ಶ್ರೀಲಂಕಾದ ಡೈಲಾಗ್ ಆಪ್ ಜೊತೆ ಪಾಲುದಾರಿಕೆ ಸಾಧಿಸಿದ ZEE5!
ಶ್ರೀಲಂಕಾದ ViU ಆಪ್ ಗ್ರಾಹಕರು ಮಾಸಿಕ 350LKR ಪಾವತಿಸಿ ZEE5 ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ವಿವಿಧ ಭಾಷೆಗಳ ಕಾರ್ಯಕ್ರಮಗಳನ್ನೊಳಗೊಂಡ ದೇಶದ ಬಹುದೊಡ್ಡ ಡಿಜಿಟಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಿರುವ ZEE5, ಇದೀಗ ಶ್ರೀಲಂಕಾದ ಪ್ರಮುಖ ಸಂಪರ್ಕ ಪೂರೈಕೆ ಕಂಪನಿ ಡೈಲಾಗ್ ಆಕ್ಸಿಯಾಟಾ ಪಿಎಲ್ ಸಿ(Dialog Axiata PLC) ಜೊತೆ ಸಹಭಾಗಿತ್ವ ಸಾಧಿಸಿದೆ.
SAARC ಪ್ರದೇಶದಲ್ಲಿ ಇದು ZEE5ನ ಮೊದಲ ಅಂತಾರಾಷ್ಟ್ರೀಯ ಪಾಲುದಾರಿಕೆಯಾಗಿದ್ದು, ಡೈಲಾಗ್ ViU ಅಪ್ಲಿಕೇಶನ್ ಮೂಲಕ ವಿಷಯಗಳನ್ನು, ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಈ ಮೂಲಕ Dialog ViU ಬಳಕೆದಾರರು 1,00,000 ಗಂಟೆಗಳ ಪ್ರಮುಖ ಪ್ರಾದೇಶಿಕ ಭಾಷಾ ವಿಷಯಗಳು ಮತ್ತು ಕಾರ್ಯಕ್ರಮಗಳನ್ನು ಪಡೆಯಲಿದ್ದಾರೆ.
ಈ ಬಗ್ಗೆ ಗುರುವಾರ ಮುಂಬೈನಲ್ಲಿ ಅಧಿಕೃತವಾಗಿ ಘೋಷಿಸಲಾಗಿದ್ದು, ಶ್ರೀಲಂಕಾದ ViU ಆಪ್ ಗ್ರಾಹಕರು ಮಾಸಿಕ 350LKR ಪಾವತಿಸಿ ZEE5 ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಅಷ್ಟೇ ಅಲ್ಲದೆ, ಡೈಲಾಗ್ ಆಪ್ ಗ್ರಾಹಕರು ಕರೆನ್ಜಿತ್ ಕೌರ್, ಜೀರೋ Kms ಹಾಗೂ ಇತ್ತೀಚಿನ ಕ್ರೈಂ ಥ್ರಿಲ್ಲರ್ ರಂಗ್ಬಾಜ್ ಮತ್ತು ಅಭಯ್, ವೀರ್ ದಿ ವೆಡ್ಡಿಂಗ್ ಮತ್ತು ಟಾಯ್ಲೆಟ್, ತಮಿಳಿನ ಪ್ರಮುಖ ಕಾರ್ಯಕ್ರಮಗಳಾದ ಸೆಂಬರುಥಿ, ಪೂವೆ ಪೂಚೂಡವ ಮತ್ತು ಯಾರದಿ ನೀ ಮೋಹಿಣಿ, ಕಲಾಚಿರಿಪ್ಪು, ಅಮೇರಿಕಾ ಮ್ಯಾಪಿಲ್ಲೈ ಮತ್ತು ಡಿ 7 ಸೇರಿದಂತೆ ZEE5 ಒರಿಜಿನಲ್ಸ್'ನ ಲೈಬ್ರರಿಯಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಪಾಲುದಾರಿಕೆ ಬಗ್ಗೆ ಮಾತನಾಡಿದ ZEE5 ಮುಖ್ಯ ವ್ಯವಹಾರ ಅಧಿಕಾರಿ ಅರ್ಚನಾ ಆನಂದ್,
"ಶ್ರೀಲಂಕಾದಲ್ಲಿ ನಮ್ಮ ಆಪ್ ಲಾಂಚ್ ಮಾಡಲು ಡೈಲಾಗ್ ಆಕ್ಸಿಯಾಟಾದೊಂದಿಗೆ ಪಾಲುದಾರಿಕೆ ಘೋಷಿಸಲು ನಾವು ಉತ್ಸುಕರಾಗಿದ್ದೇವೆ. ಬಹು ಪ್ರಕಾರಗಳು ಮತ್ತು 12 ಭಾಷೆಗಳಲ್ಲಿ 1,00,000 ಕ್ಕಿಂತ ಹೆಚ್ಚಿನ ಗಂಟೆಗಳ ವಿಷಯದೊಂದಿಗೆ, ಡೈಲಾಗ್ನ ಚಂದಾದಾರರು ಈಗ ಒಂದೇ ಒಂದು ತಾಣದಲ್ಲಿ ಲಭ್ಯವಿರುವ ಭಾರತೀಯ ವಿಷಯದ ಅತಿ ದೊಡ್ಡ ಲೈಬ್ರರಿಗೆ ಪ್ರವೇಶವನ್ನು ಪಡೆದಿದ್ದಾರೆ. ಮನರಂಜನಾ ವಿಷಯದಲ್ಲಿ ಶ್ರೀಲಂಕಾವು ಮಾರುಕಟ್ಟೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿದ್ದು, ಈ ಅವಕಾಶವನ್ನು ಡೈಲಾಗ್ ಆಕ್ಸಿಯಾಟಾ ಜೊತೆ ಜಂಟಿಯಾಗಿ ಅನ್ವೇಷಿಸಲು ನಾವು ಎದುರು ನೋಡುತ್ತೇವೆ" ಎಂದಿದ್ದಾರೆ.
