ಮಧುಮೇಹಿಗಳು ಮನೆಯಲ್ಲಿಯೇ ಬೆಳೆಸಬಹುದು ಈ ಇನ್ಸುಲಿನ್ ಸಸ್ಯ, ನೀಡುತ್ತೆ ಹಲವು ಲಾಭಗಳು

Insulin Plant: ಇತ್ತೀಚಿನ ದಿನಗಳಲ್ಲಿ ಮಧುಮೇಹ ಒಂದು ಸಾಮಾನ್ಯ ಜೀವನ ಶೈಲಿ ಕಾಯಿಲೆಯಾಗಿ ಮಾರ್ಪಟ್ಟಿದೆ. ಇದರಿಂದ ಮಧುಮೇಹಿಗಳ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪರಿಷ್ಟಿತಿಯಲ್ಲಿ ನಾವು ಕೆಲ ಸಂಗತಿಗಳನ್ನು ನಮ್ಮ ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಅದರಲ್ಲಿಯೂ ವಿಶೇಷ ಎಂದರೆ, ಮಧುಮೇಹಿಗಳು ತಮ್ಮ ಮನೆಯಲ್ಲಿ ಈ ಇನ್ಸುಲಿನ್ ಸಸ್ಯವನ್ನು ಬೆಳೆಸಬೇಕು. ಈ ಸಸ್ಯ ಮಧುಮೇಹಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 19, 2023, 06:22 PM IST
  • ಕೆಲವೊಮ್ಮೆ ರೋಗಿಯ ದೇಹದಲ್ಲಿ ಸಕ್ಕರೆಯ ಸಮಸ್ಯೆ ಹೆಚ್ಚಾದಾಗ, ಅವನು ಇನ್ಸುಲಿನ್ ಸಹಾಯ ಪಡೆದುಕೊಳ್ಳಬೇಕಾಗುತ್ತದೆ ಎಂಬುದನ್ನು ನೀವು ಓದಿರಬಹುದು.
  • ಟೈಪ್ 1 ಮಧುಮೇಹ ಹೊಂದಿರುವ ಜನರಲ್ಲಿ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಬೀಟಾ ಕೋಶಗಳು ನಾಶವಾಗುತ್ತವೆ.
ಮಧುಮೇಹಿಗಳು ಮನೆಯಲ್ಲಿಯೇ ಬೆಳೆಸಬಹುದು ಈ ಇನ್ಸುಲಿನ್ ಸಸ್ಯ, ನೀಡುತ್ತೆ ಹಲವು ಲಾಭಗಳು title=
ಇನ್ಸುಲಿನ್ ಸಸ್ಯದ ಆರೋಗ್ಯಕರ ಲಾಭಗಳು

Insulin Plant For Diabetic Patients: ಅನಾರೋಗ್ಯಕರ ಜೀವನಶೈಲಿ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಅದರಲ್ಲಿಯೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಮಧುಮೇಹ ಒಂದು ಸಾಮಾನ್ಯ ಜೀವನಶೈಲಿಯ ಕಾಯಿಲೆಯಾಗಿದ್ದು, ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ವೈದ್ಯರು ಮಧುಮೇಹ ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಮತ್ತು ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರವನ್ನು ಸೇವಿಸುವ ಸಲಹೆ ನೀಡುತ್ತಾರೆ. ಆದರೆ, ಈ ಔಷಧಿಗಳಿಂದ ನಮ್ಮನ್ನು ದೂರ ಉಳಿಸುವ ಒಂದು ಸಸ್ಯವೂ ಕೂಡ ಇದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ?  ಹೌದು, ಈ ಸಸ್ಯವು ಮಧುಮೇಹ ರೋಗಿಗಳಿಗೆ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನೀವೂ ಕೂಡ ಮಧುಮೇಹಿಗಳಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಮಧುಮೇಹ ರೋಗಿಯಿದ್ದರೆ, ನಿಮಗೆ ಇನ್ಸುಲಿನ್ ಅಗತ್ಯ ತಿಳಿದಿರುತ್ತದೆ. ನೀವು ಈ ಸಸ್ಯವನ್ನು ಬಳಸಿ ನಿಮ್ಮ ಇನ್ಸುಲಿನ್ ಕೊರತೆಯನ್ನು ಹೇಗೆ ನೀಗಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ವಾಸ್ತವದಲ್ಲಿ, ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ನಿಂತು ಹೋದಾಗ, ಹೊರಗಿನಿಂದ ಇನ್ಸುಲಿನ್ ಡಾಟ್ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಇನ್ಸುಲಿನ್ ಸಸ್ಯವು ನಿಮಗೆ ತುಂಬಾ ಪ್ರಯೋಜನ ನೀಡುತ್ತದೆ. ಈ ಗಿಡವನ್ನು ನೀವು ನಿಮ್ಮ ಮನೆಯಂಗಳದಲ್ಲಿಯೂ ಕೂಡ ನೆಡಬಹುದು. ಇನ್ಸುಲಿನ್ ಸಸ್ಯವು ಒಂದು ಔಷಧೀಯ ಸಸ್ಯವಾಗಿದೆ. ಇದನ್ನು ಹಲವು ವರ್ಷಗಳಿಂದ ಔಷಧ ತಯಾರಿಕೆಗೆ ಬಳಸಲಾಗುತ್ತಿದೆ. ಇದರಿಂದ ನೀವು ನೇರವಾಗಿ ಇನ್ಸುಲಿನ್ ಪಡೆಯಲು ಸಾಧ್ಯವಿಲ್ಲ, ಆದರೆ ಇದು ಇನ್ಸುಲಿನ್ ರಚನೆಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಈ ಸಸ್ಯದಲ್ಲಿ ಅಂತಹ ಅನೇಕ ಗುಣಗಳಿವೆ ಮತ್ತು ಇದು ಮಧುಮೇಹದಂತಹ ಅನೇಕ ಗಂಭೀರ ಕಾಯಿಲೆಗಳನ್ನು ತೊಡೆದುಹಾಕಲು ಪ್ರಯೋಜನಕಾರಿಯಾಗಿದೆ. ಇನ್ಸುಲಿನ್ ಸಸ್ಯವು ನೈಸರ್ಗಿಕ ರಾಸಾಯನಿಕಗಳನ್ನು ಹೊಂದಿರುತ್ತದೆ, ಇದನ್ನು ಬಳಸಿಕೊಂಡು ರಕ್ತದಲ್ಲಿನ ಸಕ್ಕರೆಯನ್ನು ಗ್ಲೂಕೋಸ್ ಆಗಿ ಪರಿವರ್ತಿಸಲಾಗುತ್ತದೆ. ಇದರೊಂದಿಗೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಯೋಜನ ಸಿಗುತ್ತದೆ.

