ವಯಸ್ಸಲ್ಲಿ 10 ವರ್ಷ ಕಿರಿಯ ಸ್ಟಾರ್‌ ಕ್ರಿಕೆಟರ್‌ ಜೊತೆ ಕಾವ್ಯಾ ಮಾರನ್‌ ಮದುವೆ!? ಆ ಆಟಗಾರ ಭಾರತದವರೇ.. ಯಾರೂ ಅಂತಾ ಗೊತ್ತಾ?

Published: Oct 05, 2024, 01:39 PM IST|Updated: Oct 05, 2024, 01:39 PM IST

Kavya Maran Love Life: ಕಾವ್ಯಾ ಮಾರನ್ .. ಈ ಹೆಸರು ಗೊತ್ತಿಲ್ಲದ ಕ್ರಿಕೆಟ್ ಅಭಿಮಾನಿಗಳೇ ಇಲ್ಲವೇ ಇಲ್ಲ... ಐಪಿಎಲ್‌ ಮೆಚ್ಚುವವರಿಗಂತೂ ಈ ಅತಿಲೋಕ ಸುಂದರಿ ಬಗ್ಗೆ ಖಂಡಿತವಾಗಿಯೂ ಗೊತ್ತಿರುತ್ತೆ. ಈಕೆ ಆಗಾಗ್ಗೆ ತನ್ನ ಡೇಟಿಂಗ್‌ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಒಂದೊಮ್ಮೆ ನಟರೊಂದಿಗೆ ಈಕೆ ಹೆಸರು ತಳುಕು ಹಾಕಿದ್ರೆ, ಮತ್ತೂ ಕೆಲವೊಮ್ಮೆ ಕ್ರಿಕೆಟಿಗರ ಜೊತೆ ಲಿಂಕ್‌ ಆಗಿರುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Kavya Maran Love Life1/9

ಕಾವ್ಯಾ ಮಾರನ್‌

ಕಾವ್ಯಾ ಮಾರನ್ .. ಈ ಹೆಸರು ಗೊತ್ತಿಲ್ಲದ ಕ್ರಿಕೆಟ್ ಅಭಿಮಾನಿಗಳೇ ಇಲ್ಲವೇ ಇಲ್ಲ... ಐಪಿಎಲ್‌ ಮೆಚ್ಚುವವರಿಗಂತೂ ಈ ಅತಿಲೋಕ ಸುಂದರಿ ಬಗ್ಗೆ ಖಂಡಿತವಾಗಿಯೂ ಗೊತ್ತಿರುತ್ತೆ. ಈಕೆ ಆಗಾಗ್ಗೆ ತನ್ನ ಡೇಟಿಂಗ್‌ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಒಂದೊಮ್ಮೆ ನಟರೊಂದಿಗೆ ಈಕೆ ಹೆಸರು ತಳುಕು ಹಾಕಿದ್ರೆ, ಮತ್ತೂ ಕೆಲವೊಮ್ಮೆ ಕ್ರಿಕೆಟಿಗರ ಜೊತೆ ಲಿಂಕ್‌ ಆಗಿರುತ್ತದೆ.

 

Kavya Maran Love Life2/9

ಕಾವ್ಯಾ ಮಾರನ್‌

ಕ್ರಿಕೆಟ್ ಫಾಲೋ ಮಾಡುವವರಿಗೆ ಕಾವ್ಯಾ ಮಾರನ್ ಚಿರಪರಿಚಿತ. ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಓನರ್... ಅಭಿಮಾನಿಗಳು ಪ್ರೀತಿಯಿಂದ ʼಕಾವ್ಯಾ ಪಾಪಾʼ ಎಂದೂ ಸಹ ಕರೆಯುತ್ತಾರೆ.

 

Kavya Maran Love Life3/9

ಕಾವ್ಯಾ ಮಾರನ್‌

ಒಂದು ಅರ್ಥದಲ್ಲಿ ಹೇಳುವುದಾದರೆ, ಕೆಲ ಕ್ರಿಕೆಟ್‌ ಪ್ರಿಯರು, ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಸಪೋರ್ಟ್‌ ಮಾಡೋದೇ ಕಾವ್ಯಾಗಾಗಿ. ಈಕೆ ಅಂತಹ ಸೌಂದರ್ಯವತಿ. ಮೇಲಾಗಿ ತನ್ನ ತಂಡದ ಆಟಗಾರರನ್ನು ಆಕೆ ಗೌರವಿಸುವ ರೀತಿ ಅಂತಹದ್ದು.

