ನವದೆಹಲಿ : ಕೋವಿಡ್ 19 ಲಸಿಕೆಗಾಗಿ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದ್ದು ಸಾಂಕ್ರಾಮಿಕ ಮಹಾಮಾರಿ ಇನ್ನು ಕೆಲವೇ ದಿನಗಳ ಅತಿಥಿಯಾಗಲಿದೆ. ದೇಶದಲ್ಲಿ ಕರೋನ ಯುಗ ಅಂತ್ಯಗೊಳಿಸಲು ಸಿದ್ಧತೆ ನಡೆದಿದೆ. ಹೌದು ಸ್ವದೇಶೀ ನಿರ್ಮಿತ ಲಸಿಕೆ 'ಕೊವಾಕ್ಸಿನ್' ಸಂಪೂರ್ಣವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಐಸಿಎಂಆರ್ ತಿಳಿಸಿದೆ.
ಭಾರತ್ ಬಯೋಟೆಕ್ ಸಹಯೋಗದೊಂದಿಗೆ ಲಸಿಕೆ ತಯಾರಿಸುತ್ತಿರುವ ಐಸಿಎಂಆರ್, ಸ್ಥಳೀಯ ಲಸಿಕೆ ಕೋವಾಕ್ಸಿನ್ ತನ್ನ ಪ್ರಯೋಗಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ ಎಂದು ಹೇಳಿದೆ. ಕೋವಾಕ್ಸಿನ್ (Covaxin) ಸಂಪೂರ್ಣವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ರೋಗನಿರೋಧಕ ಪ್ರೊಫೈಲ್ ಅಭಿವೃದ್ಧಿ ಹೊಂದುತ್ತಿದೆ ಎಂದು ಐಸಿಎಂಆರ್ ಹೇಳುತ್ತದೆ. ಕೊವಾಕ್ಸಿನ್‌ನ ಈ ಫಲಿತಾಂಶಗಳ ಬಗ್ಗೆ ಲ್ಯಾನ್ಸೆಟ್ (Lancet) ಕೂಡ ಅದನ್ನು ತನ್ನ ವರದಿಯಲ್ಲಿ ಪ್ರಕಟಿಸಿದೆ.
India's indigenous vaccine against #COVID19 Covaxin-a product of ICMR-Bharat Biotech collaboration, achieves remarkable feet. Data generated from within India underlines impressive safety & immunogenicity profile of Covaxin & sparks Lancet's interest in publishing them: ICMR pic.twitter.com/jtRkYcM4Ue
— ANI (@ANI) December 24, 2020
ನೀವೂ ಟ್ರಯಲ್ ನಲ್ಲಿ ಪಾಲ್ಗೊಳ್ಳಬಹುದು:
ಕೋವಾಕ್ಸಿನ್ ಲಸಿಕೆಯ ಮೊದಲ ಎರಡು ಹಂತದ ಪ್ರಯೋಗಗಳಲ್ಲಿನ ಫಲಿತಾಂಶಗಳು ಅತ್ಯಂತ ಸಕಾರಾತ್ಮಕವಾಗಿವೆ. ಈಗ ಮೂರನೇ ಹಂತದ (ಕೊವಾಕ್ಸಿನ್ ಮೂರನೇ ಹಂತ) ಪ್ರಯೋಗ ನಡೆಯುತ್ತಿದೆ. ಈ ಕುರಿತಂತೆ ಜಾಹೀರಾತನ್ನು ಬಿಡುಗಡೆ ಮಾಡಿರುವ ಏಮ್ಸ್ ದೆಹಲಿ, ಕರೋನಾ ಲಸಿಕೆಯ (Corona Vaccine) ಪ್ರಯೋಗಕ್ಕಾಗಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಸ್ವಯಂಸೇವಕರನ್ನು ಕೇಳಿಕೊಂಡಿದೆ. ನೋಂದಾಯಿಸುವ ಸ್ವಯಂಸೇವಕರು ಸ್ಥಳೀಯ ಕರೋನಾ ಲಸಿಕೆ 'ಕೊವಾಕ್ಸಿನ್' ನ ಮೂರನೇ ಹಂತದ ಪ್ರಯೋಗದಲ್ಲಿ ಭಾಗವಹಿಸುತ್ತಾರೆ. ಆಸಕ್ತ ಸ್ವಯಂಸೇವಕರು ಡಿಸೆಂಬರ್ 31 ರೊಳಗೆ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಏಮ್ಸ್ ವಾಟ್ಸಾಪ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಸಹ ನೀಡಿದ್ದು ಅಲ್ಲಿಂದ ನೀವು ನೋಂದಾಯಿಸಿಕೊಳ್ಳಬಹುದು. ಜಾಹೀರಾತಿನ ಪ್ರಕಾರ ಲಸಿಕೆಯ ಮೊದಲ ಮತ್ತು ಎರಡನೆಯ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ಪ್ರತಿಕಾಯಗಳು 1 ವರ್ಷ ಉಳಿಯುತ್ತವೆ:
ಕೋವಾಕ್ಸಿನ್ ದೀರ್ಘಕಾಲದವರೆಗೆ ಪ್ರತಿಕಾಯಗಳನ್ನು ತಯಾರಿಸಲು ಸಹಾಯ ಮಾಡುತ್ತದೆ ಎಂದು ಭಾರತ್ ಬಯೋಟೆಕ್ ಬುಧವಾರ ಹೇಳಿದೆ. ಆರು ತಿಂಗಳಿಂದ ಒಂದು ವರ್ಷದವರೆಗೆ ಪ್ರತಿಕಾಯಗಳನ್ನು ತಯಾರಿಸಲು ಲಸಿಕೆ ಸಹಕಾರಿಯಾಗಿದೆ. ಎರಡು ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಕಂಪನಿಯು ಈ ತೀರ್ಮಾನಕ್ಕೆ ಬಂದಿದೆ ಎಂದು ಉಲ್ಲೇಖಿಸಲಾಗಿದೆ.
