Adulterants in Watermelon : ಇಂದಿನ ಕಾಲದಲ್ಲಿ ಯಾವುದು ಅಸಲಿ ಯಾವುದು ನಕಲಿ ಎನ್ನುವುದನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಕೆಲವೊಮ್ಮೆ ನಾವು ನಕಲಿ ಪ್ರಪಂಚದಲ್ಲಿ ಬದುಕುತ್ತಿದ್ದೇವೆಯೋ ಎನ್ನುವ ಯೋಚನೆ ಕಾಡುತ್ತದೆ. ನಾವು ಸೇವಿಸುವ ಆಹಾರ ಕೂಡಾ ರಾಸಾಯನಿಕಗಳಿಂದಲೇ ಕೂಡಿದೆ. ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ರುಚಿ ಹೆಚ್ಚಿಸಲು ಮತ್ತು ಕಲರ್ ನೀಡುವ ಸಲುವಾಗಿ ರಾಸಾಯನಿಕ ಬಳಸಲಾಗುತ್ತದೆ. ಕಲ್ಲಂಗಡಿಯ ಸಿಹಿ ಹೆಚ್ಚಿಸಲು ಮತ್ತು ಕೆಂಪು ಬಣ್ಣ ಬರುವಂತೆ ಮಾಡುವ ಸಲುವಾಗಿ ಎರಿಥ್ರೋಸಿನ್ ಎನ್ನುವ ವಿಷಕಾರಿ ಬಣ್ಣವನ್ನು ಬಳಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಹಣ್ಣು ಸವಿಯುವ ಮುನ್ನ ಇರಲಿ ಎಚ್ಚರ : 
ಭಾರತೀಯ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈ ಕಲೆ ಬೆರಕೆ ಪತ್ತೆ ಹೇಗೆ ಮಾಡುವುದು ಎನ್ನುವ ಬಗ್ಗೆ ವಿಡಿಯೋ ಮೂಲಕ ವಿವರಿಸಿದೆ. ಈ ವೀಡಿಯೊದಲ್ಲಿ, ಕಲ್ಲಂಗಡಿಯನ್ನು ಎರಡು ಭಾಗಗಳಾಗಿ ಕತ್ತರಿಸಿ ತಿರುಳಿನ ಬಣ್ಣವನ್ನು ಪರೀಕ್ಷಿಸುವಂತೆ ಸಲಹೆ ನೀಡಿದ್ದಾರೆ. ಹತ್ತಿಯ ಉಂಡೆಯನ್ನು ಮಾಡಿ ಕಲ್ಲಂಗಡಿ ಹಣ್ಣಿನ ಕೆಂಪು ಭಾಗದ ಮೇಲೆ ಸ್ವಲ್ಪ ಹೊತ್ತು ಹಾಗೆಯೇ ಇಡಬೇಕು. ಈ ಪ್ರಕ್ರಿಯೆಯಲ್ಲಿ ಹತ್ತಿಯ ಉಂಡೆ ಕೆಂಪು ಬಣ್ಣಕ್ಕೆ ತಿರುಗಿದರೆ ಹಣ್ಣಿನಲ್ಲಿ ಎರಿಥ್ರೋಸಿನ್ ಬೆರೆತಿದೆ ಎಂದರ್ಥ.


ಇದನ್ನೂ ಓದಿ : Deadly Disease: ಈ ಒಂದೇ ಒಂದು ಟೆಸ್ಟ್ ಮಾಡಿಸಿ ಹಲವು ಮಾರಣಾಂತಿಕ ಕಾಯಿಲೆಗಳ ಅಪಾಯಗಳಿಂದ ಪಾರಾಗಿ!