ZEE5 ಬಗ್ಗೆ ಒಂದಿಷ್ಟು ಮಾಹಿತಿ...
ZEE5, ಝೀ ಮನೋರಂಜನಾ ಕುಟುಂಬದ ಜಾಗತಿಕ ಮಾಧ್ಯಮ ಮತ್ತು ಎಂಟರ್ಟೈನ್ಮೆಂಟ್ ಪವರ್ ಹೌಸ್ ನ ಏಕೈಕ ಡಿಜಿಟಲ್ ತಾಣವಾಗಿದ್ದು, ವೀಕ್ಷಕರ ಮನೋರಂಜನಾ ಬೇಡಿಕೆಗಳನ್ನು ಹೆಚ್ಚಿಸಲಿದೆ. ಅಲ್ಲದೆ, ಇದು ಡಿಜಿಟಲ್ ಅರಿವು ಮತ್ತು ಜಾಗತಿಕವಾಗಿ ಸಂಪರ್ಕ ಹೊಂದುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಸಂಸ್ಕೃತಿಯನ್ನು ಪಸರಿಸುತ್ತದೆ.
ಅಷ್ಟೇ ಅಲ್ಲ, ZEE5, ವೀಕ್ಷಕರಿಗೆ ಆನ್-ಡಿಮಾಂಡ್ ಮತ್ತು ಲೈವ್ ಟಿವಿ ಎರಡರೊಂದಿಗೂ ಸಂಪೂರ್ಣ ಸಂಯೋಜಿತ ಮನರಂಜನಾ ಕೊಡುಗೆ ನೀಡುತ್ತದೆ. ವಿಶೇಷ ಒರಿಜಿನಲ್ಸ್, ಇಂಡಿಯನ್ ಮತ್ತು ಇಂಟರ್ನ್ಯಾಷನಲ್ ಮೂವೀಸ್ ಮತ್ತು ಟಿವಿ ಶೋಗಳು, ಮ್ಯೂಸಿಕ್ ಮತ್ತು ಆರೋಗ್ಯ ಮತ್ತು ಲೈಫ್ ಸ್ಟೈಲ್ ವೀಡಿಯೊಗಳನ್ನು, ವಿವಿಧ ಭಾಷೆಗಳಲ್ಲಿ 1,00,000 ಗಂಟೆಗಳ ಆನ್ ಡಿಮ್ಯಾಂಡ್ ವಿಷಯಳನ್ನು ಹೊಂದಿದೆ. ಇದು 90+ ಜನಪ್ರಿಯ ಲೈವ್ ಟಿವಿ ಚಾನಲ್ಗಳೊಂದಿಗೆ ವ್ಯಾಪಕವಾದ ಲೈವ್ ಟಿವಿ ಕೊಡುಗೆಗಳನ್ನು ಹೊಂದಿದೆ. ಒಂದೇ ಸ್ಥಳದಲ್ಲಿ ಲಭ್ಯವಿರುವ ಎಲ್ಲಾ ವಿಷಯಗಳೊಂದಿಗೆ, ZEE5 ನಿಜವಾಗಿಯೂ ಭಾರತದಲ್ಲಿನ ಭಾಷೆಯ ವಿಷಯಕ್ಕಾಗಿ ಅತ್ಯಂತ ವಿಸ್ತಾರವಾದ ಮನರಂಜನಾ ವೇದಿಕೆಯಾಗಿದೆ.
ಹಾಗಾಗಿ ವೀಕ್ಷಕರು ಇಂಗ್ಲಿಷ್, ಹಿಂದಿ, ಬೆಂಗಾಲಿ, ಮಲಯಾಳಂ, ತಮಿಳು, ತೆಲುಗು, ಕನ್ನಡ, ಮರಾಠಿ, ಒರಿಯಾ, ಭೋಜ್ಪುರಿ, ಗುಜರಾತಿ ಮತ್ತು ಪಂಜಾಬಿ ಸೇರಿದಂತೆ 11 ಭಾಷೆಗಳ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.