ಇಂಡಿಯಾ ಬಯೋಟೆಕ್ ಮತ್ತು ಐಸಿಎಂಆರ್ (ICMR) ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ ಪ್ರಸ್ತುತ ನಡೆಯುತ್ತಿದೆ. ಪ್ರಯೋಗದ ಎರಡನೇ ಹಂತದಲ್ಲಿ ಒಟ್ಟು 380 ಆರೋಗ್ಯವಂತ ಮಕ್ಕಳು ಮತ್ತು ವಯಸ್ಕರಿಗೆ ಡೋಸ್ ನೀಡಲಾಗಿದೆ. ಅದರ ಫಲಿತಾಂಶಗಳು ಯಶಸ್ವಿಯಾಗಿವೆ. ಮೊದಲ ಪ್ರಯೋಗದಲ್ಲಿ ಎರಡನೇ ಡೋಸ್ ನಂತರ ಮೂರು ತಿಂಗಳವರೆಗೆ ಜನರಲ್ಲಿ ಪ್ರತಿಕಾಯಗಳು ಕಂಡುಬಂದಿವೆ. ಕೋವಾಕ್ಸಿನ್ ತೆಗೆದುಕೊಂಡ ನಂತರ ಆರರಿಂದ 12 ತಿಂಗಳವರೆಗೆ ಪ್ರತಿಕಾಯಗಳು ಉಳಿಯುತ್ತವೆ ಎಂದು ಕಂಪನಿಯು ತನ್ನ ಸಂಶೋಧನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Good News: ಆಕ್ಸ್‌ಫರ್ಡ್ COVID-19 ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ
ಎಲ್ಲರೊಳಗೆ ಪ್ರತಿಕಾಯಗಳು ರೂಪುಗೊಳ್ಳುತ್ತವೆ:
ಎರಡನೆಯ ಪ್ರಯೋಗದಲ್ಲಿ ಲಸಿಕೆ ಎಲ್ಲಾ ವಯಸ್ಸಿನವರಲ್ಲಿ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ಅಲ್ಲದೆ ಕೋವಿಡ್ ಲಸಿಕೆ (Covid Vaccine) ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ರೀತಿಯ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಲಸಿಕೆಯಿಂದಾಗಿ ಸ್ವಯಂಸೇವಕರ ಮೇಲೆ ಬೇರೆ ಯಾವುದೇ ಗಂಭೀರ ಪರಿಣಾಮ ಉಂಟಾಗಿಲ್ಲ ಎಂದು ಸಂಶೋಧನಾ ಪ್ರಬಂಧದಲ್ಲಿ ತಿಳಿಸಲಾಗಿದೆ. ಜನರಲ್ಲಿ ಅಭಿವೃದ್ಧಿ ಹೊಂದಿದ ಪ್ರತಿಕಾಯವನ್ನು ಕರೋನಾ ವಿರುದ್ಧ ಗೆದ್ದು ಗುಣಮುಖರಾಗಿರುವ ಜನರ ದೇಹದಲ್ಲಿ ಉತ್ಪತ್ತಿಯಾಗಿರುವ ಪ್ರತಿಕಾಯಗಳಿಗೆ ಹೋಲಿಸಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸ್ವದೇಶೀ ಲಸಿಕೆ ಪಡೆದಿದ್ದ ಹರಿಯಾಣ ಸಚಿವ ಅನಿಲ್ ವಿಜ್ ಆರೋಗ್ಯ ಸ್ಥಿರ
ತುರ್ತು ಅನುಮೋದನೆಗೆ ಅರ್ಜಿ:
ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಅದರ ಪ್ರಯೋಗದಲ್ಲಿಯೂ ಇದನ್ನು ಕಾಣಬಹುದು ಎಂದು ಸಂಶೋಧನಾ ಪ್ರಬಂಧದಲ್ಲಿ ಉಲ್ಲೆಖಿಸಲಾಗಿದೆ. ತನ್ನ ಲಸಿಕೆಯನ್ನು ತುರ್ತು ಪರಿಸ್ಥಿತಿಯಾಗಿ ಬಳಸಬಹುದು ಎಂದಿರುವ ಭಾರತ್ ಬಯೋಟೆಕ್ ಮತ್ತೆ ಅರ್ಜಿ ಸಲ್ಲಿಸಿದೆ. ಆದಾಗ್ಯೂ ಕಂಪನಿಯು ಮೂರನೇ ಪ್ರಯೋಗಕ್ಕೆ ಸಂಬಂಧಿಸಿದ ಡೇಟಾವನ್ನು ಮೊದಲು ಪ್ರಸ್ತುತ ಪಡಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.