ಕಲ್ಲಂಗಡಿಗಳನ್ನು ಬೇಗ ಹಣ್ನಾಗಿಸಲು ಬಳಸಲಾಗುತ್ತದೆ ಕಾರ್ಬೈಡ್ :
ಯಾವುದೇ ಹಣ್ಣನ್ನು ಕೊಳ್ಳುವಾಗ ಗ್ರಾಹಕರು ಹೆಚ್ಚು ಹಣ್ಣಾಗಿದೆಯೇ ಎನ್ನುವುದನ್ನು ಗಮನಿಸಿಯೇ ಖರೀದಿಸುತ್ತಾರೆ. ಆದರೆ ಕೆಲವರು ಕಲ್ಲಂಗಡಿ ಹಣ್ಣನ್ನು ಬೇಗನೆ ಹಣ್ನಾಗಿಸಲು ಕಾರ್ಬೈಡ್ ಬಳಸುತ್ತಾರೆ. ಕಲ್ಲಂಗಡಿ ಮೇಲಿರುವ ಬಿಳಿ ಬಣ್ಣದ ಪುಡಿ ಈ ಕಾರ್ಬೈಡ್ ಆಗಿರುತ್ತದೆ. ನೀವು ಕಲ್ಲಂಗಡಿ ಖರೀದಿಸುವಾಗ ಹಣ್ಣಿನ ಮೇಲೆ ಬಿಳಿ ಬಣ್ಣದ ಪುಡಿ ಅಂದರೆ ಕಾರ್ಬೈಡ್ ಇದೆಯೇ ಎನ್ನುವುದನ್ನು ಖಂಡಿತವಾಗಿಯೂ ಗಮನಿಸಿಕೊಳ್ಳಿ. ಮಾವಿನ ಹಣ್ಣು ಮತ್ತು ಬಾಳೆಹಣ್ಣಿನಲ್ಲಿಯೂ ಇದನ್ನು ಬಳಸಲಾಗುತ್ತದೆ. 


ಕಾರ್ಬೈಡ್ ಉಂಟು ಮಾಡುವ ಹಾನಿ : 
ಕಾರ್ಬೈಡ್ ನ ಮಿತಿಮೀರಿದ ಸೇವನೆಯು ಮನುಷ್ಯರಿಗೆ ತುಂಬಾ ಹಾನಿಕಾರಕವಾಗಿದೆ. ಇದು ತಲೆನೋವು, ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಶ್ವಾಸಕೋಶಕ್ಕೆ ಹಾನಿಯನ್ನು ಉಂಟುಮಾಡಬಹುದು. ದೇಹದ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Fat Reducing Tips: ಬೆಳಗ್ಗೆ ಖಾಲಿ ಹೊಟ್ಟೆ ಈ ಒಂದು ಕೆಲಸ ಮಾಡಿ, ಹೊಟ್ಟೆ ಬೊಜ್ಜು ಕರಗಿಸಿ!


ಬಣ್ಣಕ್ಕೆ ಬಳಸುವ ಎರಿಥ್ರೋಸಿನ್ ಪರಿಣಾಮ : 
ಜೆಬ್ರಾಫಿಶ್ ಎಂಬ್ರಿಯೋ ಡೆವೆಲೊಪ್ ಮೆಂಟ್ ಎರಿಥ್ರೋಸಿನ್ ಪರಿಣಾಮಗಳ ಮೇಲೆ ಅಧ್ಯಯನ ನಡೆಸಿದೆ. ಈ ವರ್ಣದ ದೀರ್ಘಕಾಲೀನ ಬಳಕೆಯು ಬಾಲ್ಯದ ನಡವಳಿಕೆ ಮತ್ತು ಥೈರಾಯ್ಡ್ ಫಂಕ್ಷನ್ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತೋರಿಸಿದೆ. ದೌಲತ್ ರಾಮ್ ಕಾಲೇಜ್ ಮತ್ತು ಸಂಸ್ಕೃತಿ ಫೌಂಡೇಶನ್‌ನ ಸಂಶೋಧಕರು ಜೆಬ್ರಾಫಿಶ್ ಎಂಬ್ರಿಯೋ ಡೆವೆಲೊಪ್ ಮೆಂಟ್ ಮೇಲೆ ಫುಡ್ ಕಲರ್  ಎರಿಥ್ರೋಸಿನ್ ಮತ್ತು ಟಾರ್ಟ್ರಾಜಿನ್ ವಿಷಕಾರಿ ಪರಿಣಾಮಗಳು" ಎಂಬ ಅಧ್ಯಯನವು ಎರಿಥ್ರೋಸಿನ್ ಮತ್ತು ಟಾರ್ಟ್ರಾಜಿನ್‌ನ ಹೆಚ್ಚಿನ ಸೇವನೆಯು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎನ್ನುವುದನ್ನು ಹೇಳಿದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.