ ಉತ್ತಮ ಮಾರುಕಟ್ಟೆಯನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.
ZEE5 ಬಗ್ಗೆ ಒಂದಿಷ್ಟು ಮಾಹಿತಿ...
ZEE5, ಝೀ ಮನೋರಂಜನಾ ಕುಟುಂಬದ ಜಾಗತಿಕ ಮಾಧ್ಯಮ ಮತ್ತು ಎಂಟರ್ಟೈನ್ಮೆಂಟ್ ಪವರ್ ಹೌಸ್ ನ ಏಕೈಕ ಡಿಜಿಟಲ್ ತಾಣವಾಗಿದ್ದು, ವೀಕ್ಷಕರ ಮನೋರಂಜನಾ ಬೇಡಿಕೆಗಳನ್ನು ಹೆಚ್ಚಿಸಲಿದೆ. ಅಲ್ಲದೆ, ಇದು ಡಿಜಿಟಲ್ ಅರಿವು ಮತ್ತು ಜಾಗತಿಕವಾಗಿ ಸಂಪರ್ಕ ಹೊಂದುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಸಂಸ್ಕೃತಿಯನ್ನು ಪಸರಿಸುತ್ತದೆ.
ಅಷ್ಟೇ ಅಲ್ಲ, ZEE5, ವೀಕ್ಷಕರಿಗೆ ಆನ್-ಡಿಮಾಂಡ್ ಮತ್ತು ಲೈವ್ ಟಿವಿ ಎರಡರೊಂದಿಗೂ ಸಂಪೂರ್ಣ ಸಂಯೋಜಿತ ಮನರಂಜನಾ ಕೊಡುಗೆ ನೀಡುತ್ತದೆ. ವಿಶೇಷ ಒರಿಜಿನಲ್ಸ್, ಇಂಡಿಯನ್ ಮತ್ತು ಇಂಟರ್ನ್ಯಾಷನಲ್ ಮೂವೀಸ್ ಮತ್ತು ಟಿವಿ ಶೋಗಳು, ಮ್ಯೂಸಿಕ್ ಮತ್ತು ಆರೋಗ್ಯ ಮತ್ತು ಲೈಫ್ ಸ್ಟೈಲ್ ವೀಡಿಯೊಗಳನ್ನು, ವಿವಿಧ ಭಾಷೆಗಳಲ್ಲಿ 1,00,000 ಗಂಟೆಗಳ ಆನ್ ಡಿಮ್ಯಾಂಡ್ ವಿಷಯಳನ್ನು ಹೊಂದಿದೆ. ಇದು 90+ ಜನಪ್ರಿಯ ಲೈವ್ ಟಿವಿ ಚಾನಲ್ಗಳೊಂದಿಗೆ ವ್ಯಾಪಕವಾದ ಲೈವ್ ಟಿವಿ ಕೊಡುಗೆಗಳನ್ನು ಹೊಂದಿದೆ. ಒಂದೇ ಸ್ಥಳದಲ್ಲಿ ಲಭ್ಯವಿರುವ ಎಲ್ಲಾ ವಿಷಯಗಳೊಂದಿಗೆ, ZEE5 ನಿಜವಾಗಿಯೂ ಭಾರತದಲ್ಲಿನ ಭಾಷೆಯ ವಿಷಯಕ್ಕಾಗಿ ಅತ್ಯಂತ ವಿಸ್ತಾರವಾದ ಮನರಂಜನಾ ವೇದಿಕೆಯಾಗಿದೆ.
ಹಾಗಾಗಿ ವೀಕ್ಷಕರು ಇಂಗ್ಲಿಷ್, ಹಿಂದಿ, ಬೆಂಗಾಲಿ, ಮಲಯಾಳಂ, ತಮಿಳು, ತೆಲುಗು, ಕನ್ನಡ, ಮರಾಠಿ, ಒರಿಯಾ, ಭೋಜ್ಪುರಿ, ಗುಜರಾತಿ ಮತ್ತು ಪಂಜಾಬಿ ಸೇರಿದಂತೆ 11 ಭಾಷೆಗಳ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.