Chittara Star awards 2024 : ʼಚಿತ್ತಾರʼ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬಂಧ ಒಂದೂವರೆ ದಶಕದಿಂದಲೂ ಇದೆ. ʼಚಿತ್ತಾರʼದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ʼಚಿತ್ತಾರʼ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು ʼಚಿತ್ತಾರ ಸ್ಟಾರ್ ಅವಾರ್ಡ್ಸ್ʼ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ʼಚಿತ್ತಾರʼ ಇದೀಗ ʼಚಿತ್ತಾರ ಸ್ಟಾರ್ ಅವಾರ್ಡ್ಸ್-2024ʼ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದೆ.
                
ಚಿತ್ರರಂಗ ಮತ್ತು ಓದುಗನ ನಡುವೆ ಸಿನಿಸೇತುವೆಯಾಗಿ ಕೆಲಸ ನಿರ್ವಹಿಸುತ್ತಿರುವ ಚಿತ್ತಾರ, ಅನೇಕ ಪ್ರತಿಭಾವಂತರಿಗೆ ಅತೀ ದೊಡ್ಡ ವೇದಿಕೆಯಾಗಿದೆ. ಪ್ರತಿ ವರ್ಷದಂತೆ ಚಂದನವನವನ್ನು ಇನ್ನಷ್ಟು ಉತ್ತೇಜಿಸುವ ದೃಷ್ಟಿಯಿಂದ `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಗಣ್ಯಾತಿಗಣ್ಯರು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಪಾಲ್ಗೊಂಡಿರುವುದು ಚಿತ್ತಾರ ತಂಡಕ್ಕೆ ಇನ್ನಷ್ಟು ಉತ್ತೇಜನ ನೀಡಿದ್ದು, ʼಕರ್ಸ್ತʼ ಕನ್ನಡದಲ್ಲಿ ಈ ಅಪರೂಪದ ಕಾರ್ಯಕ್ರಮ ಕೊಟ್ಯಾಂತರ ಕನ್ನಡಿಗರನ್ನು ತಲುಪಲಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:Kalki 2898AD Movie Leaked: ಪ್ರಭಾಸ್ ಕಲ್ಕಿ 2898AD ಸಿನಿಮಾ ಲೀಕ್.. ಈ ಸೈಟ್‌ನಲ್ಲಿ ಸಂಪೂರ್ಣ ಚಿತ್ರ ಲಭ್ಯ!


ಚಂದನವನದ ಪ್ರತಿಭೆಗಳನ್ನು ಗುರುತಿಸಲು ಮತ್ತು ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿ ಹಿಡಿಯಲು ʼಚಿತ್ತಾರ ಸ್ಟಾರ್ ಅವಾರ್ಡ್ಸ್ʼ ವೇದಿಕೆಯಾಗಬೇಕೆಂಬ ಚಿತ್ತಾರ ತಂಡದ ಆಶಯ ಈಡೇರಿದ್ದು, ಸ್ಯಾಂಡ್‌ಲ್‌ವುಡ್‌ನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಲಾಗಿದೆ. ʼಚಿತ್ತಾರ ಸ್ಟಾರ್ ಅವಾರ್ಡ್ಸ್ʼ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಚಂದನವನದ ಅಭೂತಪೂರ್ವ ಸಾಧನೆಗೆ ಕನ್ನಡಿಯಾಗಿದ್ದು, ಇಲ್ಲಿನ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸಿ, ಸಂಭ್ರಮಿಸಿ, ಬೆಸೆಯುವಲ್ಲಿ ಸಫಲವಾಗಿತ್ತು. ಈ ಅಪರೂಪದ ಕಾರ್ಯಕ್ರಮ ರಾಜ್ಯದ ಜನ ಮೆಚ್ಚಿದ ಟೀವಿ ವಾಹಿನಿಯಾದ ಕಲರ್ಸ್ ಕನ್ನಡದಲ್ಲಿ ಶನಿವಾರ (06/07/2024) 5ಕ್ಕೆ (ರೆಡ್ ಕಾರ್ಪಟ್) ಮತ್ತು ನಾಳಿದ್ದು ರವಿವಾರ (07/07/2024) 4ಕ್ಕೆ(ಸಂಪೂರ್ಣ ಕಾರ್ಯಕ್ರಮ) ಪ್ರಸಾರವಾಗಲಿದೆ. ಚಿತ್ತಾರ ತಾರೆಗಳ ಸಂಭ್ರಮದಲ್ಲಿ ನೀವು ಭಾಗಿಯಾಗಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.