ನವದೆಹಲಿ: Covaxin Gets Govt. Approval - ಹೊಸ ವರ್ಷ ಆರಂಭವಾಗುತ್ತಿದ್ದಂತೆ ಭಾರತಕ್ಕೆ ಇಂದು ಎರಡನೇ ಕರೋನಾ ಲಸಿಕೆಯ (India's Second Corona Vaccine) ಉಡುಗೊರೆ ಲಭಿಸಿದೆ. ಶನಿವಾರ, ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಭಾರತ್ ಬಯೋಟೆಕ್ ತಯಾರಿಸಿದ ಸ್ಥಳೀಯ ಲಸಿಕೆ ಕೋವಾಕ್ಸಿನ್‌ನ (Covaxin) ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಇದಕ್ಕೂ ಮುನ್ನ ಶುಕ್ರವಾರ ನಡೆದ ಸಭೆಯಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ (Covishield) ಕರೋನಾ ಲಸಿಕೆಯ ತುರ್ತು ಬಳಕೆಗೆ ಸಮಿತಿ ಅನುಮೋದನೆ ನೀಡಿತ್ತು.


COMMERCIAL BREAK
SCROLL TO CONTINUE READING

ಇದನ್ನು ಓದಿ- COVID 19 Vaccine ವಿತರಣೆಗೆ ಸಿದ್ಧತೆ ದೇಶಾದ್ಯಂತ ಡ್ರೈ ರನ್


100 ರೂ. ಆಸುಪಾಸಿನಲ್ಲಿರಲಿದೆ ಪ್ರತಿ ಡೋಸ್ ಬೆಲೆ
ಮೂಲಗಳಿಂದ ಲಭಿಸಿದ ಮಾಹಿತಿಯ ಪ್ರಕಾರ ವಿಷಯ ತಜ್ಞರ ಸಮಿತಿ (SEC) ಇಂದಿನ ಸಭೆಯಲ್ಲಿ ಭಾರತದ ಸ್ಥಳೀಯ ಕರೋನಾ ಲಸಿಕೆಯ ಶಿಫಾರಸ್ಸು ಮಾಡಿದೆ. ಆದರೆ, ಈ ಕುರಿತಾದ ಅಂತಿಮ ರ್ಧಾರವನ್ನು ಡಿಸಿಜಿಐ (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಮಾತ್ರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದೆ. ಅಂದರೆ, ಡಿಸಿಜಿಐ ಅನುಮೋದನೆಯ ನಂತರ, ಮುಂದಿನ 6-7 ದಿನಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. ಇತರ ಲಸಿಕೆಗಳಿಗೆ ಹೋಲಿಸಿದರೆ ಈ ಲಸಿಕೆ ಅಗ್ಗದ ದರದಲ್ಲಿ ಲಭಿಸಲಿದೆ ಎಂದು ನಂಬಲಾಗಿದೆ. Covaxin ಲಸಿಕೆಯ ಒಂದು ಡೋಸ್ ಬೆಲೆ  100 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇದರ ಪ್ರಕಾರ, ಈ ಲಸಿಕೆಯನ್ನು ದೇಶದ ಎಲ್ಲಾ ಜನರಿಗೆ ಅನ್ವಯಿಸಿದರೆ, ಸರ್ಕಾರದ ಓಟು ವೆಚ್ಚ ಸುಮಾರು 13 ಸಾವಿರ 500 ಗಳಷ್ಟು ಆಗಲಿದೆ.


ಇದನ್ನು ಓದಿ- BIG NEWS: ಸ್ಥಳೀಯ ಲಸಿಕೆ 'Covaxin' ಸುರಕ್ಷಿತ ಮತ್ತು ಪರಿಣಾಮಕಾರಿ ಎಂದ ICMR


ಭಾರತದಲ್ಲಿ ಇದುವರೆಗೆ 4 ವ್ಯಾಕ್ಸಿನ್ ಗಳು ಸಿದ್ಧಗೊಂಡಿವೆ
ಕೋವಿಶೀಲ್ಡ್ ನ ತುರ್ತುಬಳಕೆಗೆ ಅನುಮೋದನೆ ದೊರೆತ ಬಳಿಕ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್, ಖುಷಿ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಾರತ ವಿಶ್ವದ ಏಕೈಕ ದೇಶವಾಗಿದ್ದು, ಇಲ್ಲಿ ಕೊರೊನಾ ವಿರುದ್ಧ ಹೋರಾಡುವ ಒತ್ತು ನಾಲ್ಕು ವ್ಯಾಕ್ಸಿನ್ ಗಳು  ಅಭಿವೃದ್ಧಿಗೊಂಡಿವೆ ಎಂದಿದ್ದಾರೆ. ಈ ನಾಲ್ಕು ವ್ಯಾಕ್ಸಿನ್ ಗಳಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್, ಫೈಜರ್ ಹಾಗೂ ಜೈಡಸ್ ಕ್ಯಾಡಿಲಾ ಶಾಮೀಲಾಗಿವೆ. ಭಾರತ ಬಯೋಟೆಕ್, ನವದೆಹಲಿಯ ICMR ದೆಹಲಿ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿ ಸಹಯೋಗದೊಂದಿಗೆ ತನ್ನ ವ್ಯಾಕ್ಸಿನ್ ತಯಾರಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನು ಓದಿ- 'ಭಾರತದ ಕೊರೊನಾ ಲಸಿಕೆ Covaxin ಜಗತ್ತಿನ ಗಮನ ಸೆಳೆದಿದೆ'


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.