ಬೆಂಗಳೂರು : ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ದೈಹಿಕ ಬದಲಾವಣೆಗಳು ಬಹಳ ಬೇಗ ಕಂಡುಬರುತ್ತವೆ. ಮಹಿಳೆಯರು 30 ನೇ ವಯಸ್ಸಿಗೆ ತಲುಪಿದಾಗ, ಅವರ ದೇಹದಲ್ಲಿ ಅನೇಕ ಬದಲಾವಣೆಗಳಾಗಲು ಆರಂಭವಾಗುತ್ತವೆ. ಈ ಬದಲಾವಣೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸದೆ ಹೋದರೆ, ಅವುಗಳು ಗಂಭೀರ ಕಾಯಿಲೆಗಳ ರೂಪವನ್ನು ಪಡೆದುಕೊಳ್ಳುತ್ತದೆ.  ಇಂದಿನ ಕಾಲದಲ್ಲಿ, ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕಾರಣದಿಂದಾಗಿ ಈ ಬದಲಾವಣೆಯು ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಾಗಿ 30 ನೇ ವಯಸ್ಸಿನಲ್ಲಿಯೇ ಮಹಿಳೆಯರು ಅನೇಕ ರೋಗಗಳ ಅಪಾಯಕ್ಕೆ ಒಳಗಾಗುತ್ತಾರೆ. 


COMMERCIAL BREAK
SCROLL TO CONTINUE READING

30 ನೇ ವಯಸ್ಸಿನಲ್ಲಿ, ಮಹಿಳೆಯರು ಎದುರಿಸುತ್ತಾರೆ ಈ ಕಾಯಿಲೆಗಳ ಅಪಾಯ :
1. ಮಹಿಳೆಯರಲ್ಲಿ ಫರ್ಟಿಲಿಟಿ ಸಮಸ್ಯೆ :

ಸರಿಯಾದ ಜೀವನಶೈಲಿಯನ್ನು ಅನುಸರಿಸದೆ ಹೋದರೆ 30 ನೇ ವಯಸ್ಸಿನಲ್ಲಿ ಫರ್ಟಿಲಿಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಅಪಾಯ ಹೆಚ್ಚಾಗಿರುತ್ತದೆ. ಇದರಿಂದಾಗಿ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ.  ಈ ಹಿನ್ನೆಲೆಯಲ್ಲಿ ಈ ವಯಸ್ಸಿನಲ್ಲಿ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ. 


ಇದನ್ನೂ ಓದಿ : ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಈ ಎರಡು ವಸ್ತುಗಳು


2. ಸ್ತನ ಕ್ಯಾನ್ಸರ್  :
ಸಾಮಾನ್ಯವಾಗಿ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಸ್ತನ ಕ್ಯಾನ್ಸರ್  ಅಪಾಯವನ್ನು ಎದುರಿಸುತ್ತಾರೆ. ಆದರೆ, ಇತ್ತೀಚಿನ ಅಧ್ಯಯನವೊಂದರಲ್ಲಿ, 30 ವರ್ಷ ವಯಸ್ಸಿನ ನಂತರ, ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ಕೆಲವೊಮ್ಮೆ ಇದರ ಲಕ್ಷಣಗಳು 20 ವರ್ಷ ವಯಸ್ಸಿನಿಂದಲೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸ್ತನ ಅಥವಾ ಕಂಕುಳಿನಲ್ಲಿ ಗಡ್ಡೆ, ಎದೆಯ ಭಾಗ ದಪ್ಪವಾಗುವುದು, ಊತ, ಸ್ತನದ ಮೇಲಿನ ಚರ್ಮದಲ್ಲಿ ಕಿರಿಕಿರಿಯಂಥಹ   ರೋಗಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ. 


3. ಆಸ್ಟಿಯೊಪೊರೋಸಿಸ್ :
ವಯಸ್ಸು 30 ಆಗುತ್ತಿರುವಾಗಲೇ ಮಹಿಳೆಯರ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಇದಕ್ಕೆ ದೊಡ್ಡ ಕಾರಣವೆಂದರೆ ಸೇವಿಸುವ ಆಹಾರ. ಈ  ಸಮಯದಲ್ಲಿ ಆಸ್ಟಿಯೊಪೊರೋಸಿಸ್ ನಂಥಹ ರೋಗಗಳ ಅಪಾಯವು ಮಹಿಳೆಯರಲ್ಲಿ ಹೆಚ್ಚಾಗುತ್ತದೆ. ಇದರೊಂದಿಗೆ, ಈ ವಯಸ್ಸಿನಲ್ಲಿ ದೈಹಿಕ ಚಟುವಟಿಕೆಯ ಕೊರತೆ ಕೂಡಾ ಕಾಡುತ್ತದೆ. ಆಹಾರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ತೆಗೆದುಕೊಳ್ಳದಿದ್ದರೆ, ದೇಹದಲ್ಲಿ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಆಸ್ಟಿಯೊಪೊರೋಸಿಸ್ ಸಮಸ್ಯೆ ಕೂಡಾ ಒಂದು.  


ಇದನ್ನೂ ಓದಿ : Health Tips: ಕಡಲೆಕಾಯಿ ತಿನ್ನುವ ಮೊದಲು ಈ ಮುಖ್ಯ ವಿಚಾರ ತಿಳಿದಿರಲಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.