 

Kavya Maran Love Life4/9

ಕಾವ್ಯಾ ಮಾರನ್‌

ಆದರೆ ಇವೆಲ್ಲದರ ನಡುವೆ ಕಾವ್ಯಾ ಮಾರನ್ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಕಾವ್ಯಾ ಮಾರನ್ ಮದುವೆಯಾಗಲಿದ್ದಾರೆ ಎಂದು ವದಂತಿಗಳಿವೆ. ಅಷ್ಟೇ ಅಲ್ಲದೆ, ಆಕೆ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ಒಬ್ಬರ ಜೊತೆ  ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯು ಹಾಟ್ ಟಾಪಿಕ್ ಆಗಿದೆ.

 

Kavya Maran Love Life5/9

ಕಾವ್ಯಾ ಮಾರನ್‌

ಈ ಹಿಂದೆ ಕಾವ್ಯಾ ಮಾರನ್ ಹೆಚ್ಚಾಗಿ ಟಾಪ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದರೊಂದಿಗೆ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಜೋಡಿ ತಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ವದಂತಿಗೆ ಫುಲ್‌ ಸ್ಟಾಪ್‌ ನೀಡಿದ್ದರು.

 

Kavya Maran Love Life6/9

ಕಾವ್ಯಾ ಮಾರನ್‌

ಅದಾದ ನಂತರ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರೊಂದಿಗೆ ಹೆಚ್ಚು ಕಾಣಿಸಿಕೊಂಡ ಕಾವ್ಯಾ, ತಮ್ಮ ನಡುವೆ ಏನೋ ಇದೆ ಎಂಬ ಸಂಕೇತವನ್ನು ನೀಡಿದ್ದರು. ಆದರೆ ರಿಷಬ್ ಈಗಾಗಲೇ ಬೇರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಆ ಪ್ರೀತಿ ಕೊನೆಯವರೆಗೂ ನಿಲ್ಲಲಿಲ್ಲ.

 

Kavya Maran Love Life7/9

ಕಾವ್ಯಾ ಮಾರನ್‌

ಇದೀಗ ಕಾವ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ಟೀಂ ಇಂಡಿಯಾದ ಆಟಗಾರ ಅಭಿಷೇಕ್ ಶರ್ಮಾ ಜೊತೆ ಕ್ಲೋಸ್‌ ಆಗಿದ್ದಾರೆ. ಅವರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವದಂತಿಗಳು ಎಲ್ಲೆಡೆ ಹರಿದಾಡುತ್ತಿವೆ.

 

Kavya Maran Love Life8/9

ಕಾವ್ಯಾ ಮಾರನ್‌

ಅಭಿಷೇಕ್ ಶರ್ಮಾ ಹಲವು ವರ್ಷಗಳಿಂದ ಸನ್ ರೈಸರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಸ್ಟಾರ್ ಆಟಗಾರರನ್ನೂ ತಂಡದಿಂದ ತೆಗೆದು ಹಾಕಿರುವ ಕಾವ್ಯಾ ಮಾರನ್, ಅಭಿಷೇಕ್ ಶರ್ಮಾ ಅವರನ್ನು ಮಾತ್ರ ತಂಡದಲ್ಲಿ ಮುಂದುವರಿಸುತ್ತಿದ್ದಾರೆ. ಇದರ ಜೊತೆಗೆ ತಂಡದ ಇತರ ಆಟಗಾರರ ಯಶಸ್ಸಿಗೆ ಆಕೆ ತೋರುವ ಪ್ರಶಂಸೆ ಮತ್ತು ಅಭಿಷೇಕ್‌ ಸಕ್ಸಸ್‌ಗೆ ಆಕೆ ನೀಡುವ ಸನ್ನೆ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ. ಇದೇ ಕಾರಣದಿಂದ ಫ್ಯಾನ್ಸ್‌ ಇವರಿಬ್ಬರ ನಡುವೆ ಏನೋ ಇದೆ ಎಂದು ಹೇಳುತ್ತಿದ್ದಾರೆ.

 

Kavya Maran Love Life9/9

ಕಾವ್ಯಾ ಮಾರನ್‌

ಆದರೆ ಕೆಲ ಮೂಲಗಳ ಪ್ರಕಾರ ಇವರಿಬ್ಬರ ನಡುವೆ ಅಂತಹ ಸಂಬಂಧವೇನೂ ಇಲ್ಲ. ಕಾವ್ಯಾ ಮಾರನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ ಎಂದು ಹೇಳುತ್ತಿದ್ದಾರೆ. ಈ ವಿಚಾರ ಸತ್ಯಕ್ಕೆ ಎಷ್ಟು ಸಮೀಪ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ.