ಹಾಲಿನ ಜೊತೆ ಈ ಮೂರು ವಸ್ತುಗಳನ್ನು ಬೆರೆಸಿ ಕುಡಿದರೆ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ ಡಯಾಬಿಟೀಸ್
ಒಮ್ಮೆ ಮಧುಮೇಹ ಕಾಣಿಸಿಕೊಂಡರೆ ಊಟ ತಿಂಡಿ ಎಲ್ಲದರಲ್ಲಿಯೂ ಕಾಳಜಿ ವಹಿಸಬೇಕಾಗುತ್ತದೆ. ನಾವು ಸೇವಿಸುವ ಆಹಾರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
ಬೆಂಗಳೂರು : ಮಧುಮೇಹವಿದ್ದರೆ ದೇಹದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ. ಈ ರೋಗವು ಪ್ರತಿದಿನ ವೇಗವಾಗಿ ಹರಡುತ್ತಿದೆ. ಈ ಕಾಯಿಲೆಯಿದ್ದರೆ ಯಾವುದೇ ತಿನಿಸು ತಿನ್ನುವ ಮೊದಲು ಸಾವಿರ ಬಾರಿ ಯೋಚನೆ ಮಾಡಬೇಕಾಗುತ್ತದೆ. ತಿನ್ನುವ ಆಹಾರ ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆಯೇ ಇಲ್ಲವೇ ಎಂಬುದನ್ನು ಅರಿತುಕೊಂಡು ಸೇವಿಸಬೇಕಾಗುತ್ತದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಜೀವನಶೈಲಿ, ಕೆಲವು ಅಭ್ಯಾಸಗಳು ಮತ್ತು ಔಷಧಿಗಳ ಕಾರಣದಿಂದಾಗಿ, ನಿಯಂತ್ರಿಸಬಹುದು. ಈ ಕೆಳಗೆ ತಿಳಿಸಲಾದ ಮೂರು ಪದಾರ್ಥಗಳನ್ನು ಬೆರೆಸಿ ಹಾಲು ಕುಡಿದರೆ ಮಧುಮೇಹವನ್ನು ನಿಯಂತ್ರಿಸುವುದು ಸಾಧ್ಯ.
ಹಾಲಿನೊಂದಿಗೆ ಅರಿಶಿನ :
ಅರಿಶಿನ ಬೆರೆಸಿದ ಹಾಲನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಹಾಲನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯೂ
ಹೆಚ್ಚುತ್ತದೆ.
ಇದನ್ನೂ ಓದಿ : ಕಿವಿ ಕ್ಲೀನ್ ಮಾಡುವಾಗ ಈ ತಪ್ಪುಗಳಾಗದಂತೆ ನಿಗಾವಹಿಸಿ
ಹಾಲಿನೊಂದಿಗೆ ಬಾದಾಮಿ :
ಬಾದಾಮಿ ಹಾಲು ಕುಡಿಯಲು ರುಚಿಕರವಾಗಿರುವುದು ಮಾತ್ರವಲ್ಲ, ಮಧುಮೇಹಿಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಬಾದಾಮಿಯು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಅಂಶಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇತರ ಅನೇಕ ರೋಗಗಳಿಂದ ರಕ್ಷಿಸುತ್ತದೆ.
ಹಾಲಿನೊಂದಿಗೆ ಚಕ್ಕೆ :
ಚಕ್ಕೆ ಪುಡಿ ಬೆರೆಸಿದ ಹಾಲು ಮಧುಮೇಹ ರೋಗಿಗಳಿಗೆ ಉಪಯುಕ್ತವಾಗಿದೆ. ದಾಲ್ಚಿನ್ನಿ ಕ್ಯಾಲ್ಸಿಯಂ, ಆಲ್ಫಾ-ಕ್ಯಾರೋಟಿನ್, ಆಂಟಿ-ಆಕ್ಸಿಡೆಂಟ್‌ಗಳು, ಲೈಕೋಪೀನ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಈ ಹಾಲನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹವೂ ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ : ಚಹಾದ ಜೊತೆ ಈ ಆಹಾರಗಳನ್ನು ಸೇವಿಸಿದರೆ ಅಪಾಯ ಖಂಡಿತಾ .!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.