ಯುವಕರೇ ಹೃದಯಾಘಾತವನ್ನು ತಡೆಗಟ್ಟಲು ತಕ್ಷಣವೇ ಈ 4 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ..!
Heart Attack precautions : ಹೆಚ್ಚಾಗಿ ಇಂದಿನ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಶೇಖರಣೆಯಾಗುವುದರಿಂದ, ಅಪಧಮನಿಗಳು ಕಿರಿದಾಗುತ್ತವೆ. ಅಂತಹ ಸ್ಥಿತಿಯಲ್ಲಿ, ಹೃದಯವನ್ನು ತಲುಪಲು ರಕ್ತವು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಇದು ಅಧಿಕ ರಕ್ತದೊತ್ತಡ ಉಂಟುಮಾಡುತ್ತದೆ.
Heart Attack Symptoms : ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಜನರ ಆಹಾರ ಪದ್ಧತಿ ಮತ್ತು ಜೀವನಶೈಲಿ. ನೀವು ಹೃದಯಾಘಾತವನ್ನು ತಪ್ಪಿಸಲು ಬಯಸಿದರೆ, ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಹಿಂದಿನ ಕಾಲದಲ್ಲಿ ವಯಸ್ಸಾದವರಲ್ಲಿ ಹೆಚ್ಚಾಗಿ ಹೃದಯಾಘಾತದ ಅಪಾಯ ಕಂಡು ಬರುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಯುವಕರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಶೇಖರಣೆಯಾಗುವುದರಿಂದ, ಅಪಧಮನಿಗಳು ಕಿರಿದಾಗುತ್ತವೆ. ಅಂತಹ ಸ್ಥಿತಿಯಲ್ಲಿ, ಹೃದಯವನ್ನು ತಲುಪಲು ರಕ್ತವು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಇದು ಅಧಿಕ ರಕ್ತದೊತ್ತಡ ಉಂಟುಮಾಡುತ್ತದೆ. ನಂತರ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಕೆಲವು ಅಭ್ಯಾಸಗಳನ್ನು ನೀವು ಬದಲಾಯಿಸಿಕೊಳ್ಳಬೇಕು.
ಇದನ್ನೂ ಓದಿ: ಪ್ರತಿದಿನ ಏಲಕ್ಕಿ ಸೇವಿಸಿದ್ರೆ ಈ ಕಾಯಿಲೆಗಳು ದೂರವಾಗುತ್ತವೆ..!
1. ಆರೋಗ್ಯಕರ ಆಹಾರವನ್ನು ಸೇವಿಸಿ : ಆಹಾರ ನಮ್ಮ ಹೃದಯದ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬಿರುತ್ತದೆ. ನೀವು ಹೃದಯಾಘಾತದಿಂದ ದೂರ ಉಳಿಯಬೇಕೆ ಅಂತ ಬಯಸಿದರೆ, ಪ್ಯಾಕೆಟ್‌ನಲ್ಲಿ ಶೇಖರಿಸಿದ ಆಹಾರ, ಸಂಸ್ಕರಿಸಿದ ಆಹಾರ, ಸಕ್ಕರೆ, ಕೆಂಪು ಮಾಂಸ ಮತ್ತು ಕರಿದ ಆಹಾರವನ್ನು ತಪ್ಪಿಸಿ. ಬದಲಾಗಿ, ಧಾನ್ಯಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಮೀನುಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.
2. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ : ಸಿಗರೇಟ್ ಸೇವನೆ ಮತ್ತು ಮದ್ಯಪಾನ ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ನೀವು ಎಷ್ಟು ಬೇಗ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುತ್ತೀರೋ ಅಷ್ಟು ಒಳ್ಳೆಯದು. ಇಲ್ಲದಿದ್ದರೆ, ನಿಮಗೆ ಹೃದಯಯಕ್ಕೆ ಸಂಬಂಧಿಸಿ ಸಮಸ್ಯೆಗಳು ಉಂಟಾಗಬಹುದು.
ಇದನ್ನೂ ಓದಿ: ಕರಿಬೇವಿನ ನೀರನ್ನು ಪ್ರತಿದಿನ ಕುಡಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ
3. ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ : ನೀವು ಪ್ರತಿದಿನ 8 ರಿಂದ 10 ಗಂಟೆಗಳ ಕಾಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದರೆ, ಹೃದಯಾಘಾತದ ಅಪಾಯವು ಬಹಳಷ್ಟು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಜಿಮ್‌ಗೆ ಹೋಗಲು ಸಮಯವಿರುವುದಿಲ್ಲ. ನಾವು ಎಷ್ಟೇ ಕಾರ್ಯನಿರತರಾಗಿದ್ದರೂ ವ್ಯಾಯಾಮ ಮಾಡಲು ಒಂದು ಗಂಟೆ ತೆಗೆದುಕೊಳ್ಳಬೇಕು. ದಿನನಿತ್ಯ ವಾಕಿಂಗ್ ಸೇರಿದಂತೆ ಇತರ ವ್ಯಾಯಾಮಗಳನ್ನು ಮಾಡಿ. ಹೆಚ್ಚು ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿದರೆ, ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.
4. ಅನಗತ್ಯ ಚಿಂತೆ ಬೇಡ : ಕೆಲಸದ ಒತ್ತಡದ ಚಿಂತೆ, ಹಣ, ಸಂಸಾರ, ಕೆಲವೊಮ್ಮೆ ಸಂಬಂಧದ ವೈಫಲ್ಯವೂ ಮನುಷ್ಯನನ್ನು ಚಿಂತೆಗೆ ದೂಡುತ್ತದೆ. ಆದ್ದರಿಂದ ಅನಗತ್ಯವಾಗಿ ಚಿಂತಿಸುವುದನ್ನು ನಿಲ್ಲಿಸಿ ಮತ್ತು ಸಂತೋಷವಾಗಿರುವುದನ್ನು ಅಭ್ಯಾಸ ಮಾಡಿ. ಇದರಿಂದ ಆರೋಗ್ಯ ಮತ್ತು ಸಮಸ್ಯೆಗಳೂ ಸಹ ದೂರವಾಗುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.