ಇನ್ಸುಲಿನ್ ಪಡೆಯುವುದರಿಂದ ಆಗುವ ಪ್ರಯೋಜನಗಳೇನು?
ಮನೆಯಲ್ಲಿ ಡಯಾಬಿಟೀಸ್ ರೋಗಿಯಿದ್ದರೆ, ಅವರಿಗೆ ಇನ್ಸುಲಿನ್ ಸಸ್ಯದ ಎಲೆಗಳು ಔಷಧಿಗಿಂತ ಕಡಿಮೆಯಿಲ್ಲ. ಇನ್ಸುಲಿನ್ ಸಸ್ಯದಲ್ಲಿರುವ ಗುಣಗಳು ಬಿಪಿ, ಹೃದಯ ಸಂಬಂಧಿ ಸಮಸ್ಯೆಗಳು, ಕಣ್ಣು, ಕರುಳುಗಳಿಗೂ ಪ್ರಯೋಜನಕಾರಿಯಾಗಿದೆ. ಇನ್ಸುಲಿನ್ ಸಸ್ಯದ ಎಲೆಗಳಲ್ಲಿ ಪ್ರೋಟೀನ್ಗಳು, ಫ್ಲೇವನಾಯ್ಡ್ಗಳು, ಉತ್ಕರ್ಷಣ ನಿರೋಧಕ ಆಸ್ಕೋರ್ಬಿಕ್ ಆಮ್ಲ, ಬೀಟಾ-ಕ್ಯಾರೋಟಿನ್, ಕಾರ್ಸೋಲಿಕ್ ಆಮ್ಲ, ಟೆರ್ಪೆನಾಯ್ಡ್ಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ.

ಇದನ್ನೂ ಓದಿ-ನೀವು ಆರೋಗ್ಯಕರ ಪದ್ಧತಿಯಲ್ಲಿ ನೀರು ಕುಡಿಯುತ್ತೀರಾ? ಈ ಬೇಸಿಕ್ ನಿಯಮಗಳು ನಿಮಗೆ ಗೊತ್ತಿರಲಿ

ಇನ್ಸುಲಿನ್ ಯಾರಿಗೆ ಬೇಕು?
ಕೆಲವೊಮ್ಮೆ ರೋಗಿಯ ದೇಹದಲ್ಲಿ ಸಕ್ಕರೆಯ ಸಮಸ್ಯೆ ಹೆಚ್ಚಾದಾಗ, ಅವನು ಇನ್ಸುಲಿನ್ ಸಹಾಯ ಪಡೆದುಕೊಳ್ಳಬೇಕಾಗುತ್ತದೆ ಎಂಬುದನ್ನು ನೀವು ಓದಿರಬಹುದು.  ಟೈಪ್ 1 ಮಧುಮೇಹ ಹೊಂದಿರುವ ಜನರಲ್ಲಿ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಬೀಟಾ ಕೋಶಗಳು ನಾಶವಾಗುತ್ತವೆ. ಇದರಿಂದಾಗಿ ಇನ್ಸುಲಿನ್ ಉತ್ಪಾದನೆ ನಿಂತುಹೊಗಿತ್ತದೆ. ಮತ್ತೊಂದೆಡೆ, ಟೈಪ್-2 ಡಯಾಬಿಟಿಸ್ ಇರುವವರ ದೇಹದಲ್ಲಿ ಇನ್ಸುಲಿನ್ ಅನ್ನು ಉತ್ಪತ್ತಿಯಾಗುತ್ತಿದ್ದರೂ ಕೂಡ, ಅದು ದೇಹದಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ.

ಇದನ್ನೂ ಓದಿ-ಈ ಕಾಯಿಲೆಗಳಿರುವ ಜನರು ಅರಿಶಿಣ ಮಿಶ್ರಿತ ಹಾಲಿನಿಂದ ಅಂತರ ಕಾಯ್ದುಕೊಳ್ಳಬೇಕು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News